More

    ಕೇಂದ್ರ ಬಜೆಟ್​ 2020: ಕೇಂದ್ರ ಮಾಹಿತಿ ಆಯೋಗ, ಮಾಹಿತಿ ಹಕ್ಕು ಕಾಯ್ದೆಗೆ 9.90 ಕೋಟಿ ರೂ. ಮೀಸಲು

    ಬೆಂಗಳೂರು: ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಮತ್ತು ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಗೆ ಬಜೆಟ್​ನಲ್ಲಿ ಸರ್ಕಾರ 9.90 ಕೋಟಿ ರೂಪಾಯಿ ಮೀಸಲಿಟ್ಟಿದೆ.

    2019-20ರ ಬಜೆಟ್‌ನಲ್ಲಿ ಸಿಐಸಿ ಹಾಗೂ ಆರ್​ಟಿಐಗೆ 5.5 ಕೋಟಿ ರೂ. ಮೀಸಲಿಡಲಾಗಿತ್ತು. ಈ ಬಾರಿ 9.90 ಕೋಟಿ ರೂಪಾಯಿ ಹಣ ಮೀಸಲಿಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದರು.
    ಕಳೆದ ಬಜೆಟ್​ಗೆ ಹೋಲಿಕೆ ಮಾಡಿದರೆ ಈ ಬಾರಿ ಶೇ.80ರಷ್ಟು ಹಣ ಅಧಿಕವಾಗಿ ಮೀಸಲಿಡಲಾಗಿದೆ. ಕೇಂದ್ರ ಮಾಹಿತಿ ಆಯೋಗದ ಕಚೇರಿ ಕಟ್ಟಡ ನಿರ್ಮಾಣ ಹಾಗೂ ಆರ್​ಟಿಐ ಕಾಯ್ದೆಯ ಪ್ರಚಾರಕ್ಕೆ ಈ ಹಣ ಬಳಕೆ ಮಾಡಲಾಗುವುದು ಎಂದು ಸಚಿವರು ಹೇಳಿದರು.

    ಸಾರ್ವಜನಿಕ ಉದ್ಯಮಗಳ ಆಯ್ಕೆ ಮಂಡಳಿ (ಪಿಇಎಸ್ಬಿ) ಮತ್ತು ಕೇಂದ್ರ ಮಾಹಿತಿ ಆಯೋಗದ ಸ್ಥಾಪನೆಯ ವೆಚ್ಚಕ್ಕೆ ಕೂಡ ಹಣ ನೀಡಲಾಗಿದೆ ಎಂದು ಸಚಿವರು ನುಡಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts