More

    ಭಾರತ ಶುಭಾರಂಭ: 19 ವಯೋಮಿತಿ ವಿಶ್ವಕಪ್ ಟೂರ್ನಿ

    ಬ್ಲೂಮ್ಾಂಟೆನ್ (ದಕ್ಷಿಣ ಆಫ್ರಿಕಾ): ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲೂ ಬಲಿಷ್ಠ ನಿರ್ವಹಣೆ ತೋರಿದ ಹಾಲಿ ಚಾಂಪಿಯನ್ ಭಾರತ ತಂಡ 19 ವಯೋಮಿತಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಕಂಡಿತು. ಮಾಂಗಾವಂಗ್ ಓವೆಲ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಪ್ರಿಯಂ ಗಾರ್ಗ್ ಸಾರಥ್ಯದ ಪಡೆ 90 ರನ್​ಗಳಿಂದ ಶ್ರೀಲಂಕಾ ತಂಡವನ್ನು ಸೋಲಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಸಂಘಟಿತ ಬ್ಯಾಟಿಂಗ್ ಹೋರಾಟದ ಫಲವಾಗಿ 4 ವಿಕೆಟ್​ಗೆ 297 ರನ್ ಗಳಿಸಿತು. ಪ್ರತಿಯಾಗಿ ಶ್ರೀಲಂಕಾ ತಂಡ 45.2 ಓವರ್​ಗಳಲ್ಲಿ 207 ರನ್​ಗಳಿಗೆ ಸರ್ವಪತನ ಕಂಡಿತು.

    ಭಾರತ ತಂಡದ ಪರ ಸಿದ್ದೇಶ್ ವೀರ್ (44*ರನ್, 27 ಎಸೆತ, 6 ಬೌಂಡರಿ, 1 ಸಿಕ್ಸರ್, 34ಕ್ಕೆ 2) ಆಲ್ರೌಂಡ್ ನಿರ್ವಹಣೆ ಮೂಲಕ ಗಮನಸೆಳೆದರು. ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ನಾಯಕ ಪ್ರಿಯಂ ಗಾರ್ಗ್ (56 ರನ್, 74 ಎಸೆತ, 8 ಬೌಂಡರಿ) ಹಾಗೂ ದಿವ್ಯಾಂಶ್ ಸಕ್ಸೆನಾ (23ರನ್, 27 ಎಸೆತ, 3 ಬೌಂಡರಿ) ಜೋಡಿ ಮೊದಲ ವಿಕೆಟ್​ಗೆ 66 ರನ್ ಕಲೆಹಾಕುವ ಮೂಲಕ ಭದ್ರ ಬುನಾದಿ ಹಾಕಿಕೊಟ್ಟಿತು. ಬಳಿಕ ಧ್ರುವ್ ಜುರೆಲ್ (52*) ಹಾಗೂ ಸಿದ್ದೇಶ್ ವೀರ್ ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ತಂಡದ ಮೊತ್ತ ಹಿಗ್ಗಿಸಿದರು. ಬಳಿಕ ಶ್ರೀಲಂಕಾ ತಂಡಕ್ಕೆ ಭಾರತೀಯ ಬೌಲರ್​ಗಳು ಕಡಿವಾಣ ಹಾಕಿದರು. ನಾಯಕ ನಿಪುನ್ ಧನಂಜಯ (50) ಹಾಗೂ ರವಿಂದು ರಸಂತಾ (49) ಹೊರತುಪಡಿಸಿದರೆ ಉಳಿದ ಬ್ಯಾಟ್ಸ್​ಮನ್​ಗಳು ವಿಫಲರಾದರು. ಭಾರತ ತಂಡದ ನಾಯಕ ಪ್ರಿಯಂ ಗಾರ್ಗ್ 8 ಬೌಲರ್​ಗಳನ್ನು ಬಳಿಸಿಕೊಂಡರು. ಪ್ರತಿಷ್ಠಿತ ಟೂರ್ನಿಯಲ್ಲಿ 5ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಭಾರತ ಸುಲಭ ಗೆಲುವಿನೊಂದಿಗೆ ಉತ್ತಮ ಆರಂಭ ಪಡೆಯಿತು.

    ಭಾರತ ತಂಡ: 4 ವಿಕೆಟ್​ಗೆ 297 (ಪ್ರಿಯಂ ಗಾರ್ಗ್ 56, ಯಶಸ್ವಿ ಜೈಸ್ವಾಲ್ 59, ಧ್ರುವ್ ಜುರೆಲ್ 52*, ಸಿದ್ದೇಶ್ ವೀರ್ 44*, ತಿಲಕ್ ವರ್ಮ 46, ಅಶಿಯನ್ ಡೆನಿಯಲ್ 39ಕ್ಕೆ 1). ಶ್ರೀಲಂಕಾ : 45.2 ಓವರ್​ಗಳಲ್ಲಿ 207 (ನಿಪುನ್ ಧನಂಜಯ ಪೆರೇರಾ 50, ರವಿಂದು ರಸಂತಾ 49, ಕಮಿಲ್ ಮಿಶಾರಾ 39, ಅಕಾಶ್ ಸಿಂಗ್ 29ಕ್ಕೆ 2, ಸಿದ್ದೇಶ್ ವೀರ್ 34ಕ್ಕೆ 2, ರವಿ ಬಿಷ್ಣೋಯಿ 44ಕ್ಕೆ 2).

    ಮುಂದಿನ ಎದುರಾಳಿ : ಜಪಾನ್ ಯಾವಾಗ : ಮಂಗಳವಾರ (ಜ.21).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts