More

    ಕಿವೀಸ್ ಪ್ರವಾಸಕ್ಕೆ ಯುವ ಹರಿಣ ಪಡೆ: ಟೆಸ್ಟ್ ಪಂದ್ಯವನ್ನೇ ಆಡದ ಆಟಗಾರನಿಗೆ ನಾಯಕತ್ವ ನೀಡಿದ ದಕ್ಷಿಣ ಆಫ್ರಿಕಾ!

    ಜೊಹಾನ್ಸ್‌ಬರ್ಗ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ 3ನೇ ಆವೃತ್ತಿಯ ಭಾಗವಾಗಿರುವ ನ್ಯೂಜಿಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ ಪ್ರವಾಸಿ ದಕ್ಷಿಣ ಆಫ್ರಿಕಾ 14 ಯುವ ಆಟಗಾರರ ತಂಡವನ್ನು ಆಯ್ಕೆ ಮಾಡಿದ್ದು, ಇದುವರೆಗೆ ರಾಷ್ಟ್ರೀಯ ತಂಡದ ಪರ ಒಂದೂ ಪಂದ್ಯವನ್ನಾಡದ ಆಲ್ರೌಂಡರ್ ನೀಲ್ ಬ್ರಾಂಡ್ ಅವರನ್ನು ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಜತೆಗೆ ಇನ್ನೂ 6 ಹೊಸಮುಖಗಳು ಅವಕಾಶ ಪಡೆದಿವೆ.

    1995ರ ಬಳಿಕ ಪದಾರ್ಪಣೆ ಪಂದ್ಯದಲ್ಲಿಯೇ ತಂಡವನ್ನು ಮುನ್ನಡೆಸಲಿರುವ ಮೊದಲ ಆಟಗಾರ ಎಂಬ ಅವಕಾಶವೂ ನೀಲ್ ಬ್ರಾಂಡ್‌ಗೆ ಒಲಿದಿದೆ. 1995ರಲ್ಲಿ ನ್ಯೂಜಿಲೆಂಡ್‌ನ ಲೀ ಜರ್ಮನ್ ಮೊದಲ ಪಂದ್ಯದಲ್ಲಿ ನಾಯಕನಾಗಿ ಆಡಿದ್ದರು. ಪ್ರಸ್ತುತ ಭಾರತ ವಿರುದ್ಧ ಸರಣಿಯಲ್ಲಿ ಆಡುತ್ತಿರುವ 3 ಆಟಗಾರರಾದ ಕೀಗನ್ ಪೀಟರ್ಸೆನ್, ಡೇವಿಡ್ ಬೆಡಿಂಗ್‌ಹ್ಯಾಮ್ ಹಾಗೂ ಜುಬೇರ್ ಹಂಜಾ ಮಾತ್ರ ಕಿವೀಸ್ ಪ್ರವಾಸಕ್ಕೆ ಸ್ಥಾನ ಪಡೆದಿದ್ದಾರೆ.

    27 ವರ್ಷದ ಬ್ರಾಂಡ್ 51 ಪ್ರಥಮ ದರ್ಜೆ ಪಂದ್ಯಗಳಲ್ಲಿ 2,906 ರನ್ ಕಲೆಹಾಕಿದ್ದು, 72 ವಿಕೆಟ್ ಕಬಳಿಸಿದ್ದಾರೆ. ಪ್ರಸ್ತುತ ಟೀಮ್ ಇಂಡಿಯಾ ವಿರುದ್ಧ ಸರಣಿಯಲ್ಲಿ ಆಡುತ್ತಿರುವ ಆಟಗಾರರು ಜನವರಿಯಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ಟಿ20 ಲೀಗ್ ‘ಎಸ್‌ಎ ಟಿ20’ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದು. ಕಿವೀಸ್ ಪ್ರವಾಸ ಹಾಗೂ ್ರಾಂಚೈಸಿ ಟೂರ್ನಿ ನಡುವಿನ ಘರ್ಷಣೆ ತಪ್ಪಿಸಲು ದ.ಆಫ್ರಿಕಾ ಕ್ರಿಕೆಟ್ ಮಂಡಳಿ, ಯುವ ಆಟಗಾರರಿಗೆ ಅವಕಾಶ ನೀಡಿದೆ. 15 ಟೆಸ್ಟ್ ಆಡಿರುವ ಡುವಾನ್ನೆ ಒಲಿವರ್ ತಂಡದ ಅನುಭವಿ ಆಟಗಾರ ಎನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts