More

    ಕೂಡಲೇ ಅನಧಿಕೃತ ಮದರಸಾ ಮುಚ್ಚದಿದ್ದರೆ ದಂಡ!

    ಲಖನೌ: ಅನಧಿಕೃತ ಮದರಸಾಗಳನ್ನು ಮುಚ್ಚದಿದ್ದರೆ ದೈನಿಕ 10,000 ರೂಪಾಯಿ ದಂಡ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಸಿ ಮುಜಾರ್​ನಗರ್​ ಜಿಲ್ಲೆಯ ಮದರಸಾಗಳಿಗೆ ಉತ್ತರ ಪ್ರದೇಶ ಸರ್ಕಾರ ನೋಟಿಸ್​ ಜಾರಿ ಮಾಡಿದೆ.

    ರಾಜ್ಯದಲ್ಲಿನ ಮದರಸಾಗಳಿಗೆ ವಿದೇಶಿ ನೆರವು ಹರಿದು ಬರುತ್ತಿರುವ ಬಗ್ಗೆ ತನಿಖೆಗೆ ವಿಶೇಷ ತಂಡ ರಚಿಸಿದ ಬೆನ್ನಲ್ಲೇ ಸರ್ಕಾರ ನೋಂದಾವಣೆಯಾಗದ ಅಥವಾ ಅನಧಿಕೃತ ಮದರಸಾಗಳ ವಿರುದ್ಧ ಕ್ರಮವನ್ನು ತೀವ್ರಗೊಳಿಸಿದೆ. ಅಗತ್ಯ ದಾಖಲೆಪತ್ರ ಸಲ್ಲಿಸಲು ಮುಜಾರ್​ನಗರ್​ ಜಿಲ್ಲೆಯ ಮದರಸಾಗಳ ಅಧಿಕಾರಿಗಳಿಗೆ ನೀಡಿರುವ ನೋಟಿಸ್​ನಲ್ಲಿ ಸೂಚಿಸಲಾಗಿದೆ.

    ಮುಜಾರ್​ನಗರ್​ ಜಿಲ್ಲೆಯೊಂದರಲ್ಲೇ 100ಕ್ಕೂ ಹೆಚ್ಚು ಮದರಸಾಗಳು ಸೂಕ್ತ ದಾಖಲೆಗಳಿಲ್ಲದೆ ಕಾರ್ಯಾಚರಿಸುತ್ತಿರುವುದನ್ನು ಜಿಲ್ಲಾಡಳಿತ ಗುರುತಿಸಿದೆ. ಅಂಥ 12 ಮದರಸಾಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಸರ್ಕಾರ, ತಕ್ಷಣವೇ ಅವುಗಳನ್ನು ಮುಚ್ಚದಿದ್ದರೆ ಪ್ರತಿ ದಿನಕ್ಕೆ 10,000 ರೂಪಾಯಿ ದಂಡ ವಿಧಿಸುವುದಾಗಿ ಎಚ್ಚರಿಸಿದೆ.

    ಮಂಡಳಿ ಅಧ್ಯಕ್ಷರ ಸ್ಪಷ್ಟನೆ

    ಅಲ್ಪಸಂಖ್ಯಾತ ಇಲಾಖೆ ಮಾತ್ರವೇ ಮದರಸಾಗಳ ವ್ಯವಹಾರದಲ್ಲಿ ಮಧ್ಯಪ್ರವೇಶ ಮಾಡಬಹುದು. ಸರ್ಕಾರವಾಗಲೀ ಶಿಕ್ಷಣ ಇಲಾಖೆಯಾಗಲೀ ಮಧ್ಯಪ್ರವೇಶ ಮಾಡುವಂತಿಲ್ಲ ಎಂದು ಉತ್ತರ ಪ್ರದೇಶ ಮದರಸಾ ಮಂಡಳಿ ಅಧ್ಯಕ್ಷ ಇಫ್ತಿಕಾರ್​ ಅಹಮದ್​ ಹೇಳಿದ್ದಾರೆ. ಸರ್ಕಾರ ನೋಟಿಸ್​ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಮದರಸಾಗಳು ಸಾಂಪ್ರದಾಯಿಕ ಶಿಕ್ಷಣ ಸಂಸ್ಥೆಗಳಿಗಿಂತ ಭಿನ್ನವಾಗಿರುವುದರಿಂದ ಇತರ ಶಿಕ್ಷಣ ಸಂಸ್ಥೆಗಳಿಗೆ ವಿಧಿಸುವ ನಿಯಮ ಮತ್ತು ದಂಡಗಳು ಅನ್ವಯವಾಗುವುದಿಲ್ಲ ಎಂದು ಅಹಮದ್​ ಪ್ರತಿಪಾದಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts