More

    ಮುಗಿಯುತ್ತ ಬಂತು ಅರ್ಧ ಶೈಕ್ಷಣಿಕ ವರ್ಷ; ನರ್ಸರಿ ಬಳಿಕ ಮುಚ್ಚುವ ಭೀತಿಯಲ್ಲಿವೆಯೇ ಖಾಸಗಿ ಶಾಲೆಗಳು?

    ನವದೆಹಲಿ: ದೇಶಾದ್ಯಂತ ಮೊದಲ ಹಂತದ ಲಾಕ್​ಡೌನ್​ ಮುಗಿದು ಶಿಕ್ಷಣ ಸಂಸ್ಥೆಗಳ ಪುನಾರಂಭದ ಸುಳಿವೇ ಇಲ್ಲದಿದ್ದಾಗ ನರ್ಸರಿ ಶಾಲೆಗಳು ಕೂಗೆಬ್ಬಿಸಿದ್ದವು. ಈ ಶೈಕ್ಷಣಿಕ ವರ್ಷದ ಮಟ್ಟಿಗಂತೂ ನರ್ಸರಿ ಶಾಲೆಗಳು ಶಾಶ್ವತವಾಗಿಯೇ ಮುಚ್ಚಿದಂತಾಗಿವೆ. ಈಗ ಇನ್ನುಳಿದ ಖಾಸಗಿ ಶಾಲೆಗಳು ಮುಚ್ಚುವ ಭೀತಿ ಎದುರಿಸುತ್ತಿವೆ ಎಂದೇ ಹೇಳಲಾಗುತ್ತಿದೆ.

    ಇನ್ನು ಸೆಪ್ಟೆಂಬರ್​ನಿಂದ ಶಿಕ್ಷಣ ಸಂಸ್ಥೆಗಳ ಪುನರಾರಂಭಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಲಾಗುತ್ತಿದ್ದರೂ, ಕೋವಿಡ್​ ಪ್ರಕರಣಗಳು ಹೆಚ್ಚಿರುವ ರಾಜ್ಯಗಳಲ್ಲಿ, ಆಯಾ ರಾಜ್ಯ ಸರ್ಕಾರಗಳು ಇದಕ್ಕೆ ಅವಕಾಶ ನೀಡುವುದು ಅಸಾಧ್ಯವೇ ಸರಿ. ಏಕೆಂದರೆ, ಈ ವಿಚಾರದಲ್ಲಿ ಅಂತಿಮವಾಗಿ ರಾಜ್ಯ ಸರ್ಕಾರಗಳೇ ತೀರ್ಮಾನ ಕೈಗೊಳ್ಳಬೇಕಿದೆ.

    ಹೀಗಿರುವಾಗ ಸೀಮಿತ ಆದಾಯದಲ್ಲಿ ಖಾಸಗಿ ಶಾಲೆಗಳು ಬದುಕುಳಿಯಲಿವೆ ಎಂಬ ಪ್ರಶ್ನೆಗಳು ಎದುರಾಗಿವೆ. ಬಹುತೇಕ ಶಾಲೆಗಳು ಆನ್​ಲೈನ್​ನಲ್ಲಿ ತರಗತಿಗಳನ್ನು ನಡೆಸುತ್ತಿದ್ದರೂ, ಶೇ.30 ಪಾಲಕರಷ್ಟೇ ಮಕ್ಕಳ ಪ್ರವೇಶ ಶುಲ್ಕ ಪಾವತಿಸಿದ್ದಾರೆ. ಇದರಿಂದ ಶಿಕ್ಷಕರು, ಸಿಬ್ಬಂದಿ ಸಂಬಳ, ಕಟ್ಟಡ ಬಾಡಿಗೆ ಮೊದಲಾದವುಗಳನ್ನು ನಿರ್ವಹಿಸುವುದು ಕಷ್ಟವಾಗಿದೆ ಎನ್ನುತ್ತಾರೆ ಮಧ್ಯಪ್ರದೇಶದ ಖಾಸಗಿ ಶಾಲೆಗಳ ಒಕ್ಕೂಟದ ವಿನಯ್​ರಾಜ್​ ಮೋದಿ.

    ಇದನ್ನೂ ಓದಿ; ಶಾಲಾ- ಕಾಲೇಜು ಮರು ಆರಂಭ; ವಿದೇಶಗಳಲ್ಲಿ ಅನುಸರಿಸುತ್ತಿರುವ ಮುಂಜಾಗ್ರತೆಗಳೇನು? 

    ಕಟ್ಟಡ ನಿರ್ಮಾಣಕ್ಕೆ ಮಾಡಿದ ಸಾಲ, ವಾಹನಗಳ ನಿರ್ವಹಣೆ, ಸಿಬ್ಬಂದಿ ವೇತನ ಮೊದಲಾದವುಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಇನ್ನು ಮೂರು ತಿಂಗಳಲ್ಲಿ ಶಾಲೆಗಳು ಆರಂಭವಾಗದಿದ್ದಲ್ಲಿ ದೇಶಾದ್ಯಂತ ಬಹುತೇಕ ಶಿಕ್ಷಣ ಸಂಸ್ಥೆಗಳು ದಿವಾಳಿಯಾಗಲಿವೆ. ಶಾಶ್ವತವಾಗಿ ಬಾಗಿಲು ಹಾಕಲಿವೆ ಎನ್ನುತ್ತದೆ ಉತ್ತರಪ್ರದೇಶ ಖಾಸಗಿ ಶಾಲೆಗಳ ಒಕ್ಕೂಟ.

    ಸೆಂಟ್ರಲ್​ ಸ್ಕ್ವೇರ್​ ಫೌಂಡೇಷನ್​ (ಸಿಎಸ್​ಎಫ್​) ಮಾಹಿತಿ ಪ್ರಕಾರ ಖಾಸಗಿ ಶಾಲೆಗಳ ಪೈಕಿ ಶೇ.70ಕ್ಕೂ ಅಧಿಕ ಶಾಲೆಗಳಲ್ಲಿ ತಿಂಗಳಿಗೆ ಒಂದು ಸಾವಿರಕ್ಕೂ ಕಡಿಮೆ ಶುಲ್ಕ ವಿಧಿಸಲಾಗುತ್ತದೆ. ಜತೆಗೆ, ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಬದಲಾವಣೆ ಕಂಡುಬರುತ್ತಿದೆ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಏರಿಕೆಯಾಗುತ್ತಿದೆ. ಇದು ಕೂಡ ಖಾಸಗಿ ಶಾಲೆಗಳೀಗೆ ಭಾರಿ ಹೊಡೆತ ನೀಡಿದೆ ಎಂದು ಸಿಎಸ್​ಎಫ್​ ಹೇಳಿದೆ.

    ಇದನ್ನೂ ಓದಿ; 56 ಕೋಟಿ ರೂ. ಬಿಡುಗಡೆ ಮಾಡಿದ್ರೂ ದೆಹಲಿ ವಿವಿ ಸಿಬ್ಬಂದಿಗೆ ಸಂಬಳ ಪಾವತಿ ಏಕಾಗುತ್ತಿಲ್ಲ? ಸಿಸೋಡಿಯಾ ಬಿಚ್ಚಿಟ್ಟ ಸ್ಫೋಟಕ ಮಾಹಿತಿ 

    ಇನ್ನೊಂದೆಡೆ ಪ್ರತಿಷ್ಠಿತ ಸಂಸ್ಥೆಗಳಿಗೆ ಈ ಖಾಸಗಿ ಅನುದಾನರಹಿತ ಶಾಲೆಗಳು ಪೈಪೋಟಿ ನೀಡಲಾಗುತ್ತಿಲ್ಲ. ಕರೊನಾ ಸಂಕಷ್ಟದಿಂದಾಗಿ ಆನ್​ಲೈನ್​ ತರಗತಿ ಹಾಗೂ ಡಿಜಿಟಲ್​ ವೇದಿಕೆಗಳು ಅನಿವಾರ್ಯ ಎನಿಸಿವೆ. ಇವುಗಳನ್ನು ಹೊಂದಿ ಪ್ರತಿಷ್ಠಿತ ಶಾಲೆಗಳು ವಿದ್ಯಾರ್ಥಿಗಳನ್ನು ಆಕರ್ಷಿಸಿದರೆ, ಉಳಿದವು ಹಿಂದೆ ಬಿದ್ದಿವೆ ಎಂದು ವರದಿ ವಿಶ್ಲೇಷಿಸಿದೆ.

    ಕಡಿಮೆ ಶುಲ್ಕದ ಶಾಲೆಗಳಲ್ಲಿ ಓದುವ ಮಕ್ಕಳು ಈ ಡಿಜಿಟಲ್​ ಕ್ರಾಂತಿಗೆ ಇನ್ನಷ್ಟೇ ಹೊಂದಿಕೊಳ್ಳಬೇಕಿದೆ. ಗೂಗಲ್​ ಕ್ಲಾಸ್​ರೂಮ್​ಗಳು ಶ್ರೀಮಂತ ಶಾಲೆಗಳ ಸೌಲಭ್ಯ ಎನಿಸಿಕೊಂಡಿದ್ದರೆ, ಶೇ.66ಕ್ಕೂ ಹೆಚ್ಚು ಖಾಸಗಿ ಶಾಲೆಗಳು ಆನ್​ಲೈನ್​ ಪಾಠಕ್ಕೆ ವಾಟ್ಸ್ಯಾಪ್​ಅನ್ನೇ ಅವಲಂಬಿಸಿವೆ.

    ದೇಶದಲ್ಲಿ ಶಾಲೆಗೆ ಹೋಗುವ ಜನಸಂಖ್ಯೆಗೆ ಹೋಲಿಸಿದಲ್ಲಿ ಶೇ.50ಕ್ಕೂ ಹೆಚ್ಚು ಮಕ್ಕಳು ಖಾಸಗಿ ಶಾಲೆಗಳಲ್ಲಿಯೇ ಓದುತ್ತಿದ್ದಾರೆ. ಅಂದರೆ 12 ಕೋಟಿಗಿಂತಲೂ ಹೆಚ್ಚು ಮಕ್ಕಳು ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ದೇಶದ ಆರ್ಥಿಕತೆಗೆ ಖಾಸಗಿ ಶಾಲೆಗಳ ಕೊಡುಗೆ ಅಂದಾಜು 1.75 ಕೋಟಿ ರೂ. ಆಗಿದೆ ಎಂದು ಅಂದಾಜಿಸಲಾಗಿದೆ.

    ಸೆ.1ರಿಂದ ಶಾಲಾ- ಕಾಲೇಜು ಆರಂಭ ಪ್ರಕ್ರಿಯೆ; ಅರ್ಧದಷ್ಟು ಮಕ್ಕಳು, ಶಿಕ್ಷಕರಿಗಷ್ಟೇ ಅವಕಾಶ; ಹೀಗಿರಲಿದೆ ಮಾರ್ಗಸೂಚಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts