More

    ಸಹಕಾರಿ ಸಂಸ್ಥೆಯ ಸಾಲ ಬಾಧೆ ತಾಳಲಾರದೆ ವಿಷ ಸೇವಿಸಿ ಪ್ರಾಣ ಬಿಟ್ಟ ರೈತ

    ವಿಟ್ಲ (ದ.ಕ): ಸಹಕಾರಿ ಸಂಸ್ಥೆಯ ಸಾಲ ಬಾಧೆ ತಾಳಲಾರದೆ ರೈತರೊಬ್ಬರು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇಡ್ಕಿದುವಿನಲ್ಲಿ ಮಾ.16ರಂದು ನಡೆದಿದೆ. ಇಡ್ಕಿದು ಬಂಗೇರಕೋಡಿ ನಿವಾಸಿ ವೀರಪ್ಪ ಗೌಡ (೫೫) ಮೃತ ವ್ಯಕ್ತಿ. ಇದನ್ನೂ ಓದಿ: ಹಿಂದುತ್ವದ ಬಗ್ಗೆ ಅವಹೇಳನ; ನಟ ಚೇತನ್ ಬಂಧನ

    ಇಡ್ಕಿದು ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ಸಾಲವನ್ನು ತೆಗೆದುಕೊಂಡಿದ್ದು, ಸಾಲವನ್ನು ಮರುಪಾವತಿಸುವಂತೆ ಸೊಸೈಟಿಯಿಂದ ನೋಟೀಸ್ ಬಂದಿರುವುದಲ್ಲದೇ ಹಲವು ಬಾರಿ ಸೊಸೈಟಿಯ ಮ್ಯಾನೇಜರ್ ಹಾಗೂ ಸಿಬ್ಬಂದಿಗಳು ಸಾಲವನ್ನು ಕಟ್ಟದಿದ್ದರೆ ಜಮೀನು ಹರಾಜು ಮಾಡುತ್ತಿದ್ದುದರಿಂದ ಮಾನಸಿಕವಾಗಿ ನೊಂದು ಮನೆಯ ಪಕ್ಕದ ಜಾಗದಲ್ಲಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪುತ್ರ ನೀಡಿದ ದೂರಿನ ಪ್ರಕಾರ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿ: ರೈಲು ನಿಲ್ದಾಣದ ಟಿ.ವಿ ಪರದೆಯಲ್ಲಿ ಪ್ರದರ್ಶನವಾದ ನೀಲಿ ಚಿತ್ರ; ಮುಜುಗರಕ್ಕೊಳಗಾದ ಪ್ರಯಾಣಿಕರು

    ಕೃಷಿ ಅಭಿವೃದ್ಧಿ ಸಾಲವನ್ನು ಪಡೆದ ರೈತನಿಗೆ ಸಾಲ ಮರುಪಾವತಿಸುವಂತೆ ನಿರಂತರ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮೃತ ರೈತ ಸಾಲವನ್ನು ಸಂಪೂರ್ಣ ಮನ್ನಾ ಮಾಡುವ ಜತೆಗೆ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಬೇಕು. ಇಡ್ಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ವಜಾ ಮಾಡಬೇಕು ಮತ್ತು ಆಡಳಿತ ಮಡಳಿಯನ್ನು ತಕ್ಷಣ ಬರ್ಕಾಸ್ತುಗೊಳಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಆಗ್ರಹಿಸಿದೆ.

    ಇದನ್ನೂ ಓದಿ: ಆಟೋ ರಿಕ್ಷಾದಲ್ಲಿ ಅಶ್ಲೀಲ ಕೃತ್ಯಗಳಿಗೆ ಆಕ್ಷೇಪಿದ್ದಕ್ಕೆ ಚಾಲಕನನ್ನೇ ಹತ್ಯೆ ಮಾಡಿದ ಪ್ರೇಮಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts