More

    ಐಪಿಎಲ್ ಅಂಪೈರ್ ಕೇಶರಾಶಿಗೆ ಕ್ರಿಕೆಟ್ ಪ್ರೇಮಿಗಳಿಂದ ಭಾರಿ ಟ್ರೋಲ್!

    ಬೆಂಗಳೂರು: ಐಪಿಎಲ್ ಟೂರ್ನಿ ಭಾನುವಾರ 3 ಸೂಪರ್ ಓವರ್‌ಗಳಿಗೆ ಸಾಕ್ಷಿಯಾಗುವ ಮೂಲಕ ಇತಿಹಾಸ ನಿರ್ಮಿಸಿತು. ಇದೇ ವೇಳೆ ಸನ್‌ರೈಸರ್ಸ್‌-ಕೆಕೆಆರ್ ನಡುವೆ ಅಬುಧಾಬಿಯಲ್ಲಿ ನಡೆದ ದಿನದ ಮೊದಲ ಪಂದ್ಯದಲ್ಲಿ ಕಾರ್ಯನಿರ್ವಹಿಸಿದ ಅಂಪೈರ್ ಕೂಡ ಸಾಕಷ್ಟು ಗಮನಸೆಳೆದರು. ಇದಕ್ಕೆ ಕಾರಣ ಅವರ ಕೇಶರಾಶಿ! ಈ ಅಂಪೈರ್ ಹೆಸರು ಪಶ್ಚಿಮ್ ಪಾಠಕ್.

    ಪಂದ್ಯದಲ್ಲಿ ಕಾರ್ಯನಿರ್ವಹಿಸಲು ಪಶ್ಚಿಮ್ ಪಾಠಕ್ ಮೈದಾನಕ್ಕಿಳಿದಾಗ ಹೆಚ್ಚಿನ ಕ್ರಿಕೆಟ್ ಪ್ರೇಮಿಗಳು, ಇದೇ ಮೊದಲ ಬಾರಿಗೆ ಮಹಿಳಾ ಅಂಪೈರ್ ಒಬ್ಬರು ಐಪಿಎಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದೇ ಭಾವಿಸಿದ್ದರು. ಕೊನೆಗೆ ಅದು ಹುಡುಗಿಯಲ್ಲ, ಹುಡುಗ ಎಂದಾಗ ಅವರ ಕೇಶರಾಶಿಗೆ ಮನಸೋತಿದ್ದರು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಪಶ್ಚಿಮ್ ಪಾಠಕ್ ಅವರ ಕೇಶರಾಶಿ ಸಾಕಷ್ಟು ಟ್ರೋಲ್‌ಗಳಿಗೂ ಒಳಗಾಗಿದೆ.

    ಮುಂಬೈ ಮೂಲದವರಾದ 43 ವರ್ಷದ ಪಶ್ಚಿಮ್ ಪಾಠಕ್ 2014ರಿಂದಲೂ ಐಪಿಎಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 2009ರಿಂದ ದೇಶೀಯ ಕ್ರಿಕೆಟ್‌ನಲ್ಲಿ ಕಾರ್ಯನಿರ್ವಹಿಸಿದ್ದು, ಭಾರತ ತಂಡದ 2 ಟೆಸ್ಟ್ ಮತ್ತು 3 ಏಕದಿನಗಳಿಗೆ ಮೀಸಲು ಅಂಪೈರ್ ಕೂಡ ಆಗಿದ್ದರು. ಹೆಲ್ಮೆಟ್ ಧರಿಸಿ ಅಂಪೈರಿಂಗ್ ಕೆಲಸ ನಿರ್ವಹಿಸಿದ ಭಾರತದ ಮೊದಲ ಅಂಪೈರ್ ಎಂಬ ಹೆಗ್ಗಳಿಕೆಯೂ ಅವರದಾಗಿದೆ. ಈ ಬಾರಿ ಅವರು ಉದ್ದನೆಯ ಕೂದಲಿನಿಂದ ಕ್ರಿಕೆಟ್ ಪ್ರೇಮಿಗಳ ಗಮನಸೆಳೆದಿದ್ದಾರೆ.

    ಅಂಪೈರ್ ಪಶ್ಚಿಮ್ ಪಾಠಕ್ ಅವರ ಉದ್ದನೆಯ ಕೂದಲು ಹುಡುಗಿಯರನ್ನೂ ನಾಚಿಸುವಂತಿದೆ ಹಲವು ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಹಾಕಿದ್ದಾರೆ. ಇನ್ನು ಕೆಲವರು ಅವರನ್ನು ‘ರಾಕ್‌ಸ್ಟಾರ್’, ‘ಬಾಬಿ ಡಿಯೋಲ್’ ಎಂದು ಕರೆದಿದ್ದಾರೆ. ಡಿಜೆ ಒಬ್ಬರು ಅರೆಕಾಲಿಕ ಅಂಪೈರಿಂಗ್‌ಗೆ ಬಂದಂತಿದೆ ಎಂದು ಇನ್ನೂ ಕೆಲವರು ಕಾಲೆಳೆದಿದ್ದಾರೆ.

    ಸೊನ್ನೆಗೆ ಔಟಾಗಿ ಹೋಗಿ ಊಟಕ್ಕೆ ಕುಳಿತ ಪೃಥ್ವಿ ಷಾ! ಭಾರಿ ಟ್ರೋಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts