More

    ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಉಮೇಶಗೌಡ ಪಾಟೀಲ

    ಗದಗ:
    ಕಾಂಗ್ರೆಸ್​ ಪದ ಗ್ಯಾರಂಟಿ ಕಾರ್ಡ್​ ಯೋಜನೆಗಳ ಪ್ರಭಾವ ಹಾಗೂ ಕಾಂಗ್ರೆಸ್​ ಪರ ಅಲೆಯ ನಡುವೆಯೂ ನರಗುಂದ ಮತೇತ್ರದ ಮತದಾರರ ಆಶೀರ್ವಾದದಿಂದ ಸಿ.ಸಿ. ಪಾಟೀಲ ಅವರನ್ನು ಪುನರಾಯ್ಕೆ ಮಾಡಿದ ಶ್ರೇಯ ತಮಗೆ ಸಲ್ಲುತ್ತದೆ ಎಂದು ಬಿಜೆಪಿ ಯುವ ಮುಖಂಡ ಉಮೇಶಗೌಡ ಪಾಟೀಲ ಹೇಳಿದರು.
    ಗದಗ ತಾಲೂಕಿನ ಹಾಗೂ ನರಗುಂದ ವಿಧಾನಸಭಾ ೇತ್ರದ ನರಸಾಪೂರ ಗ್ರಾಮದ ಖಾದಿ ನಗರದ ವರಸಿದ್ಧಿ ವಿನಾಯಕ ದೇವಸ್ಥಾನದ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕೃತಜ್ಞತೆ ಸಲ್ಲಿಸುವ ಸಭೆಯಲ್ಲಿ ಅವರು ಮಾತನಾಡಿದರು.
    ಕಳೆದ ಅವಧಿಯಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಸಿ.ಸಿ. ಪಾಟೀಲ ಅವರು ನರಗುಂದ ಮತೇತ್ರದ ಸಮಗ್ರ ಅಭಿವೃದ್ಧಿಗೆ 2000 ಕೋಟಿ ರೂ. ಅಧಿಕ ವೆಚ್ಚದಲ್ಲಿ ಕಾಮಗಾರಿಗಳನ್ನು ನಡೆಸಲಾಗಿದೆ. ಅರ್ಧಕ್ಕೆ ನಿಂತ ಕಾಮಗಾರಿಗಳನ್ನು ರ್ಪೂಣಗೊಳಿಸಿ, ಗ್ರಾಮದ ಜನರ ಬೇಡಿಕೆಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
    ವಿಧಾನಸಭೆ ಚುನಾವಣೆ ಬೆನ್ನಲ್ಲೆ ಜಿಲ್ಲಾ ಪಂಚಾಯತ್​, ತಾಲೂಕು ಪಂಚಾಯತ್​ ಹಾಗೂ ನಂತರ ಲೋಕಸಭೆ ಚುನಾವಣೆಯಿದ್ದು ಬಿಜೆಪಿ ಅಭ್ಯಥಿರ್ಗಳಿಗೆ ಬೆಂಬಲವಾಗಿ ನಿಲ್ಲುತ್ತಿರೆಂಬ ವಿಶ್ವಾಸವಿದೆ ಎಂದು ಹೇಳಿದರು.
    ಹಾತಲಗೇರಿ ಗ್ರಾಪಂ ಉಪಾಧ್ಯ ಶಿವು ಕರಿಗೌಡ್ರ, ಸದಸ್ಯರಾದ ಜಂಬಣ್ಣ ಕಲಬುರಗಿ, ನಿರ್ಮಲಾ ಕರಿಗೌಡ್ರ, ಖಾದಿ ನಗರದ ಹಿತರಣಾ ಸಮೀತಿ ಅಧ್ಯರಾದ ಕೆ.ಎಸ್​. ಹಿರೇಮಠ, ಉಪಾಧ್ಯ ಶಿವಪುತ್ರಪ್ಪ ರ್ಗುಲಹೊಸೂರ, ಮುಖಂಡರಾದ ಮಲ್ಲಿಕಾರ್ಜುನ ದೊಡ್ಡಮನಿ, ಈಶ್ವರ, ನಾಗೇಶ ಸಜ್ಜಿ, ಸೌಮ್ಯ ಕೆರಕನವರ, ಶೋಭಾ ಹಿರೇಮಠ ಹಲವರಿದ್ದರು.

    ಬಾಕ್ಸ್​:
    ಸಮರ್ಪಕ ಕುಡಿಯುವ ನೀರು ಪೂರೈಸುವ ಭರವಸೆ:
    ಖಾದಿ ನಗರದಲ್ಲಿ ಕುಡಿಯುವ ನೀರು ಪೂರೈಕೆ ಇಲ್ಲದ ಕಾರಣ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕುಡಿಯುವ ನೀರು ಪೂರೈಕೆಗೆ ಓವರ್​ ಹೆಡ್​ ಟ್ಯಾಂಕ್​ ನಿಮಿರ್ಸುವಂತೆ ಕ್ರಮ ಕೈಗೊಳ್ಳುವಂತೆ ಮಹಿಳೆಯರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಉಮೇಶಗೌಡ ಪಾಟೀಲ ಅವರು ಶ್ರೀದಲ್ಲೆ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts