More

    ನೆರೆಪೀಡಿತ ಹೊಲ, ಮನೆಗಳಿಗೆ ಜಿಪಂ ಅಧ್ಯಕ್ಷೆ ಭೇಟಿ

    ರೇವತಗಾಂವ: ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೈಜೋಡಿಸಿದರೆ ಇಡೀ ಜಿಲ್ಲೆಯನ್ನು ಬಯಲು ಶೌಚಮುಕ್ತಗೊಳಿಸಬಹುದು ಎಂದು ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಹೇಳಿದರು.
    ಪ್ರವಾಹ ಪೀಡಿತ ಉಮರಜ ಗ್ರಾಮದಲ್ಲಿ ವಾಸ್ತವ್ಯ ಹೂಡಿದ ಅವರು ಭಾರತ ಮಿಷನ್(ಗಾ) ಯೋಜನೆಯಡಿ ಗ್ರಾಮದ ಬೀರಪ್ಪನಗರದಲ್ಲಿ ಮಂಗಳವಾರ ಬೆಳಗಿನ ಜಾವ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಗ್ರಾಮದಲ್ಲಿ ಶೌಚಗೃಹ ಹೊಂದಿರುವವ ಮನೆ-ಮನೆಗೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸಿದರು. ಶೌಚಗೃಹಗಳ ಬಳಕೆ ಹಾಗೂ ಸ್ವಚ್ಛತೆ ಕುರಿತು ತಿಳಿವಳಿಕೆ ನೀಡಿದರು.
    ನೆರೆಯಿಂದ ಹಾನಿಗೊಳಗಾದ ಹಳೇ ಭಂಡಾರಕವಟೆ ರಸ್ತೆಯಲ್ಲಿರುವ ಹೊಲ-ಗದ್ದೆಗಳಲ್ಲಿ ವಾಸವಾಗಿರುವ ಕುಟುಂಬಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರ ಕುಂದುಕೊರತೆಗಳನ್ನು ಆಲಿಸಿ, ತಕ್ಷಣವೇ ಅವರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
    ಜಿಲ್ಲಾ ಸಹಾಯಕ ಯೋಜನಾಧಿಕಾರಿ ಸಿ.ಬಿ. ಕುಂಬಾರ, ಕಾರ್ಯನಿರ್ವಾಹಕ ಅಧಿಕಾರಿ ಡಾ.ವಿಜಯಕುಮಾರ ಆಜೂರ, ಇಂಡಿ ಸಹಾಯಕ ನಿರ್ದೇಶಕ ಸಂಜಯ ಕಡಗೇರ, ಚಡಚಣ ಸಹಾಯಕ ನಿರ್ದೇಶಕ ಮಹಾಂತೇಶ ಹೊಗಾಡಿ, ಹೆಸ್ಕಾಂ ಎಇಇ ರಜಪೂತ, ತಹಸೀಲಾರ್ ಸುರೇಶ ಚವಲರ, ಕಂದಾಯ ನಿರೀಕ್ಷಕ ಪಿ.ಜೆ. ಕೊಡಹೊನ್ನ, ಉಮರಜ ಆರೋಗ್ಯಾಧಿಕಾರಿ ಶೈಲಜಾ ಶಿವಶರಣ, ಡಿಎಚ್‌ಇಒ ಆರ್.ಬಿ. ಲಾಳಸಂಗಿ, ತಾಪಂ ಸದಸ್ಯ ಶಿವಾಜಿ ವಾಲಿಕಾರ, ಪಿಡಿಒ ಎಸ್.ಆರ್. ಕೊಟ್ಟಲಗಿ, ಕಾರ್ಯದರ್ಶಿ ವಿಲಾಸ ಕಾಂಬಳೆ, ಎಸ್‌ಬಿಎಂ ಸಂಯೋಜಕ ಸಿದ್ದಣ್ಣ ಚವಾಣ್, ಸೋಮನಾಥ ಕಳ್ಳಿಮನಿ, ಸಹಾಯಕ ಲೆಕ್ಕಾಧಿಕಾರಿ ಮಹೇಶ ದೈವಾಡಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

    ಬಹುತೇಕ ಗ್ರಾಮಗಳಲ್ಲಿ ಶೌಚಗೃಹಗಳಿದ್ದರೂ ಹೊರಗೆ ಹೋಗುವ ಸಂಪ್ರದಾಯವನ್ನು ಬೆಳೆಸಿಕೊಂಡಿದ್ದಾರೆ. ಹೊರಗಡೆ ಶೌಚಕ್ಕೆ ಹೋಗುವುದರಿಂದಾಗುವ ಅನನುಕೂಲತೆಗಳ ಬಗ್ಗೆ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕು.
    ಸುಜಾತಾ ಕಳ್ಳಿಮನಿ, ಜಿಪಂ ಅಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts