More

    ಶ್ರೀ ಸಿದ್ಧೇಶ್ವರ ಸಾಮೀಜಿಯವರ ಪ್ರವಚನದ ಸಂಗ್ರಹದ ‘ದೃಷ್ಟಿಯಂತೆ ಸೃಷ್ಟಿ’ ಪುಸ್ತಕ ಲೋಕಾರ್ಪಣೆ

    ಉಮದಿ: ನಡೆದಾಡುವ ದೇವರು ಶ್ರೀ ಸಿದ್ಧೇಶ್ವರ ಸಾಮೀಜಿಯವರ ಪ್ರವಚನಾಮೃತದ ಸಾರವನ್ನು ಒಟ್ಟಿಗೆ ಸೇರಿಸಿ ಶ್ರೀ ಶ್ರದ್ಧಾನಂದ ಸ್ವಾಮೀಜಿಯವರು 25 ವರ್ಷಗಳಿಂದ ಶ್ರೀ ಸಿದ್ಧೇಶ್ವರ ಸಾಮೀಜಿಗಳು ಹರಿಸಿದ ಜ್ಞಾನಗಂಗೆಯನ್ನು ಹರಿಬಿಡದೆ ಆ ಎಲ್ಲ ಜ್ಞಾನವನ್ನು ಗ್ರಂಥ ರೂಪದಲ್ಲಿ ಹಿಡಿದಿಟ್ಟು ಸಾಮಾನ್ಯ ಜನರಿಗೂ ತಲುಪುವ ಹಾಗೆ ಮಾಡಿದ್ದಾರೆ ಎಂದು ಇಚಲಕರಂಜಿ ಮಹೇಶಾನಂದ ಸ್ವಾಮೀಜಿ ತಿಳಿಸಿದರು.
    ಬಾಲಗಾವ- ಕಾತ್ರಾಳದ ಗುರುದೇವಾಶ್ರಮದಲ್ಲಿ ಗುರುವಾರ ಆಯೋಜಿಸಲಾದ ಪ್ರವಚನ ಹಾಗೂ ಡಾ. ಶ್ರದ್ಧಾನಂದ ಸ್ವಾಮೀಜಿ ಅವರು ರಚಿಸಿದ ‘ದೃಷ್ಟಿಯಂತೆ ಸೃಷ್ಟಿ’ ಶ್ರೀ ಸಿದ್ಧೇಶ್ವರ ಸಾಮೀಜಿಯವರು ಪ್ರವಚನದ ಸಂಗ್ರಹದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡುತ್ತಿದ್ದರು.
    ದೇವರು ಮಾರುಕಟ್ಟೆಯಲ್ಲಿ ಸಿಗುವ ಕಾಯಿಪಲ್ಲೆ ಅಲ್ಲ. ದೇವರನ್ನು ತಿಳಿಯಬೇಕಾದರೆ ಹೇಗೆ ಹಾಲನ್ನು ಕಾಯಿಸಿ ಮೊಸರು ಮಾಡಿ ಕಡೆದರೆ ಬೆಣ್ಣೆ ಸಿಗುತ್ತದೆ. ಅದನ್ನು ಚೆನ್ನಾಗಿ ಕಾಯಿಸಿದಾಗ ತಿಳಿ ತುಪ್ಪ ದೊರೆಯುವ ಹಾಗೆ ಈ ಶರೀರಕ್ಕೆ ಅನೇಕ ನಮಸ್ಕಾರಗಳನ್ನು ಮಾಡಬೇಕು. ಆ ಸಂಸ್ಕಾರಕ್ಕೆಲ್ಲಾ ಒಬ್ಬರು ಯಾರಾದರೂ ಬೇಕಲ್ಲ, ಅವರೇ ಗುರುಗಳು ದೇವರನ್ನು ಕಾಣುವ ಜ್ಞಾನವನ್ನು ನೀಡುತ್ತಾರೆ. ಅವರೇ ಗುರು. ಅದಕ್ಕೆ ಶಿವಪಥ ಅರಿಯಡೆ ಗುರುಪಥವೇ ಮೊದಲು ಎನ್ನುತ್ತಾರೆ ಶರಣರು.
    ‘ಹರಪಥ ಅರಿಯಡೆ ಗುರಪಥ ಮೊದಲು ನಮ್ಮ ಶರಣರ ಸಂಘವೇ ಮೊದಲು’ ಎನ್ನುವ ಮಾತಿನಂತೆ ಮಡಿಕೆ ಮಾಡುವುದಕ್ಕೆ ಮಣ್ಣೆ ಮೊದಲು, ತೊಡಿಗೆ ಮಾಡುವುದಕ್ಕೆ ನೂಲೆ ಮೊದಲು. ಆಭರಣಕ್ಕೆ ಹೊನ್ನೆ ಮೊದಲು ಎನ್ನುವ ಶರಣರ ಮಾತಿನ ಹಾಗೆ ಹರಪಥ ಅರಿಯಲು ಜ್ಞಾನವೇ ಮೊದಲು ಎನ್ನುತ್ತಾರೆ ಜ್ಞಾನಿಗಳು ಎಂದರು.
    ನೀವು ಸಂಸ್ಕಾರದಲ್ಲಿ ಇದ್ದುಕೊಂಡೇ ಪರಮೇಶ್ವರನನ್ನು ಕಾಣಬಹುದು. ಯಾವ ರೀತಿ ಸಪೋಟ (ಚಿಕ್ಕು) ಹಣ್ಣಿನಲ್ಲಿ ಬೀಜ ಇದ್ದರೂ ಯಾವುದೇ ರೀತಿ ಅದಕ್ಕೆ ಹಣ್ಣಿನ ಪದಾರ್ಥ ಹಚ್ಚಿಕೊಳ್ಳುವುದಿಲ್ಲ. ಅದರಂತೆ ನೀನು ಸಂಸಾರದ ಯಾವುದೇ ಹಚ್ಚಿಕೊಳ್ಳದೆ ಇದ್ದರೆ ನಾವು ಸರಾಗವಾಗಿ ದೇವರ ಪಥವನ್ನು ಪಡೆಯಬಹುದು ಎಂದು ಹೇಳಿದರು.
    ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ. ಅಮೃತಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಡಾ. ಶ್ರದ್ಧಾನಂದ ಸ್ವಾಮೀಜಿ, ೀಶುಪ್ರಸಾದ ಸ್ವಾಮೀಜಿ, ಪ್ರಜ್ಞಾನಂದ ಸ್ವಾಮೀಜಿ, ಇಷ್ಠಲಿಂಗ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಸಂದೀಪಗುರು, ಶಿವಾನಂದ ಶರಣರು, ಯೋಗಾನಂದ ಸ್ವಾಮೀಜಿ ಸಿದ್ಧಲಿಂಗದೇವರು, ಗಿರೀಶಾನಂದ ಸೇರಿ ಸುತ್ತಲಿನ ಗ್ರಾಮಗಳ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts