More

    ನನ್ನ ಮಗನನ್ನು ಬಿಟ್ಬಿಡು ನಿಂಗೇನು ಬೇಕು ತೆಗೆದುಕೋ: ಕಾಮುಕನ ಕೈಗೆ ಸಿಕ್ಕ ಮಹಿಳೆ ಬಚಾವ್​ ಆಗಿದ್ಹೇಗೆ?

    ಕೈವ್​: ಚಲಿಸುವ ರೈಲಿನಲ್ಲಿ ಆರು ವರ್ಷದ ಮಗನ ಮುಂದೆಯೇ ಟಿವಿ ನಿರೂಪಕಿ ಮೇಲೆರಗಿದ ಕಾಮುಕನೊಬ್ಬ ಗುರುತು ಹಿಡಿಯಲಾಗದಷ್ಟು ಆಕೆಯನ್ನು ಥಳಿಸಿರುವ ಘಟನೆ ಉಕ್ರೇನ್​ನಲ್ಲಿ ನಡೆದಿದೆ.

    ಅನಸ್ತಾಸಿಯಾ ಲುಗೋವಾ (28) ಎಂಬಾಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ವಿಟಾಲಿಯಾ ರುಡ್ಜ್ಕೊ (45) ಎಂಬಾತ ಇದೀಗ ಬಂಧಿಯಾಗಿದ್ದಾನೆ. ಮರಿಯುಪೋಲ್​ನಿಂದ ಪ್ರಮುಖ ನಗರ ಕೈವ್​ಗೆ ಸ್ಲೀಪಿಂಗ್​ ಕಂಪಾರ್ಟ್​ಮೆಂಟ್​ ರೈಲಿನಲ್ಲಿ ಲುಗೋವಾ ತನ್ನ ಆರು ವರ್ಷದ ಮಗನೊಂದಿಗೆ ಕಳೆದ ಶುಕ್ರವಾರ ಪ್ರಯಾಣ ಬೆಳೆಸುವಾಗ ಮಾರ್ಗಮಧ್ಯದಲ್ಲಿ ಈ ಘಟನೆ ನಡೆದಿದೆ.

    ಇದನ್ನೂ ಓದಿ: ಜನರ ತಲೆಗೆ ಹುಳ ಬಿಟ್ಟ ಈ ಜೀವಿ ಯಾವುದು ಗುರುತಿಸುವಿರಾ?: 15 ಅಡಿ ಉದ್ದ, ಎಲ್ಲವೂ ನಿಗೂಢ!

    ಲುಗೋವಾ ಮತ್ತು ಆಕೆಯ ಮಗ ಝಖರ್​ ರೈಲಿನಲ್ಲಿ ಮಲಗಿರುವಾಗ ಕೇವಲ ಒಳಉಡುಪು ಧರಿಸಿ ಬಂದ ಆರೋಪಿ ರುಡ್ಜ್ಕೊ, ಮುಂಜಾನೆ 3 ಗಂಟೆ ಸಮಯದಲ್ಲಿ ಲುಗೋವಾ ಇದ್ದ ಕಂಪಾರ್ಟ್​ಮೆಂಟ್​ ಮುರಿದು ಒಳ ನುಗ್ಗಿದ್ದಾನೆ. ತಕ್ಷಣ ಆಕೆಯ ಕುತ್ತಿಗೆಗೆ ಕೈಹಾಕಿ, ಎಳೆದಿದ್ದಾನೆ. ಈ ವೇಳೆ ಆಕೆಗೆ ಎಚ್ಚವಾಗುತ್ತದೆ. ಇದರ ಬೆನ್ನಲ್ಲೇ ಆಕೆಯ ಮುಖಕ್ಕೆ ಆರೋಪಿ ಪಂಚ್​ ಮಾಡಲು ಆರಂಭಿಸುತ್ತಾನೆ.

    ಈ ವೇಳೆ ಲುಗೋವಾ ಕೂಗಿಕೊಂಡರು ಸಹ ಯಾರೂ ಸಹಾಯಕ್ಕೆ ಬರುವುದಿಲ್ಲ. ಇದನ್ನು ನೋಡಿದ ಆರೋಪಿ, ನೀನು ಸುಮ್ಮನಿದ್ದರೆ ಸರಿ, ಇಲ್ಲದಿದ್ದರೆ ಪರಿಸ್ಥಿತಿ ತೀರಾ ಕೆಟ್ಟದ್ದಾಗುತ್ತದೆ ಎಂದು ಎಚ್ಚರಿಸಿ, ಆಕೆಯ ಬಟ್ಟೆಯನ್ನು ಬಿಚ್ಚಲು ಆರಂಭಿಸಿದ್ದಾಗಿ ಸ್ವತಃ ಲುಗೋವಾ ಮಾಧ್ಯಮಗಳಿಗೆ ತಿಳಿಸಿದ್ದಾಳೆ. ಕೂಗಾಟ ಕೇಳಿ ಎಚ್ಚರಗೊಂಡ ಮಗ ಅಮ್ಮನ ಸ್ಥಿತಿಯನ್ನು ಕಂಡು ಅಳಲು ಆರಂಭಿಸುತ್ತಾನೆ. ಇದನ್ನು ನೋಡಿದ ಆರೋಪಿ ಮಗುವಿಗೂ ಥಳಿಸುತ್ತಾನೆ. ಈ ವೇಳೆ ತನ್ನ ಮಗನನ್ನು ರಕ್ಷಿಸಿಕೊಳ್ಳಲು ಲುಗೋವಾ ಸಾಕಷ್ಟು ಹೋರಾಟವನ್ನು ನಡೆಸುತ್ತಾಳೆ.

    ಇದನ್ನೂ ಓದಿ: 3 ವಾರ ಕಷ್ಟಪಟ್ಟು ಒಬ್ಬಳೇ 35 ಅಡಿ ಉದ್ದದ ಸುರಂಗ ಕೊರೆದ ಮಹಿಳೆ: ಕಾರಣ ಕೇಳಿದ್ರೆ ಅಚ್ಚರಿ ಖಂಡಿತ!

    ನನ್ನ ಮಗನನ್ನು ಬಿಟ್ಟು ಬಿಡು, ನಿನಗೆ ಏನು ಬೇಕೋ ಅದನ್ನು ಮಾಡಿಕೋ ಎಂದು ಭರವಸೆ ನೀಡುತ್ತಾಳೆ. ಬಳಿಕ ನನ್ನ ಮಗನ ಹತ್ತಿರ ಬೇಡ, ಎಲ್ಲಾದರೂ ದೂರ ಹೋಗೋಣ ಎಂದು ಆರೋಪಿಯ ಬಳಿ ಕೇಳಿಕೊಳ್ಳುತ್ತಾಳೆ. ಅದಕ್ಕೆ ಆತ ತನ್ನ ಕಂಪಾರ್ಟ್​ಮೆಂಟ್​ಗೆ ಹೋಗೋಣ ಎಂದು ಆದೇಶಿಸುತ್ತಾನೆ. ಅದಕ್ಕೆ ಒಪ್ಪಿ ಆತನ ಹಿಂದೆಯೇ ಲುಗೋವಾ ಹೋಗುತ್ತಾಳೆ. ಆರೋಪಿ ಕಂಪಾರ್ಟ್​ಮೆಂಟ್​ಗೆ ಹೋಗುತ್ತಿದ್ದಂತೆಯೇ ತನ್ನ ಒಳಉಡುಪನ್ನು ಕಳಚಿ ಲುಗೋವಾ ಮೇಲೆರೆಗಲು ಯತ್ನಿಸಿದಾಗ ಆತನನ್ನು ದೂರಕ್ಕೆ ತಳ್ಳಿ ತನ್ನ ಮಗ ಕಡೆಗೆ ಲುಗೋವಾ ಓಡಿ ಬರುತ್ತಾಳೆ.

    ತಕ್ಷಣ ಮಗನನ್ನು ಎತ್ತಿಕೊಂಡು ರೈಲಿನ ಕಂಡಕ್ಟರ್​ ಬಳಿ ಓಡಿ ಎಲ್ಲವನ್ನು ವಿವರಿಸುತ್ತಾಳೆ. ಈ ವೇಳೆ ಕಂಡಕ್ಟರ್​ ತನ್ನ ಕಂಪಾರ್ಟ್​ಮೆಂಟ್​ನಲ್ಲಿ ತಾಯಿ-ಮಗನನ್ನು ಬಚ್ಚಿಡುತ್ತಾನೆ. ಆದರೆ, ಸುಮ್ಮನಾಗದ ಆರೋಪಿ ರುಡ್ಜ್ಕೊ, ಲುಗೋವಾಗಾಗಿ ಸಾಕಷ್ಟು ಹುಡುಕಾಟ ನಡೆಸುತ್ತಾನೆ. ಆದರೆ, ರೈಲು ಕೈವ್​ಗೆ ಬರುತ್ತಿದ್ದಂತೆ ರೈಲು ಸಿಬ್ಬಂದಿ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸುತ್ತಾರೆ. ತಕ್ಷಣ ವಶಕ್ಕೆ ಪಡೆಯುವ ಆರೋಪಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಯತ್ನ ಪ್ರಕರಣ ದಾಖಲಿಸುತ್ತಾರೆ.

    ಇದನ್ನೂ ಓದಿ: ಎಂಥಾ ಅದೃಷ್ಟ: ರಾತ್ರೋರಾತ್ರಿ 25 ಕೋಟಿ ಒಡೆಯನಾಗಿದ್ದ ಗಣಿಕೆಲಸಗಾರನಿಗೆ ಮತ್ತೆ 15 ಕೋಟಿ ಬಂಪರ್​!

    ಇದೀಗ 8 ವರ್ಷದ ಕಠಿಣ ಶಿಕ್ಷೆಗೆ ಆರೋಪಿ ಗುರಿಯಾಗಿದ್ದಾನೆ. ಇತ್ತ ತನಿಖೆಯು ಸಹ ನಡೆಯುತ್ತಿದೆ. ಅತ್ತ ಲುಗೋವಾ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಯ ಮುಖಕ್ಕೆ ಗಂಭೀರ ಗಾಯವಾಗಿದೆ. ಭಯಾನಕ ಘಟನೆಯಿಂದ ಆಘಾತಗೊಂಡಿರುವ ಲುಗೋವಾ ಮಗನಿಗೆ ಆಪ್ತ ಸಮಾಲೋಚನೆ ಕೊಡಿಸಲಾಗಿದೆ. (ಏಜೆನ್ಸೀಸ್​)

    3 ದಿನದ ಜೀವಂತ ಹಸುಗೂಸನ್ನು ಸ್ಮಶಾನಕ್ಕೆ ಎಸೆದ ಕ್ರೂರಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts