More

    ಭಾರತಕ್ಕೆ ಮರಳಿದ ವಿದ್ಯಾರ್ಥಿಗಳಿಗೆ ಯೂಕ್ರೇನ್ ಟೆನ್ಷನ್​: ಶುಲ್ಕ ಕಟ್ಟಲು ಒತ್ತಾಯ, ಆನ್‌ಲೈನ್‌ ತರಗತಿಗಳೂ ಸ್ಥಗಿತ..

    ವಿಜಯಪುರ: ಯೂಕ್ರೇನ್​ ಯುದ್ಧದಿಂದಾಗಿ ನೆಲೆ ಕಳೆದುಕೊಂಡಿರುವ ವೈದ್ಯಕೀಯ ವಿದ್ಯಾರ್ಥಿಗಳು ಶೈಕ್ಷಣಿಕ ಸೌಲಭ್ಯದಿಂದ ವಂಚಿತರಾಗಿದ್ದು ಮಾನಸಿಕ ಖಿನ್ನತೆಗೆ ಜಾರುತ್ತಿದ್ದಾರೆ..!

    ರಷ್ಯಾ ಹಾಗೂ ಯೂಕ್ರೇನ್​ ಯುದ್ಧ ಸಂದರ್ಭ ಭಾರತ ಸರ್ಕಾರ ಮಕ್ಕಳನ್ನು ಸುರಕ್ಷಿತವಾಗಿ ಕರೆತಂದು ಬಿಟ್ಟಿರುವುದಕ್ಕೆ ಪ್ರಧಾನಿ ಮೋದಿ ಸರ್ಕಾರವನ್ನು ಮನತುಂಬಿ ಅಭಿನಂದಿಸಿದ ಪಾಲಕರು ಇದೀಗ ಮತ್ತೊಂದು ಸಮಸ್ಯೆಯನ್ನು ಮುಂದಿಟ್ಟಿದ್ದಾರೆ.

    ಭೀಕರ ಯುದ್ಧವನ್ನು ಕಣ್ಣಾರೆ ಕಂಡಿರುವ ವಿದ್ಯಾರ್ಥಿಗಳು ಇದೀಗ ಮರಳಿ ಯೂಕ್ರೇನ್‌ಗೆ ಹೋಗಲು ನಿರಾಕರಿಸುತ್ತಿದ್ದಾರೆ. ಅತ್ತ ಯೂಕ್ರೇನ್‌ ಶಿಕ್ಷಣ ಸಂಸ್ಥೆಗಳು ಶುಲ್ಕ ಪಾವತಿಗೆ ಒತ್ತಾಯಿಸುತ್ತಿವೆ. ಮಾತ್ರವಲ್ಲ, ಆನ್‌ಲೈನ್‌ ತರಗತಿಗಳನ್ನೂ ನಿಲ್ಲಿಸಿವೆ. ಇದರಿಂದ ಕಂಗಾಲಾಗಿರುವ ವಿದ್ಯಾರ್ಥಿಗಳು ಭವಿಷ್ಯ ಹಾಳಾಗುವ ಭಯದಲ್ಲಿ ಮಾನಸಿಕ ಖಿನ್ನತೆಗೆ ಜಾರುತ್ತಿದ್ದಾರೆ.

    ಈಗಾಗಲೇ ಈ ಬಗ್ಗೆ ಶಾಸಕರು, ಸಂಸದರು ಹಾಗೂ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವ ಪಾಲಕರು ಹೇಗಾದರೂ ಮಾಡಿ ರಾಜ್ಯದಲ್ಲಿಯೇ ವೈದ್ಯಕೀಯ ಶಿಕ್ಷಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಆದರೆ, ಈವರೆಗೂ ಯಾವುದೇ ಪ್ರತಿಕ್ರಿಯೆ ಬರದ ಕಾರಣಕ್ಕೆ ಕಣ್ಣೀರು ಹಾಕುವಂತಾಗಿದೆ.

    ಭಾರತಕ್ಕೆ ಮರಳಿದ ವಿದ್ಯಾರ್ಥಿಗಳಿಗೆ ಯೂಕ್ರೇನ್ ಟೆನ್ಷನ್​: ಶುಲ್ಕ ಕಟ್ಟಲು ಒತ್ತಾಯ, ಆನ್‌ಲೈನ್‌ ತರಗತಿಗಳೂ ಸ್ಥಗಿತ..
    ಮಕ್ಕಳ ಭವಿಷ್ಯದ ಸಲುವಾಗಿ ಜನಪ್ರತಿನಿಧಿಗಳನ್ನು ಭೇಟಿಯಾದ ಪಾಲಕರು.

    ಯುದ್ಧದ ಸಂದರ್ಭ ಯೂಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳಿಗೆ ದೇಶದಲ್ಲಿಯೇ ಶೈಕ್ಷಣಿಕ ಸೌಲಭ್ಯ ಕಲ್ಪಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಅಲ್ಲದೇ, ಉತ್ತರ ಕರ್ನಾಟಕದ ಪ್ರತಿಷ್ಠಿತ ಬಿಎಲ್‌ಡಿಇ ಸಂಸ್ಥೆ ಕೂಡ ಕೆಲವರಿಗೆ ವೈದ್ಯಕೀಯ ಶಿಕ್ಷಣ ನೀಡುವುದಾಗಿ ಮುಂದೆ ಬಂದಿತ್ತು. ಇದೀಗ ಸುಮಾರು 8 ವಿದ್ಯಾರ್ಥಿಗಳು ಶಿಕ್ಷಣ ಸೌಲಭ್ಯಕ್ಕಾಗಿ ಅಂಗಲಾಚುತ್ತಿದ್ದು ಸರ್ಕಾರದ ನೆರವಿಗಾಗಿ ನಿರೀಕ್ಷಿಸುತ್ತಿದ್ದಾರೆ.

    ಇಷ್ಟಪಟ್ಟು ಪುರುಷನ ಜತೆಗಿದ್ದು, ಸಂಬಂಧ ಕೆಟ್ಟಾಗ ರೇಪ್​ ಆಯ್ತು ಅನ್ನೋ ಹಾಗಿಲ್ಲ: ಸುಪ್ರೀಂ ಕೋರ್ಟ್​

    ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಕೊಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts