More

    ಆಹಾರ ಅಭದ್ರತೆ; ಸೂಪರ್ ಮಾರ್ಕೆಟ್‌ಗಳಲ್ಲಿ ಹಣ್ಣು, ತರಕಾರಿ ಖರೀದಿಗೆ ಮಿತಿ ಹೇರಿಕೆ!

    ಲಂಡನ್: ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದನೆಯಾಗದ ಕಾರಣ ಆಹಾರ ಅಭದ್ರತೆ ಹಾಗೂ ಪೌಷ್ಟಿಕಾಂಶ ಕೊರತೆ ಎದುರಾಗುತ್ತಿದೆ. ಆದರೆ ಬ್ರಿಟನ್ನಿನ ಕೆಲವು ಪ್ರಮುಖ ಸೂಪರ್ ಮಾರ್ಕೆಟ್‌ಗಳಲ್ಲಿ ಹಣ್ಣು ಮತ್ತು ತರಕಾರಿಗಳ ಖರೀದಿಗೆ ಮಿತಿ ಹೇರಲಾಗಿದೆ.

    ಹವಾಮಾನ ವೈಪರೀತ್ಯ ಮತ್ತು ರಷ್ಯಾ-ಉಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ತರಕಾರಿ, ಹಣ್ಣುಗಳ ಸರಬರಾಜಿನಲ್ಲಿ ಏರುಪೇರಾಗಿದ್ದು, ಈ ನಿರ್ಧಾರಕ್ಕೆ ಬರಲಾಗಿದೆ. ದಕ್ಷಿಣ ಯೂರೋಪ್‌ ಮತ್ತು ಆಫ್ರಿಕಾದಲ್ಲಿ ಹವಾಮಾನ ವೈಪರೀತ್ಯ ಹಾಗೂ ಬ್ರಿಟನ್, ನೆದರ್‌ಲ್ಯಾಂಡ್ಸ್ ಇಂಧನ ಬೆಲೆ ಹೆಚ್ಚಳದಿಂದ ಗ್ರೀನ್ ಹೌಸ್ ಮೇಲೆ ಬೀರಿರುವ ಪರಿಣಾಮ ಕೊರತೆಗೆ ಪ್ರಮುಖ ಕಾರಣಗಳಾಗಿವೆ. ದಿನಬಳಕೆಯ ಟೊಮೆಟೊ, ಕರಿಮೆಣಸು, ಕ್ಯಾಪ್ಸಿಕಂ, ಸೌತೆಕಾಯಿ, ಬ್ರೊಕೊಲಿ, ಹೂಕೋಸು ಹೀಗೆ ಮುಂತಾದ ಹಣ್ಣು ತರಕಾರಿಗಳ ಖರೀದಿಯಲ್ಲಿ ಮಿತಿ ಹೇರಲಾಗಿದೆ.

    ಇದನ್ನೂ ಓದಿ: ಮನೆಗೆ ಬಂದ ಅತ್ತೆಗೆ ಚಾಕುವಿನಿಂದ ಇರಿದ ಅಳಿಯ!

    ಈ ಕುರಿತಾಗಿ ಮಾತನಾಡಿದ ಆಹಾರ ಮತ್ತು ಪರಿಸರ ಇಲಾಖೆ ಕಾರ್ಯದರ್ಶಿ ಥೆರೆಸ್ ಕೊಫೆ ಅವರು, ‘ಈ ಪರಿಸ್ಥಿತಿ ಇನ್ನೂ 2ರಿಂದ 4 ವಾರಗಳವರಗೆ ಇರುತ್ತದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಪರ್ಯಾಯ ಮಾರ್ಗಗಳಿಂದ ಹಣ್ಣು ಮತ್ತು ತರಕಾರಿ ಆಮದಿಗೆ ಪ್ರಯತ್ನ ನಡೆಸಬೇಕಿದೆ’ ಎಂದು ಹೇಳಿದ್ದಾರೆ.

    ಈ ಕುರಿತಂತೆ ವಿರೋಧ ಪಕ್ಷ ಲೇಬರ್ ಪಾರ್ಟಿಯು, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಆಹಾರ ಪದಾರ್ಥಗಳ ಲಭ್ಯತೆ ಕುರಿತಂತೆ ಸಾರ್ವಜನಿಕರಲ್ಲಿ ಕಳವಳ ಉಂಟಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts