More

    ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆಸ್ಪತ್ರೆಗೆ ದಾಖಲು: ಹತ್ತು ದಿನಗಳ ಹಿಂದೆ ಅವರಿಗೆ COVID19 ಸೋಂಕು ಇರುವುದು ಪತ್ತೆಯಾಗಿತ್ತು..

    ಲಂಡನ್​: ಬ್ರಿಟಿಷ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಕರೊನಾ ಸೋಂಕಿನ ಲಕ್ಷಣಗಳು ಹೆಚ್ಚಾದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ COVID 19 ವೈರಸ್ ಸೋಂಕು ತಗುಲಿರುವುದು 10 ದಿನಗಳ ಹಿಂದೆ ಪತ್ತೆಯಾಗಿತ್ತು.

    ಐವತ್ತೈದು ವರ್ಷದ ಜಾನ್ಸನ್​ ಸೋಂಕು ಪತ್ತೆಯಾದ ದಿನದಿಂದ ಕ್ವಾರಂಟೈನ್​ನಲ್ಲಿದ್ದಾರೆ. ಮಾರ್ಚ್​ 26ರಂದು ಅವರಿಗೆ ಸೋಂಕು ದೃಢವಾಗಿತ್ತು. ಈ ಘಟನೆ ಸರ್ಕಾರದ ಮುಖ್ಯಸ್ಥರೊಬ್ಬರು ಸೋಂಕಿಗೆ ಒಳಗಾದ ಮೊದಲ ಘಟನೆ ಎಂದು ಹೇಳಲಾಗುತ್ತಿದೆ. ಇದಾದ ತರುವಾಯ 10 ದಿನಗಳ ಅವಧಿಯಲ್ಲಿ ಜಾನ್ಸನ್ ಅನೇಕ ವಿಡಿಯೋ ಸಂದೇಶಗಳನ್ನು ಅಪ್ಡೇಟ್ ಮಾಡಿದ್ದು, ಎಲ್ಲರಿಗೂ ಧೈರ್ಯ ತುಂಬುವ ಕೆಲಸ ಮಾಡಿದ್ದರು.

    ಶುಕ್ರವಾರದ ವಿಡಿಯೋ ಸಂದೇಶದಲ್ಲಿ ಅವರ ಕಣ್ಣು ಕೆಂಪಾಗಿದ್ದು ಕಂಡುಬಂದಿತ್ತು. ಆದಾಗ್ಯೂ, ನಾನು ಚೆನ್ನಾಗಿದ್ದೇನೆ. ಸ್ವಲ್ಪ ಜ್ವರ ಇದೆ ಅಷ್ಟೇ ಎಂದು ಹೇಳಿಕೊಂಡಿದ್ದರು. ಬಹುತೇಕ ಜನರಲ್ಲಿ ಈ ವೈರಸ್​ ಸಾಧಾರಣ ಲಕ್ಷಣಗಳನ್ನು ತೋರುತ್ತಿದೆ. ಆದರೆ ಇನ್ನು ಕೆಲವರಿಗೆ ವಿಶೇಷವಾಗಿ ಹಿರಿಯ ನಾಗರಿಕರಲ್ಲಿ ನ್ಯುಮೋನಿಯಾ ಉಂಟುಮಾಡಿ ಸಾವಿಗೂ ಕಾರಣವಾಗುತ್ತದೆ.

    ಜಾನ್ಸನ್ ಅವರ ಪ್ರೇಯಸಿಗೂ ವೈರಸ್ ಸೋಂಕು ದೃಢವಾಗಿದೆ. ಅವರು ಗರ್ಭಿಣಿಯಾಗಿದ್ದು ಅವರ ಮನೆಯಲ್ಲಿ ಆತಂಕ ಮನೆಮಾಡಿದೆ. ಈ ನಡುವೆ, ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇತರೆ ಜಾಗತಿಕ ನಾಯಕರು ಬೋರಿಸ್ ಜಾನ್ಸನ್ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ಅವರು ಭಾನುವಾರ ಕೆಲವು ಟೆಸ್ಟ್​ಗಳಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು ಮುಂಜಾಗ್ರತಾ ಕ್ರಮವಾಗಿದ್ದು, ಯಾವುದೇ ಗಾಬರಿ ಆಗಬೇಕಾದ್ದು ಇಲ್ಲ ಎಂದು ಪ್ರಧಾನ ಮಂತ್ರಿ ಕಚೇರಿ ಸ್ಪಷ್ಟಪಡಿಸಿದೆ.

    (ಏಜೆನ್ಸೀಸ್)

    ಕರೊನಾ ಸೋಂಕಿತ ಬ್ರಿಟಿಷ್ ಪ್ರಧಾನಿ ಬೋರಿಸ್​ ಜಾನ್ಸನ್​ ಅವರ ಗರ್ಭಿಣಿ ಪ್ರೇಯಸಿಗೂ ವೈರಸ್​; ಒಂದು ವಾರದಿಂದಲೂ ಕಾಡುತ್ತಿದೆ ಎಂದ ಕ್ಯಾರಿ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts