More

    ಉಜ್ಜಯಿನಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಸಂಪನ್ನ

    ಯರಗಟ್ಟಿ: ಸಮೀಪದ ಸತ್ತಿಗೇರಿ ಗ್ರಾಮದಲ್ಲಿ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು. ಕುರುಬಗಟ್ಟಿ ಕ್ರಾಸ್‌ನಿಂದ ಆರಂಭಗೊಂಡ ಅಡ್ಡಪಲ್ಲಕ್ಕಿ ಮಹೋತ್ಸವ ಗ್ರಾಮದ ಮಳಿಮಲೇಶ್ವರ ಮಠದವರೆಗೂ 1008 ಪೂರ್ಣಕುಂಭ ಸಮೇತ ಜರುಗಿತು. ಆರತಿ ಹಿಡಿದು ಹೆಜ್ಜೆ ಹಾಕಿದ ಮಹಿಳೆಯರು ಮಹೋತ್ಸವದ ಮೆರುಗು ಹೆಚ್ಚಿಸಿದರು. ಮಹೋತ್ಸವದ ರಸ್ತೆಯುದ್ದಕ್ಕೂ ತಳಿರು-ತೋರಣಗಳಿಂದ ಅಲಂಕರಿಸಲಾಗಿತ್ತು. ಕರಡಿ ಮಜಲು, ಜಗ್ಗಲಗಿ ಮೇಳ, ಮಹಿಳಾ ಡೊಳ್ಳು ಕುಣಿತ, ಕುದುರೆ ಸಾರೋಟ, ವೀರಗಾಸೆ ಕುಣಿತದ, ಆನೆ ಅಂಬಾರಿ, ಗೊಂಬೆ ಕುಣಿತ ಸೇರಿ ವಿವಿಧ ಕಲಾಮೇಳಗಳು ಶ್ರೀಗಳ ಅಡ್ಡಪಲ್ಲಕ್ಕಿಯನ್ನು ಬರಮಾಡಿಕೊಂಡರು.

    ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹಣಬರಟ್ಟಿ ಬಸವಲಿಂಗ ಶಿವಾಚಾರ್ಯ ಸ್ವಾಮೀಜಿ, ಕಟಕೋಳ-ಎಂ.ಚಂದರಗಿ ವೀರಭದ್ರ ಶಿವಯೋಗಿ ಶಿವಾಚಾರ್ಯರು ಸ್ವಾಮೀಜಿ, ಭಾಗೋಜಿಕೊಪ್ಪ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಸತ್ತಿಗೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಸವದತ್ತಿಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts