More

    ಒಂದು ದಿನದ ಸಂಬಳ ದೇಣಿಗೆ ನೀಡಲು ಬೋಧಕ, ಬೋಧಕೇತರ ಸಿಬ್ಬಂದಿಗೆ ಯುಜಿಸಿ ಮನವಿ

    ಕೋವಿಡ್​ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸುವಂತೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ವಿಶ್ವವಿದ್ಯಾಲಯಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಕಾಲೇಜುಗಳ ಬೋಧಕರು, ಬೋಧಕೇತರ ಸಿಬ್ಬಂದಿಗೆ ಮನವಿ ಮಾಡಿದೆ.

    ಕರೊನಾ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜತೆಗೆ, ಆರ್ಥಿಕವಾಗಿಯೂ ಕೊಡುಗೆ ಸಲ್ಲಿಸುವಂತೆ ಕೋರಿದೆ. ವಿವಿಗಳ ಕುಲಪತಿಗಳು, ಅಧಿಕಾರಿ ವರ್ಗದವರು, ಅಧ್ಯಾಪಕರು, ಬೋಧಕೇತರ ಸಿಬ್ಬಂದಿ ಒಂದು ದಿನದ ಸಂಬಳವನ್ನು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ಸಲ್ಲಿಸುವಂತೆ ಮನವಿ ಮಾಡಿದೆ.

    ಈಗಾಗಲೇ ಯುಜಿಸಿ ವತಿಯಿಂದ ಒಂದು ದಿನದ ಸಂಬಳವನ್ನು ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಉಳಿದವರು ಕೂಡ ಈ ಮಾದರಿಯನ್ನು ಅನುಸರಿಸುವಂತೆ ಸಲಹೆ ನೀಡಿದೆ.

    ದೇಶವನ್ನು ಕಾಡುತ್ತಿರುವ ಸಂಕಷ್ಟದ ಸಂದರ್ಭದಲ್ಲಿ ಈ ಸಣ್ಣ ಕಾಣಿಕೆಯೂ ಕೂಡ ಬಹುದೊಡ್ಡ ಕೊಡುಗೆಯಾಗಲಿದೆ ಎಂದು ಯುಜಿಸಿ ತಿಳಿಸಿದೆ.

    ನಂಜನಗೂಡು ಕೈಗಾರಿಕಾ ವಲಯದ 5 ಮಂದಿಗೆ ಕರೊನಾ ಸೋಂಕು: ನಂಜನಗೂಡು ಲಾಕ್​ಡೌನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts