More

    ಕಾಲೇಜು ಶುರು ಮಾಡಿ, ಆದ್ರೆ ಅರ್ಧಕ್ಕಿಂತ ಜಾಸ್ತಿ ವಿದ್ಯಾರ್ಥಿಗಳು ಇರಬಾರದು; ಯುಜಿಸಿ ಹೊಸ ಮಾರ್ಗಸೂಚಿ

    ನವದೆಹಲಿ: ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳ ಮರು ಆರಂಭ ಕುರಿತಂತೆ ಈಗಾಗಲೇ ಎರಡು ಸಲ ಮಾರ್ಗಸೂಚಿಗಳನ್ನು ಹೊರಡಿಸಿದ್ದ ಯುಜಿಸಿ, ಈಗ ಹೊಸದಾಗಿ ಮತ್ತೊಂದು ಮಾರ್ಗಸೂಚಿ ಹೊರಡಿಸಿದೆ.

    ಕೇಂದ್ರ ಶಿಕ್ಷಣ ಸಚಿವ ರಮೇಶ್​ ಪೋಖ್ರಿಯಾಲ್​ ಈ ಕುರಿತು ಮಾಹಿತಿ ನೀಡಿದ್ದು, ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳನ್ನು ಮರು ಆರಂಭಿಸಬಹುದು. ಆದರೆ ಶೇ. 50ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಇರಬಾರದು ಎಂಬ ಯುಜಿಸಿ ಮಾರ್ಗಸೂಚಿಯನ್ನು ಪಾಲಿಸಲೇಬೇಕು ಎಂದಿದ್ದಾರೆ.

    ಸೀಮಿತ ಸಂಖ್ಯೆಯ ಹಾಸ್ಟೆಲ್​ಗಳನ್ನು ಮತ್ತೆ ತೆರೆಯಬಹುದಾಗಿದ್ದರೂ ಒಂದು ಕೊಠಡಿಯಲ್ಲಿ ಒಬ್ಬನಿಗಿಂತ ಹೆಚ್ಚು ವಿದ್ಯಾರ್ಥಿಗಳು ಇರಬಾರದು. ಕೋವಿಡ್​-19 ಹಿನ್ನೆಲೆಯಲ್ಲಿ ಎಲ್ಲ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆದರೆ ಸೋಂಕಿತ ವಿದ್ಯಾರ್ಥಿಗೆ ಯಾವುದೇ ಕಾರಣಕ್ಕೂ ಹಾಸ್ಟೆಲ್​ನಲ್ಲಿ ಉಳಿಯಲು ಅವಕಾಶ ಕೊಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

    ಅದಾಗ್ಯೂ ವಿದ್ಯಾರ್ಥಿಗಳು ಬಯಸಿದರೆ ಅವರು ತರಗತಿಗೆ ಹಾಜರಾಗದೆ ಮನೆಯಲ್ಲೇ ಇದ್ದುಕೊಂಡು ಆನ್​ಲೈನ್​ ಕ್ಲಾಸ್​ ಮೂಲಕ ಅಭ್ಯಾಸ ಮಾಡಬಹುದು. ಅಂಥ ವಿದ್ಯಾರ್ಥಿಗಳಿಗೆ ಅಗತ್ಯ ಪಠ್ಯವಸ್ತುಗಳನ್ನು ನೀಡಲು ಶಿಕ್ಷಣ ಸಂಸ್ಥೆಗಳು ಕ್ರಮಕೈಗೊಳ್ಳಲಿವೆ. ವಿಜ್ಞಾನ, ತಂತ್ರಜ್ಞಾನ ಹೊರತಾದ ಇತರ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಆನ್​ಲೈನ್ ಶಿಕ್ಷಣ ಇರಲಿದೆ ಎಂದು ಅವರು ತಿಳಿಸಿದ್ದಾರೆ. ಯುಜಿಸಿ ಈ ಹಿಂದೆ ಎಂದರೆ ಏಪ್ರಿಲ್​ 29 ಮತ್ತು ಜುಲೈ 6ರಂದು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಇದೀಗ ಮತ್ತೊಮ್ಮೆ ಹೊಸದಾಗಿ ಮಾರ್ಗಸೂಚಿ ಪ್ರಕಟಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts