More

    ಶ್ರೀಶೈಲ ಪಾದಯಾತ್ರಿಗರಿಗೆ ವಿವಿಧೆಡೆ ಅನ್ನಸಂತರ್ಪಣೆ

    ಅರಕೇರಾ: ಯುಗಾದಿ ಹಬ್ಬದ ಪ್ರಯುಕ್ತ ತಾಲೂಕಿನ ವಿವಿದ ಗ್ರಾಮಗಳಿಂದ ಐತಿಹಾಸಿಕ ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ದರ್ಶನಕ್ಕೆ ಪಾದಯಾತ್ರೆ ಹೊರಟ ಭಕ್ತಾದಿಗಳಿಗೆ ವಿವಿಧೆಡೆ ಅನ್ನಸಂತರ್ಪಣೆ ಮಾಡಲಾಯಿತು.

    ಕಳೆದ ಮೂರು ದಿನಗಳಿಂದ ಪಟ್ಟಣ, ರೇಕಲಮರಡಿ, ಜಾಗೀರ ಜಾಡಲದಿನ್ನಿ ಮಾರ್ಗದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಪಟ್ಟಣ ಸೇರಿ ತಾಲೂಕಿನ ಕೆ.ಹನುಮಂತ್ರಾಯ ನಗರ, ಕೊತ್ತದೊಡ್ಡಿ, ಹೇಮನೂರು, ಭೂಮನಗುಂಡ, ಮಲ್ಲಾಪೂರ, ಕ್ಯಾದಿಗ್ಗೇರ, ಮುಂಡರಗಿ, ಗಾಣದಾಳ ಸೇರಿ ವಿವಿಧ ಗ್ರಾಮಗಳ ಮಾರ್ಗದಿಂದ ಭಕ್ತರು ಪಾದಯಾತ್ರೆ ತೆರಳುತ್ತಿದ್ದಾರೆ.

    ರೇಕಲಮರಡಿ, ಜಾಗೀರ ಜಾಡಲದಿನ್ನಿಯಲ್ಲಿ ಭಕ್ತಾದಿಗಳು ಬೆಳಗಿನ ಉಪಹಾರಕ್ಕೆ ಉಪ್ಪಿಟ್ಟು, ಮಂಡಕ್ಕಿ ಒಗ್ಗರಣೆ, ಮಧ್ಯಾಹ್ನ ಊಟಕ್ಕೆ ಅನ್ನ, ಸಾಂಬಾರ್, ಪಲಾವ್, ಕೇಸರಿ ಬಾತ್, ಹುಗ್ಗಿ, ಜತೆಗೆ ಹಣ್ಣು ಹಂಪಲು ನೀಡುತ್ತಿದ್ದಾರೆ. ಬೇಸಿಗೆ ಇರುವುದರಿಂದ ಕೆಲ ಗ್ರಾಮಗಳಲ್ಲಿ ತಂಪು ಪಾನೀಯ, ವಾಟರ್ ಬಾಟಲ್, ಸೇರಿ ಬಿಸ್ಕತ್ತು ವಿತರಿಸಲಾಗುತ್ತಿದೆ. ಕೆಲವರು ಪಾದಯಾತ್ರಿಗರನ್ನು ಹುಡುಕಿಕೊಂಡು ಹೋಗಿ ದಾಹ ನೀಗಿಸುವ ಕೆಲಸ ಮಾಡುತ್ತಿದ್ದಾರೆ.
    ಕೆ.ಹನುಮಂತ್ರಾಯ ನಗರ: ಪಟ್ಟಣದ ಕೆ.ಹನುಮಂತ್ರಾಯ ನಗರದಿಂದ 70 ಕ್ಕೂ ಹೆಚ್ಚು ಭಕ್ತಾದಿಗಳು ಶ್ರೀಶೈಲಕ್ಕೆ 9ನೇ ವರ್ಷದ ಪಾದಯಾತ್ರೆಯನ್ನು ಸೋಮವಾರ ಕೈಗೊಂಡರು.

    ಪಾದಯಾತ್ರಿಗಳು ಪಟ್ಟಣದ ಭಾಗ್ಯವಂತಿ, ಮಾರೆಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಗ್ರಾಮಸ್ಥರು ಸೂಗೂರೇಶ್ವರ ಮಹಾದ್ವಾರದ ಬಳಿ ಬೀಳ್ಕೊಟ್ಟರು. ಪಾದಯಾತ್ರಿಗರಿಗೆ ಬೆಳಗಿನ ಉಪಹಾರ, ಹಣ್ಣು ಹಂಪಲು, ತಂಪು ಪಾನೀಯ ವ್ಯವಸ್ಥೆ ಮಾಡಲಾಗಿತ್ತು.
    ಪ್ರಮುಖರಾದ ಬಸವರಾಜ ಪೂಜಾರಿ, ಕೆ.ಭಗವಂತ್ರಾಯ ನಾಯಕ, ರವಿ ನಾಯಕ, ವೆಂಕಟೇಶ ನಾಯಕ, ಭಗವಂತ್ರಾಯ ನಾಯಕ, ರಾಮಕೃಷ್ಣ ನಾಯಕ, ರಾಜು ನಾಯಕ, ಕೋಳೂರು, ಶಿವರಾಜ ನಾಡಗೌಡ, ಮಂಜುನಾಥ ಗೌಡ, ಭೀಮಣ್ಣ, ಭಾಗೇಶ ನಾಯಕ ಕರ್ನಾಳ, ಹುಸೇನ ಭಾಷ, ರಂಗಪ್ಪ ನಾಯಕ, ಸಾಬಯ್ಯ ಕರ್ನಾಳ, ರಂಗಪ್ಪ, ಸೂಗೂರೇಶ ಕುರುಕುಂದಿ, ಸಿದ್ದಪ್ಪ, ನಾಗೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts