More

    ಜೂ.15ರ ತನಕ ಉಡುಪಿ ಕೃಷ್ಣ ಮಠಕ್ಕೆ ಭಕ್ತರಿಗೆ ಪ್ರವೇಶವಿಲ್ಲ

    ಉಡುಪಿ: ರಾಜ್ಯ ಸರ್ಕಾರ ಜೂ. 1ರಿಂದ ದೇವಸ್ಥಾನಗಳಲ್ಲಿ ಭಕ್ತರ ಪ್ರವೇಶ ಹಾಗೂ ದೇವರ ದರ್ಶನಕ್ಕೆ ಅವಕಾಶ ನೀಡಿದ್ದರೂ, ಕೃಷ್ಣ ಮಠದಲ್ಲಿ ಜೂ.15ರ ನಂತರವಷ್ಟೇ ಭಕ್ತರ ಪ್ರವೇಶಕ್ಕೆ ಅವಕಾಶ ಸಿಗಲಿದೆ.

    ಇದನ್ನೂ ಓದಿ: ಐದು ರಾಜ್ಯಗಳ ಜನರಿಗೆ ಕರ್ನಾಟಕ ಪ್ರವೇಶ ‘ನಿಷೇಧ’ ಮಾಡಿಲ್ಲ: ಮಾಧುಸ್ವಾಮಿ

    ಲಾಕ್‌ಡೌನ್ ಸಂದರ್ಭ ಕೃಷ್ಣಮಠದ ಒಳಗೆ ಭಕ್ತರ ಪ್ರವೇಶಕ್ಕೆ ಅವಕಾಶ ನೀಡದೆ ಪ್ರಧಾನ ಮಂತ್ರಿ ಮತ್ತು ಜಿಲ್ಲಾಡಳಿತದ ಆದೇಶವನ್ನು ಪಾಲಿಸಲಾಗಿದೆ. ಭಕ್ತರಿಗೆ ಹೊರಗಡೆಯಿಂದ ದರ್ಶನಕ್ಕೆ ವ್ಯವಸ್ಥೆ ಇದ್ದು, ಎಲ್ಲರೂ ಸಹಕಾರ ನೀಡಿದ್ದಾರೆ. ಮಠದಲ್ಲಿ ಅಗತ್ಯ ಸೇವಾ ಪರಿಚಾರಕರು ಮಾತ್ರ ಉಪಸ್ಥಿತರಿದ್ದು ಪೂಜಾ ಕೈಂಕರ್ಯ ಸಂಪ್ರದಾಯಬದ್ಧವಾಗಿ ನಡೆಯುತ್ತಿದೆ.

    ಪ್ರಸ್ತುತ ರಾಜ್ಯ ಸರ್ಕಾರ ದೇವಸ್ಥಾನಗಳಲ್ಲಿ ದೇವರ ದರ್ಶನ ವ್ಯವಸ್ಥೆ ಕಲ್ಪಿಸಲು ತೀರ್ಮಾನ ಮಾಡಿದ್ದು, ಕೃಷ್ಣ ಮಠದಲ್ಲಿ ಅಷ್ಟ ಮಠದ ಯತಿಗಳೇ ಪೂಜೆ ನಡೆಸುವ ಕ್ರಮ ಇರುವುದರಿಂದ ಮಠದ ಸಿಬ್ಬಂದಿಗೆ ಏನಾದರೂ ತೊಂದರೆಯಾದರೆ ಅನುಚಾನ ಪದ್ಧತಿಗೆ ಭಂಗ ಬರುವ ಸಾಧ್ಯತೆಗಳಿವೆ.

    ಇದನ್ನೂ ಓದಿ: ಧೋನಿ ಪತ್ನಿ ಸಾಕ್ಷಿ ಸಿಟ್ಟಾಗಿದ್ದು ಯಾಕೆ…

    ಹೀಗಾಗಿ ಇತರ ಮಠಾಧೀಶರ ಸಹಮತ ಮತ್ತು ಸಲಹೆ ಸೂಚನೆಯನ್ನು ಅನುಸರಿಸಿ ಮುಂದಿನ 10 ಅಥವಾ 15 ದಿನಗಳಲ್ಲಿ ಭಕ್ತರಿಗೆ ಮುಕ್ತ ದರ್ಶನ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

    ಕ್ರಿಶ್ಚಿಯನ್​ಗೆ ಮತಾಂತರಗೊಂಡ ಮುಸ್ಲಿಂ ಯುವತಿಗೆ ತಂದೆಯಿಂದ ಘೋರ ಶಿಕ್ಷೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts