More

    ಉಡುಪಿಯಲ್ಲಿ ಮಳೆ ಅಬ್ಬರ

    ಉಡುಪಿ: ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ಮಳೆಯ ಅಬ್ಬರ ಮುಂದುವರಿದಿದಿದ್ದು, ಹಲವೆಡೆ ಕೃತಕ ನೆರೆ ಆವರಿಸಿದೆ. ಭಾನುವಾರ ಬೆಳಗ್ಗೆ 8.30ರ ಹಿಂದಿನ 24 ಗಂಟೆಗಳ ಕಾಲ 111.67 ಮಿ.ಮೀ ಮಳೆಯಾಗಿದೆ.

    ಉಡುಪಿ, ಕುಂದಾಪುರ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಬೈಂದೂರು ತಾಲೂಕಿನ ನೆರೆ ಪೀಡಿತ ಪ್ರದೇಶಗಳಾದ ನಾವುಂದ, ನಾಡ ಪಂಚಾಯಿತಿ ವ್ಯಾಪ್ತಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಭೇಟಿ ನೀಡಿದ್ದಾರೆ. ಹಿರಿಯಡಕ, ಪೆರ್ಡೂರು, ಪುತ್ತಿಗೆ ಭಾಗದಲ್ಲಿ ಹರಿಯುವ ಸ್ವರ್ಣಾ ನದಿ ತುಂಬಿ ಹರಿಯುತ್ತಿದ್ದು, ಕೃಷಿಕರ ತೋಟಕ್ಕೆ ನೀರು ನುಗ್ಗಿದೆ.

    ಸ್ವರ್ಣಾ ನದಿಯ ನೀರಿನ ಮಟ್ಟ ಕೊಂಚ ಇಳಿಕೆಯಾಗಿದೆ. ಬಜೆ ಡ್ಯಾಂ ಬಳಿ 10.5 ಮೀಟರ್ ಮಟ್ಟದಲ್ಲಿ ನೀರು ಹರಿಯುತ್ತಿದ್ದು, ಶನಿವಾರ ಡ್ಯಾಂ ಮಟ್ಟಕ್ಕಿಂತ 5 ಮೀ. ಎತ್ತರದಲ್ಲಿ ನೀರಿನ ಹರಿವು ಹೆಚ್ಚಿತ್ತು, ಭಾನುವಾರ ಈ ಮಟ್ಟ 2.50 ಮೀಟರ್‌ಗೆ ಇಳಿದಿದೆ. ಜಿಲ್ಲೆಯಲ್ಲಿ ಉಡುಪಿ ತಾಲೂಕಿನಲ್ಲಿ 117.0 ಕುಂದಾಪುರ -116., ಕಾರ್ಕಳದಲ್ಲಿ 102 ಮಿ.ಮೀ. ಮಳೆಯಾಗಿದೆ.

    ಪೆರುಂಪಳ್ಳಿಯಲ್ಲಿ 18 ಮಂದಿ ಸ್ಥಳಾಂತರ: ಸ್ವರ್ಣಾ ನದಿಪಾತ್ರದ ಪೆರಂಪಳ್ಳಿ ಕುದ್ರುವಿನ 18 ನಿವಾಸಿಗಳನ್ನು ಅಪಾಯದ ಸೂಚನೆ ಬೇರೆಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತಾದರೂ, ಭಾನುವಾರ ಬೆಳಗ್ಗೆ ನೆರೆ ತಗ್ಗಿದ ಕಾರಣ, ಎಲ್ಲರೂ ಮನೆಗಳಿಗೆ ವಾಪಸಾದರು.

    ಅದಮಾರು ಮಠದ ದನ, ಕರುಗಳ ಸ್ಥಳಾಂತರ: ಉದ್ಯಾವರದಲ್ಲಿರುವ ಪರ್ಯಾಯ ಅದಮಾರು ಮಠದ ಗೋಶಾಲೆಯ 30ಕ್ಕೂ ಅಧಿಕ ದನ, ಕರುಗಳನ್ನು ಕೃಷ್ಣ ಮಠದ ರಾಜಾಂಗಣ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಅತೀ ಹೆಚ್ಚು ಮಳೆ ಸುರಿಯುತ್ತಿರುವ ಕಾರಣ, ಈ ಪ್ರದೇಶದಲ್ಲಿ ನೆರೆ ಭೀತಿಯಿದೆ. ಗೋವುಗಳ ಸುರಕ್ಷತೆಗಾಗಿ ಪರ್ಯಾಯ ಅದಮಾರು ಶ್ರೀ ವಿಶ್ವಪ್ರಿಯತೀರ್ಥ, ಶ್ರೀ ಈಶಪ್ರಿಯ ಸ್ವಾಮೀಜಿ ಈ ಕ್ರಮ ಕೈಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts