More

    ಪ್ರಜಾಪ್ರಭುತ್ವದ ಮೌಲ್ಯ ಸಂರಕ್ಷಣೆ: ಲೇಖಕಿ ಆರ್.ಪೂರ್ಣಿಮಾ

    ಕೋಟ: ಸಾಹಿತ್ಯ ಜನರ ನಡುವಿನ ಬದುಕಿನ ಅಂಶಗಳಿಂದ ರಚಿತವಾದದ್ದು. ಸಾಹಿತಿಗೆ ಸಮಾಜದ ಬಗ್ಗೆ ಸಂವೇದನೆ ಅಗತ್ಯ. ಸಮಾಜದ ಕಾವಲುಗಾರರಾಗಿ ಸಾಹಿತಿ ಮತ್ತು ಪತ್ರಕರ್ತರು ನಿರಂತರ ಕರ್ತವ್ಯ ನಿರ್ವಹಿಸಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಂರಕ್ಷಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಹಿರಿಯ ಲೇಖಕಿ ಆರ್.ಪೂರ್ಣಿಮಾ ಹೇಳಿದರು.
    ಹಂಗಾರಕಟ್ಟೆ ಚೇತನಾ ಪ್ರೌಢಶಾಲೆಯಲ್ಲಿ ಮಂಗಳವಾರ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಾರಥ್ಯದಲ್ಲಿ ಉಸಿರು ಕೋಟ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ಮಾತನಾಡಿದರು.
    ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಹಿರಿಯ ಲೇಖಕಿ ವೈದೇಹಿ, ಪ್ರತಿಸ್ಪಂದಿಸಿ ಹಿಂದಿ/ಇಂಗ್ಲಿಷ್ ಭಾಷೆಗಳೊಂದಿಗೆ ನಮ್ಮ ಭಾಷೆಗೆ ಹೆಚ್ಚಿನ ಮಹತ್ವ ನೀಡಬೇಕು. ಸಾಹಿತ್ಯಕ್ಕೂ ಹೆಚ್ಚು ಪ್ರೀತಿ ಮುಖ್ಯ ಎಂದರು.
    ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕಲ್ಕೂರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಎನ್.ನಾಗೂರು, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಚೇತನಾ ಪ್ರೌಢಶಾಲೆ ಮುಖ್ಯ ಶಿಕ್ಷಕ ಗಣೇಶ್ ಜಿ., ಬಿ.ಡಿ.ಶೆಟ್ಟಿ ಕಾಲೇಜು ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ, ಸವಿತಾ ನಾಗಭೂಷಣ, ಕಸಾಪ ವಿವಿಧ ತಾಲೂಕು ಅಧ್ಯಕ್ಷರು ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಕೋಟ ನರೇಂದ್ರ ಕುಮಾರ್ ಮತ್ತು ಅಲ್ತಾರು ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಬಾರ್ಕೂರು ಕೂಭಾಷಿಕ ಕೊರಗರ ಯುವ ಕಲಾವೇದಿಕೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಗೊಂಡವು.

    ಸಾಧಕರಿಗೆ ಸನ್ಮಾನ: ಲೋಹಶಿಲ್ಪಿ ಗಣಪತಿ ಆಚಾರ್ಯ, ರಂಗಭೂಮಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹರಿಶ್ಚಂದ್ರ ಹೆಬ್ಬಾರ್, ಧಾರ್ಮಿಕ ಕ್ಷೇತ್ರದ ಕೃಯಬೆಟ್ಟು ವಿಶ್ವನಾಥ ಭಟ್, ಸಹಕಾರಿ ಕ್ಷೇತ್ರದ ಇರ್ಮಾಡಿ ತಿಮ್ಮಪ್ಪ ಹೆಗ್ಡೆ, ವೈದ್ಯಕೀಯ ಕ್ಷೇತ್ರದ ಡಾ.ಪುಷ್ಪಗಂಧಿ, ಸಮಾಜಸೇವೆಗೆ ಡಾ.ಭಾರ್ಗವಿ ಐತಾಳ್, ಧಾರ್ಮಿಕ ಕ್ಷೇತ್ರದ ಕ್ಲಮೆಂಟ್ ಮಸ್ಕರೇನಸ್, ಯಕ್ಷಗಾನದ ಸರ್ವೋತ್ತಮ ಗಾಣಿಗ, ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್, ಕಲಾವಿದ ಜೇಮ್ಸ್‌ವಾಝ್ ಅವರನ್ನು ಸನ್ಮಾನಿಸಲಾಯಿತು. ಸಂಘ ಸಂಸ್ಥೆಗಳಾದ ಕೋಟ ಪಂಚವರ್ಣ, ಹೊಸೂರಿನ ಸಂಚಲನ, ಕಾರ್ಕಳದ ಯಕ್ಷಕಲಾರಂಗವನ್ನು ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts