More

    12 ತಿಂಗಳಿಂದ ಉಡುಪಿ ನಂ.1, ಕಂದಾಯ ಸೇವೆ ರಾಜ್ಯಮಟ್ಟದ ರ‌್ಯಾಂಕಿಂಗ್

    ಉಡುಪಿ: ಕಂದಾಯ ಸೇವೆಗೆ ಸಂಬಂಧಿಸಿ ಸಾರ್ವಜನಿಕರಿಂದ ಸಲ್ಲಿಕೆಯಾದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಮೂಲಕ ಉಡುಪಿ ಜಿಲ್ಲೆ ರಾಜ್ಯದಲ್ಲಿ ಸತತ 12 ತಿಂಗಳಿನಿಂದ ಮೊದಲ ಸ್ಥಾನ ಕಾಪಾಡಿಕೊಂಡಿದೆ.

    ಸೆಪ್ಟೆಂಬರ್‌ನಲ್ಲಿ ಸರಾಸರಿ 64.4 ಅಂಕ ಗಳಿಸುವ ಮೂಲಕ ಜಿಲ್ಲೆ ಕಂದಾಯ ಸೇವೆಯಲ್ಲಿ ಮುಂಚೂಣಿಯಲ್ಲಿದೆ. ನೋಟಿಸು ರಹಿತ ಅವಿವಾದಿತ ಭೂಮಿ ಮ್ಯುಟೇಶನ್, ನೋಟಿಸು ಸಹಿತ ಅವಿವಾದಿತ ಭೂಮಿ ಮ್ಯುಟೇಶನ್, ಅಫಿಡವಿಟ್ ಆಧರಿತ ಭೂ ಪರಿವರ್ತನೆ, ಕಂದಾಯ ನ್ಯಾಯಾಲಯಗಳಾದ ಎಸಿ ಕೋರ್ಟ್, ಡಿಸಿ ಕೋರ್ಟ್ ಮತ್ತು ಪಹಣಿ ಕಾಲಂ 3, 9ರ ವ್ಯತ್ಯಾಸ, ಆರ್‌ಟಿಸಿ ಪ್ರಕರಣಗಳ ತ್ವರಿತ ವಿಲೇವಾರಿಯಲ್ಲಿ ಜಿಲ್ಲೆ ಮೊದಲ ಸ್ಥಾನ ಕಾಪಾಡಿಕೊಂಡಿದೆ.

    ಕಂದಾಯ ಸೇವೆಗೆ ಸಂಬಂಧಿಸಿ ಉಡುಪಿ 64.4, ದಾವಣಗೆರೆ 41.9, ತುಮಕೂರು 35.6, ಚಿಕ್ಕಮಗಳೂರು 35.1, ರಾಯಚೂರು 34.8 ಸರಾಸರಿ ಅಂಕ ಪಡೆದಿವೆ. ಈ ಐದು ಜಿಲ್ಲೆಯ ಜಿಲ್ಲಾಧಿಕಾರಿ, ಕಂದಾಯ ಅಧಿಕಾರಿಗಳು, ಸಿಬ್ಬಂದಿಯನ್ನು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಪ್ರಶಂಸಿಸಿದ್ದಾರೆ.

    ಕಂದಾಯ ಸೇವೆ ಜನರಿಗೆ ಅತ್ಯುತ್ತಮವಾಗಿ ನೀಡಬೇಕೆಂಬ ಆಶಯದಂತೆ ಜಿಲ್ಲಾಧಿಕಾರಿಯಾಗಿ ಬಂದ ಬಳಿಕ ಆರಂಭದಿಂದಲೂ ಈ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿತ್ತು. ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳಿಂದ ನಿತ್ಯ ಬಾಕಿಯಿರುವ ಅರ್ಜಿಗಳ ಮಾಹಿತಿ, ಸೂಚನೆ ನೀಡುವ ಕೆಲಸವಾಗುತ್ತದೆ. ತಹಸೀಲ್ದಾರ್, ಎಸಿ, ಆರ್‌ಐ, ವಿಎಗಳ ಸಹಿತ ಕಂದಾಯ ವಿಭಾಗದ ಎಲ್ಲ ಸಿಬ್ಬಂದಿ ಶ್ರಮ ಶ್ಲಾಘನೀಯ.
    – ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts