More

    ಉಡುಪಿ ಜಿಲ್ಲಾಧಿಕಾರಿ- ಮಾಜಿ ಸಚಿವರ ಟ್ವೀಟ್ ವಾರ್!

    ಉಡುಪಿ: ದುಬೈಯಿಂದ ಉಡುಪಿಗೆ ಆಗಮಿಸಿದ್ದ ಗರ್ಭಿಣಿಯ ಕ್ವಾರಂಟೈನ್ ಅವಧಿ ಮುಗಿದಿದ್ದರೂ ಮನೆಗೆ ಕಳುಹಿಸುತ್ತಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಮತ್ತು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಧ್ಯೆ ಬುಧವಾರ ಟ್ವೀಟ್ ವಾರ್ ನಡೆದಿದೆ.

    ‘‘ನಿಯಮಗಳ ಪ್ರಕಾರ ಗರ್ಭಿಣಿಯರನ್ನು ಶೀಘ್ರ ತಪಾಸಣೆ ನಡೆಸಿ ಮನೆಗೆ ಕಳುಹಿಸಿಕೊಡಬೇಕು. ಇವರು ಹೋಟೆಲ್‌ನಲ್ಲಿ 15 ದಿನಗಳ ಕ್ವಾರಂಟೈನ್ ಅವಧಿ ಪೂರೈಸಿದ್ದಾರೆ. ಈಕೆಯ ಗಂಟಲು ಮಾದರಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಇನ್ನೂ ವರದಿ ಬಂದಿಲ್ಲ. ಈ ವಿಳಂಬಕ್ಕೆ ಯಾರು ಕಾರಣ’’ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಟ್ವೀಟ್ ಮಾಡಿದ್ದರು.

    ಇದನ್ನೂ ಓದಿ  ತಮಿಳುನಾಡಿನಲ್ಲಿ ಒಂದೇ ದಿನ 817 ಕರೊನಾ ಸೋಂಕಿತರು ಪತ್ತೆ

    ‘‘ಮನೆ ಆಹಾರ ವಿತರಣೆಯನ್ನೂ ಸ್ಥಗಿತಗೊಳಿಸಲಾಗಿದೆ. ಜಿಲ್ಲಾಡಳಿತ ಸರ್ಕಾರಿ ನಿಯಮ ಪಾಲಿಸುತ್ತಿಲ್ಲ. ಡಿಸಿ ಬೇಜವಾವ್ದಾರಿಯಿಂದ ವರ್ತಿಸುತ್ತಿದ್ದಾರೆ’’ ಎಂದೂ ಆರೋಪಿಸಿದ್ದರು. ಇದನ್ನು ಡಿಸಿ ಮತ್ತು ಮುಖ್ಯಮಂತ್ರಿಗೆ ಟ್ಯಾಗ್ ಮಾಡಿದ್ದರು.

    ಇದಕ್ಕೆ ಟ್ವೀಟ್ ಮೂಲಕವೇ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಜಗದೀಶ್, ‘‘ಬೇಜವಾಬ್ದಾರಿಯ ಪ್ರಶ್ನೆಯೇ ಇಲ್ಲ. ಜಿಲ್ಲೆಗೆ 8 ಸಾವಿರ ಮಂದಿ ಹೊರ ರಾಜ್ಯ ಮತ್ತು ವಿದೇಶದಿಂದ ಬಂದಿದ್ದಾರೆ. ಅವರೆಲ್ಲರನ್ನೂ ಟೆಸ್ಟ್ ಮಾಡಿದ ಬಳಿಕವೇ ಬಿಡಬೇಕಾಗುತ್ತದೆ. ದಯವಿಟ್ಟು ಎಲ್ಲರೂ ಸಹಕರಿಸಬೇಕು. ಗರ್ಭಿಣಿ ಪಾಸಿಟಿವ್ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದರು. ಅವರನ್ನು 14 ದಿನದ ನಂತರ ಪರೀಕ್ಷಿಸಿ, ವರದಿ ನೋಡಿಕೊಂಡು ನಿರ್ಧರಿಸಬೇಕಾಗುತ್ತದೆ’’ ಎಂದು ತಿಳಿಸಿದ್ದಾರೆ.

    ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವ ನಿರ್ಧಾರ ಕೈಬಿಟ್ಟಿತೇ ರಾಜ್ಯ ಸರ್ಕಾರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts