More

    ಉಡುಪಿಯಲ್ಲಿ ಕರೊನಾಕ್ಕೆ ಮತ್ತೊಂದು ಬಲಿ

    ಉಡುಪಿ: ಜಿಲ್ಲೆಯಲ್ಲಿ ಕರೊನಾಗೆ ಸಂಬಂಧಿಸಿ ಎರಡನೇ ಸಾವಿನ ಪ್ರಕರಣ ವರದಿಯಾಗಿದೆ. ಗುರುವಾರ ಕುಸಿದು ಬಿದ್ದು ಮೃತಪಟ್ಟ 54 ವರ್ಷದ ತೆಕ್ಕಟ್ಟೆಯ ಪುರುಷನಿಗೆ ಕರೊನಾ ಸೋಂಕು ಇರುವುದು ಶುಕ್ರವಾರ ಗಂಟಲು ದ್ರವ ಮಾದರಿ ಪರೀಕ್ಷೆಯಲ್ಲಿ ದೃಢಪಟ್ಟಿದೆ.

    ಗುರುವಾರ ಮುಂಬೈಯಿಂದ ಪತ್ನಿ, ಪುತ್ರಿಯೊಂದಿಗೆ ಆಗಮಿಸಿದ ಅವರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ನಡೆಸಿದಾಗ ಜ್ವರ ಇರಲಿಲ್ಲ. ಹೀಗಾಗಿ ಅವರಿಗೆ ಹೋಂ ಕ್ವಾರಂಟೈನ್ ವಿಧಿಸಲಾಗಿತ್ತು. ಮನೆಗೆ ತಲುಪಿ ಎರಡು ಗಂಟೆ ಬಳಿಕ ಕುಸಿದು ಬಿದ್ದು ಮೃತಪಟ್ಟಿದ್ದರು. ಯಾವ ಕಾರಣದಿಂದ ಮೃತಪಟ್ಟಿರಬಹುದು ಎನ್ನುವುದು ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ತಿಳಿಯುತ್ತದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

    ಮೃತಪಟ್ಟ ವ್ಯಕ್ತಿ ಮನೆ ಇದ್ದ ಪ್ರದೇಶವನ್ನು ಕಂಟೈನ್ಮೆಂಟ್ ವಲಯವಾಗಿ ಹಾಗೂ ಪರಿಸರವನ್ನು ಬಫರ್ ವಲಯವಾಗಿ ಗುರುತಿಸಲು ಕ್ರಮ ಕೈಗೊಳ್ಳಲಾಗಿದೆ. ಮನೆಯವರನ್ನು ಕರೊನಾ ಪರೀಕ್ಷೆಗೊಳಪಡಿಸಿದ್ದು, ಅವರಲ್ಲಿ ಪಾಸಿಟಿವ್ ಬಂದರೆ ಐಸೋಲೇಶನ್ ವಾರ್ಡ್‌ಗೆ ಸ್ಥಳಾಂತರಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

    ಮೇ 14ರಂದು ಮಹಾರಾಷ್ಟ್ರದಿಂದ ಆಗಮಿಸಿದ್ದ ಬೈಂದೂರು ತಾಲೂಕಿನ 54 ವರ್ಷದ ವ್ಯಕ್ತಿ ಹೃದಯಾಘಾತ ಕಾರಣದಿಂದ ಮೃತಪಟ್ಟಿರುವುದು ಜಿಲ್ಲೆಯಲ್ಲಿ ಮೊದಲ ಕರೊನಾ ಸಾವು ಪ್ರಕರಣ.

     11 ಪಾಸಿಟಿವ್, 9 ಗುಣಮುಖ: ಶುಕ್ರವಾರ ಜಿಲ್ಲೆಯಲ್ಲಿ 11 ಪಾಸಿಟಿವ್ ದಾಖಲಾಗಿದೆ. ಮಹಾರಾಷ್ಟ್ರದಿಂದ ಬಂದಿದ್ದ 4 ಜನರಿಗೆ ಮತ್ತು ಮಹಾರಾಷ್ಟ್ರದಿಂದ ಆಗಮಿಸಿದವರ ಜತೆಗೆ ಸಂಪರ್ಕವಾದ 5 ಮಂದಿ ಮತ್ತು ತಮಿಳುನಾಡಿನಿಂದ ಬಂದಿದ್ದ ಇಬ್ಬರಿಗೆ ಕರೊನಾ ದೃಢಪಟ್ಟಿದೆ. 11 ಮಂದಿ ಉಡುಪಿಯವರಾಗಿದ್ದು, ಐದು ಮಂದಿ ಪುರುಷರು, ನಾಲ್ವರು ಮಹಿಳೆಯರು, ಇಬ್ಬರು ಮಕ್ಕಳು. ಎಲ್ಲರನ್ನೂ ನಿಗದಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 9 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 43 ಮಂದಿಯ ವರದಿ ನೆಗೆಟಿವ್ ಬಂದಿದೆ. 87 ಮಂದಿಯ ಮಾದರಿ ಸಂಗ್ರಹಿಸಲಾಗಿದೆ. 99 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲೆಯಲ್ಲಿ ಒಟ್ಟು ಕರೊನಾ ಪಾಸಿಟಿವ್ ಸಂಖ್ಯೆ 1050ಕ್ಕೆ ಏರಿಕೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts