More

    ಆ ಕಾಲೇಜಲ್ಲಿ ಹಿಜಾಬ್​ ತೊಡಲು ಈ ಹಿಂದೆ ಅವಕಾಶ ಇರಲಿಲ್ಲ; ಮಹತ್ವದ ದಾಖಲೆ ಬಹಿರಂಗ

    ಉಡುಪಿ: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಿಂದ ಆರಂಭವಾದ ಹಿಜಾಬ್​ ಹೋರಾಟಕ್ಕೆ ಒಂದು ರೀತಿಯಲ್ಲಿ ಇದೀಗ ಹಿನ್ನಡೆಯಾಗುವಂಥ ಬೆಳವಣಿಗೆ ಉಂಟಾಗಿದೆ. ಅದೇನೆಂದರೆ ಹಿಜಾಬ್ ಧರಿಸಿ ತರಗತಿಗೆ ಬರಲು ಮೊದಲಿನಿಂದಲೂ ಅವಕಾಶ ಇತ್ತು ಎಂಬ ವಾದಕ್ಕೆ ವ್ಯತಿರಿಕ್ತವಾದ ದಾಖಲೆಯೊಂದು ಬಹಿರಂಗಗೊಂಡಿದೆ.

    ಉಡುಪಿ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಆರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುವ ಮೂಲಕ ಹಿಜಾಬ್​ ಹೋರಾಟದ ಕಿಡಿ ಹೊತ್ತಿಸಿದ್ದರು. ಹಿಜಾಬ್ ಧರಿಸಿ ಬರಲು ಮೊದಲಿನಿಂದಲೂ ಅವಕಾಶವಿತ್ತು, ಯಾಕೆ ತಡೆದಿದ್ದು ಎಂಬ ವಾದ ಬಳಿಕ ಕೇಳಿಬಂದಿತ್ತು. ಆದರೆ ಆ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬರುವ ಪದ್ಧತಿ ಮೊದಲಿನಿಂದಲೂ ಇರಲಿಲ್ಲ ಎಂಬುದಕ್ಕೆ ಈ ದಾಖಲೆ ಬಿಡುಗಡೆ ಮಾಡಲಾಗಿದೆ.

    ಕಾಲೇಜಿನ 2009-10ನೇ ಸಾಲಿನ ವಾರ್ಷಿಕ ಸಂಚಿಕೆಯಲ್ಲಿನ ವಿದ್ಯಾರ್ಥಿಗಳ ಗ್ರೂಪ್​ ಫೋಟೋಗಳನ್ನು ಬಹಿರಂಗಪಡಿಸಲಾಗಿದ್ದು, ಅದರಲ್ಲಿ ಎಲ್ಲ ವಿದ್ಯಾರ್ಥಿನಿಯರೂ ಸಮಾನವಸ್ತ್ರಸಂಹಿತೆಯಲ್ಲಿ ಇರುವುದು ಕಂಡುಬಂದಿದೆ. ಕಾಲೇಜಿನಲ್ಲಿ ಮೊದಲಿನಿಂದಲೂ ಹಿಜಾಬ್​ಗೆ ಅವಕಾಶವಿತ್ತು ಎಂಬ ಕೆಲವು ವಿದ್ಯಾರ್ಥಿನಿಯರ ವಾದವನ್ನು ಈ ಫೋಟೋಗಳ ಸಾಕ್ಷ್ಯ ಒದಗಿಸುವ ಮೂಲಕ ನಿರಾಕರಿಸಲಾಗಿದೆ.

    ಆ ಕಾಲೇಜಲ್ಲಿ ಹಿಜಾಬ್​ ತೊಡಲು ಈ ಹಿಂದೆ ಅವಕಾಶ ಇರಲಿಲ್ಲ; ಮಹತ್ವದ ದಾಖಲೆ ಬಹಿರಂಗ

    ಆ ಕಾಲೇಜಲ್ಲಿ ಹಿಜಾಬ್​ ತೊಡಲು ಈ ಹಿಂದೆ ಅವಕಾಶ ಇರಲಿಲ್ಲ; ಮಹತ್ವದ ದಾಖಲೆ ಬಹಿರಂಗ ಆ ಕಾಲೇಜಲ್ಲಿ ಹಿಜಾಬ್​ ತೊಡಲು ಈ ಹಿಂದೆ ಅವಕಾಶ ಇರಲಿಲ್ಲ; ಮಹತ್ವದ ದಾಖಲೆ ಬಹಿರಂಗ ಆ ಕಾಲೇಜಲ್ಲಿ ಹಿಜಾಬ್​ ತೊಡಲು ಈ ಹಿಂದೆ ಅವಕಾಶ ಇರಲಿಲ್ಲ; ಮಹತ್ವದ ದಾಖಲೆ ಬಹಿರಂಗ

    ಆ ಕಾಲೇಜಲ್ಲಿ ಹಿಜಾಬ್​ ತೊಡಲು ಈ ಹಿಂದೆ ಅವಕಾಶ ಇರಲಿಲ್ಲ; ಮಹತ್ವದ ದಾಖಲೆ ಬಹಿರಂಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts