More

    ಉಡುಪಿಯ ಮೂವರಿಗೆ ಸಿಎಂ ಪದಕ

    ಉಡುಪಿ: ಜಿಲ್ಲೆಯ ಪೊಲೀಸ್ ಇಲಾಖೆಯ ಮೂವರಿಗೆ 2018ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಲಭಿಸಿದೆ. ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್, ಕುಂದಾಪುರ ವೃತ್ತ ನಿರೀಕ್ಷಕ ಕೆ.ಆರ್.ಗೋಪಿಕೃಷ್ಣ, ಜಿಲ್ಲಾ ಸಶಸ್ತ್ರ ಪೊಲೀಸ್ ಮೀಸಲು ಪಡೆಯ ಹೆಡ್ ಕಾನ್ಸ್‌ಟೆಬಲ್ ಸಂತೋಷ್ ಜೆ, ಸಿಎಂ ಚಿನ್ನದ ಪದಕ ಪಡೆಯುವವರು.

    ವೃತ್ತ ನಿರೀಕ್ಷಕ ಮಂಜುನಾಥ್ ತೀರ್ಥಹಳ್ಳಿಯ ತಾಲೂಕಿನ ಶಂಕರಹಳ್ಳಿಯ ನಿವಾಸಿ.ಅವರು 1998ರಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದರು. ಮೈಸೂರು, ಕೊಡಗಿನ ವಿರಾಜಪೇಟೆ, ಶನಿವಾರ ಸಂತೆ, ಸಕಲೇಶಪುರ, 2005 ರಿಂದ 2015ರ ವರೆಗೆ ಶಿವಮೊಗ್ಗ ಸಿಟಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2012ರಲ್ಲಿ ವೃತ್ತ ನಿರೀಕ್ಷಕರಾಗಿ ಬಡ್ತಿ ಹೊಂದಿದ್ದ ಮಂಜುನಾಥ ಮಂಗಳೂರು ಸಂಚಾರ, ಸುರತ್ಕಲ್ ಠಾಣೆಯಲ್ಲೂ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಉಡುಪಿ ನಗರ ವೃತ್ತ ನಿರೀಕ್ಷಕರಾಗಿ ಕರ್ತವ್ಯ ಸಲ್ಲಿಸುತ್ತಿದ್ದಾರೆ.

    ಸಂತೋಷ್ ಜೆ.ಅವರು 21 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಉಡುಪಿ, ಅಂಬಲಪಾಡಿ ನಿವಾಸಿ ಆಗಿರುವ ಇವರು ಈ ಹಿಂದೆ ಆ್ಯಂಟಿ ನಕ್ಸಲ್ ಫೋರ್ಸ್ ಕಾರ್ಕಳ, ಆಗುಂಬೆ, ಅಮಾಸೆಬೈಲಿನಲ್ಲಿ 4 ವರ್ಷ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಜಿಲ್ಲಾ ಸಶಸ್ತ್ರ ಪೊಲೀಸ್ ಮೀಸಲು ಪಡೆಯಲ್ಲಿ ಹೆಡ್‌ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಅವರು ವೀರಪ್ಪನ್ ವಿರುದ್ಧದ ಎಸ್‌ಟಿಎಫ್ ಕಾರ್ಯಪಡೆಯಲ್ಲಿದ್ದರು. ಹಾಸನ, ಉಳ್ಳಾಲ ಸಹಿತ ರಾಜ್ಯದ ಬೇರೆ ಬೇರೆ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ಪ್ರಸಕ್ತ ಕುಂದಾಪುರ ವೃತ್ತ ನಿರೀಕ್ಷಕರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts