More

    ಉಡುಪಿ ಜಿಲ್ಲಾ ಗಡಿ ಸೀಲ್‌ಡೌನ್

    ಉಡುಪಿ/ಪಡುಬಿದ್ರಿ: ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಕೈಗೊಂಡ ನಿರ್ಧಾರದಂತೆ ಜಿಲ್ಲೆಯ ಹತ್ತು ಗಡಿ ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ತಿಳಿಸಿದ್ದಾರೆ.

    ಹೆಜಮಾಡಿ, ಶಿರೂರು, ಕೊಲ್ಲೂರು, ಸಿದ್ಧಾಪುರ-ಹೊಸಂಗಡಿ, ಸೋಮೇಶ್ವರ, ಮಾಳ, ಬೆಳ್ಮಣ್ ಗಡಿಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಜಿಲ್ಲೆಗೆ ವೈದ್ಯಕೀಯ ತುರ್ತು ಸಂದರ್ಭ, ಕೆಲವು ಸರಕು, ಅಗತ್ಯ ವಸ್ತುಗಳ ಸಾಗಣೆಗೆ ಮಾತ್ರ ಪ್ರವೇಶ. ಕಟ್ಟುನಿಟ್ಟಿನ ತಪಾಸಣೆ ಇರಲಿದ್ದು, ಅನಗತ್ಯ ಜಿಲ್ಲೆಗೆ ಪ್ರವೇಶ ಮಾಡಿದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಸಿದೆ.

    ಜಿಲ್ಲೆಯಲ್ಲಿ ಇನ್ನು 15 ದಿನಗಳ ಕಾಲ ಸಾರ್ವಜನಿಕ ಬಸ್ ಸೇವೆ ಸ್ಥಗಿತಗೊಳಿಸಲಾಗಿದ್ದು, ಇತರ ಆರ್ಥಿಕ ಚಟುವಟಿಕೆಗಳು ಷರತ್ತಿನೊಂದಿಗೆ ಮುಂದುವರಿಯಲಿವೆ.
    ‘ತುರ್ತು ಆರೋಗ್ಯ ಸಂಬಂಧಿ ಸಮಸ್ಯೆಗಾಗಿ ಆಗಮಿಸುವ ಆಂಬುಲೆನ್ಸ್‌ಗಳು, ಸರ್ಕಾರಿ ಸ್ವಾಮ್ಯದ ಕಂಪನಿಗಳು, ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಸಿಬ್ಬಂದಿಗೆ ಸೂಕ್ತ ಪರಿಶೀಲನೆ ಬಳಿಕ ಪ್ರವೇಶಕ್ಕೆ ಅನುಮತಿ ಇದೆ. ಇತರರಿಗೆ ಪ್ರವೇಶ ಇರುವುದಿಲ್ಲ’ ಎಂದು ಕಾಪು ತಹಸೀಲ್ದಾರ್ ಮಹಮ್ಮದ್ ಇಸಾಕ್ ತಿಳಿಸಿದ್ದಾರೆ.

    ಚರ್ಚ್ ಸಾಮೂಹಿಕ ಪೂಜೆ ರದ್ದು
    ಉಡುಪಿ: ಜಿಲ್ಲೆಯ ಎಲ್ಲ ಚರ್ಚುಗಳಲ್ಲಿ ಸಾಮೂಹಿಕ ಪೂಜೆ, ಧಾರ್ಮಿಕ ಆಚರಣೆ ರದ್ದುಗೊಳಿಸಲಾಗಿದೆ. ಈ ಆದೇಶ ಜಿಲ್ಲಾಡಳಿತದ ಮುಂದಿನ ಮಾರ್ಗಸೂಚಿ ಬರುವ ತನಕ ಜಾರಿಯಲ್ಲಿ ಇರುತ್ತದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ತಿಳಿಸಿದ್ದಾರೆ.

    ನಮಾಜ್‌ಗೆ ತಾತ್ಕಾಲಿಕ ನಿರ್ಬಂಧ: ಕರೊನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಜಾರಿಗೊಳಿಸಿದ ಹೊಸ ಆದೇಶದನ್ವಯ ನಗರದ ಜಾಮಿಯಾ ಮಸೀದಿ ಎಲ್ಲ ರೀತಿಯ ಸಾಮೂಹಿಕ ನಮಾಜನ್ನು ತಾತ್ಕಾಲಿಕ ತಡೆ ಹಿಡಿದಿದ್ದು, ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಎಲ್ಲರೂ ಮನೆಯಲ್ಲಿಯೇ ನಮಾಜ್ ನಿರ್ವಹಿಸುವಂತೆ ಮಸೀದಿ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts