More

  ಉಡುಪಿಯಲ್ಲಿ ಎಬಿವಿಪಿ ಪ್ರತಿಭಟನೆ

  ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ ಪ್ರೊ.ಅರಬಿ ಹಾಗೂ ತನಿಖಾ ವರದಿ ಮುಚ್ಚಿಟ್ಟ ಮಾಜಿ ಕುಲಸಚಿವ ಡಾ. ಎ.ಎಂ.ಖಾನ್ ಅವರನ್ನು ಅಮಾನತುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎಬಿವಿಪಿ ಉಡುಪಿ ನಗರದ ವತಿಯಿಂದ ತಾಲೂಕು ಕಚೇರಿ ಸಮೀಪ ಪ್ರತಿಭಟನೆ ನಡೆಸಲಾಯಿತು.

  ಉಡುಪಿ ನಗರ ಕಾರ್ಯದರ್ಶಿ ??? ಮಾತನಾಡಿ, ಪ್ರಕರಣ ನಡೆದು 2-3 ವಷಗಳಾದರೂ ಯಾವುದೇ ಕ್ರಮ ಕೈಗೊಳ್ಳದೆ, ವಿದ್ಯಾರ್ಥಿನಿಗೆ ಅನ್ಯಾಯ ಮಾಡಲಾಗುತ್ತಿದೆ.

  ಪ್ರಕರಣದ ವರದಿಯನ್ನು ಮುಚ್ಚಿಟ್ಟ ಆರೋಪಿ ಮಾಜಿ ಕುಲಸಚಿವ ಡಾ. ಎ ಎಂ ಖಾನ್ ಇನ್ನೂ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  ಪ್ರತಿಭಟನೆ ಬಳಿಕ ಉಡುಪಿ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಅಭಾವಿಪ ರಾಜ್ಯ ಸಹ ಕಾರ್ಯದರ್ಶಿ ಸಂದೇಶ್ ರೈ, ಪ್ರೊ.ಶಿವಾನಂದ ನಾಯಕ್, ತಾಲೂಕು ಸಂಚಾಲಕ ಶ್ರೀಹರಿ, ಸಿದ್ದಾಂತ್, ದರ್ಶನ್, ಆಶೀಶ್, ಶ್ರೇಯಸ್, ಸೂರಜ್ ಪ್ರತಿಭಟನೆಯಲ್ಲಿದ್ದರು.

  See also  ಗ್ರಾಮ ಸಹಾಯಕ ಅಸಹಾಯಕ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts