More

    ಉಡುಪಿಯಲ್ಲಿ 7 ಸಾವಿರ ಮಂದಿ ಮನೆಗೆ, ಸರ್ಕಾರದ ಆದೇಶ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್

    ಉಡುಪಿ: ಜಿಲ್ಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದ 7 ಸಾವಿರ ಮಂದಿಯನ್ನು ಒಂದೇ ದಿನ ಬಿಡುಗಡೆ ಮಾಡಲಾಗಿದ್ದು, ಜನರು ಆತಂಕಗೊಂಡಿದ್ದಾರೆ.

    ಜಿಲ್ಲೆಗೆ ಹೊರರಾಜ್ಯಗಳಿಂದ 8010 ಹಾಗೂ ವಿದೇಶದಿಂದ 52 ಮಂದಿ ಆಗಮಿಸಿದ್ದು, ಸಾಂಸ್ಥಿಕ ಹಾಗೂ ಹೋಟೆಲ್ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಮಹಾರಾಷ್ಟ್ರದಿಂದ ಅತಿ ಹೆಚ್ಚು ಮಂದಿ ಬಂದಿದ್ದು, ಇವರಲ್ಲಿ 122 ಮಂದಿಗೆ ಪಾಸಿಟಿವ್ ಪತ್ತೆಯಾಗಿದೆ. ವಿದೇಶದಿಂದ ಬಂದ 12, ತೆಲಂಗಾಣ 6, ಕೇರಳ 3 ಹಾಗೂ 6 ಮಂದಿ ಸ್ಥಳೀಯರಲ್ಲಿ ಸೋಂಕು ದೃಢಪಟ್ಟಿದೆ.

    ‘ಹೊರ ದೇಶ ಹಾಗೂ ರಾಜ್ಯಗಳಿಂದ ಬಂದು 14 ದಿನಗಳ ಕ್ವಾರಂಟೈನ್‌ಗೆ ಒಳಗಾದವರಿಗೆ ಮನೆಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಸರ್ಕಾರದ ಹೊಸ ಆದೇಶದಂತೆ ಮುಂದೆ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಅವಧಿ ಮುಗಿಸಿದವರು ಮತ್ತೆ 7 ದಿನ ಹೋಂ ಕ್ವಾರಂಟೈನ್‌ನಲ್ಲಿರುವುದು ಕಡ್ಡಾಯ. ಈ ಸಂದರ್ಭ ಕರೊನಾ ಸೋಂಕಿನ ಲಕ್ಷಣ ಕಂಡುಬಂದರೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು.

    ಲ್ಲಾಡಳಿತದ ಸೂಚನೆಯಂತೆ ಹೋಂ ಕ್ವಾರಂಟೈನ್‌ಗೆ ಹೋಗುವವರು ಮೊಬೈಲ್‌ನಲ್ಲಿ ಜಿಯೋ ಫೆನ್ಸಿಂಗ್ ಮಾಡಿರುವ ಆ್ಯಪ್ ಅಳವಡಿಸಿಕೊಳ್ಳಬೇಕು. ಕ್ವಾರಂಟೈನ್‌ನಲ್ಲಿರುವವರು ಮನೆಯಿಂದ ಹೊರಬಂದರೆ ತಕ್ಷಣ ಜಿಲ್ಲಾಡಳಿತಕ್ಕೆ ಮಾಹಿತಿ ರವಾನೆಯಾಗುತ್ತದೆ. ಕ್ವಾರಂಟೈನ್ ನಿಯಮ ಉಲ್ಲಂಘಿಸಿದವರಿಗೆ ಮೊದಲ ಬಾರಿ ಎಚ್ಚರಿಕೆ ಹಾಗೂ ಎರಡನೇ ಬಾರಿ ಪ್ರಕರಣ ದಾಖಲು ಮಾಡಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

    ಈಗ ಬಿಡುಗಡೆಯಾದವರ ಪೈಕಿ ಬಹುತೇಕ ಮಂದಿಯ ಸ್ವಾಬ್ ಟೆಸ್ಟ್ ವರದಿ ಬರಬೇಕಿದೆ. ಅದಕ್ಕೂ ಮೊದಲೇ ಹೋಂ ಕ್ವಾರಂಟೈನ್‌ಗೆ ಕಳುಹಿಸಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಅವರು ಹೊರಗಡೆ ಓಡಾಡಿದರೆ ಕರೊನಾ ಸಮುದಾಯಕ್ಕೆ ಹರಡುವ ಭೀತಿಯೂ ಆವರಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts