More

    ಪ್ರಾಥಮಿಕ, ಪ್ರೌಢ ವಿಭಾಗದ 17 ಮಂದಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ  

    ಉಡುಪಿ: ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ 17 ಶಿಕ್ಷಕರು ಆಯ್ಕೆಯಾಗಿದ್ದಾರೆ. ಸೆ.5ರ ಬೆಳಗ್ಗೆ 9.30ಕ್ಕೆ ಸೈಂಟ್ ಸಿಸಿಲಿ ಪ್ರೌಢಶಾಲೆಯಲ್ಲಿ ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರದಾನ ನಡೆಯಲಿದೆ.
    ವಾರಾಂತ್ಯ ಕರ್ಫ್ಯೂ ಇರುವ ಕಾರಣ ಸೀಮಿತ ಸಂಖ್ಯೆಯಲ್ಲಿ ಕಾರ್ಯಕ್ರಮ ನಡೆಸಲಾಗುವುದು. ಒಟ್ಟು 17 ಮಂದಿ ಪ್ರಶಸ್ತಿ ಪುರಸ್ಕೃತರು, 35 ಮಂದಿ ನಿವೃತ್ತ ಶಿಕ್ಷಕರು ಮತ್ತು ಅತಿಥಿಗಳು ಮಾತ್ರ ಭಾಗವಹಿಸಲಿದ್ದಾರೆ ಎಂದು ಡಿಡಿಪಿಐ ಎನ್.ಎಚ್.ನಾಗೂರ ತಿಳಿಸಿದ್ದಾರೆ.
    ಕಿರಿಯ ಪ್ರಾಥಮಿಕ ವಿಭಾಗ: ಯಡ್ತಾಡಿ ಶಾಲೆಯ ಸಹ ಶಿಕ್ಷಕಿ ಶಾಂತಾ ಪೈ (ಬ್ರಹ್ಮಾವರ ವಲಯ), ಕಿಸ್ಮತಿ ಶಾಲೆಯ ಶೇಖರ ಗಾಣಿಗ (ಬೈಂದೂರು ವಲಯ), ಕುಚ್ಚೂರು ಶಾಲೆಯ ಸಹಶಿಕ್ಷಕ ಮಂಜುನಾಥ ಶೆಟ್ಟಿ (ಕಾರ್ಕಳ ವಲಯ), ಕೊಂಜಾಡಿ ಶಾಲೆಯ ಸಹಶಿಕ್ಷಕ ಸುರೇಶ ಶೆಟ್ಟಿ (ಕುಂದಾಪುರ ವಲಯ), ಕುದಿ -82 ಶಾಲೆಯ ಸಹಶಿಕ್ಷಕಿ ರೇಷ್ಮಾ ಎಂ.ಎನ್. (ಉಡುಪಿ ವಲಯ).
    ಹಿರಿಯ ಪ್ರಾಥಮಿಕ ವಿಭಾಗ: ಬಡಾನಿಡಿಯೂರು ಶಾಲೆ ಮುಖ್ಯ ಶಿಕ್ಷಕ ದಿನಕರ ಶೆಟ್ಟಿ (ಬ್ರಹ್ಮಾವರ ವಲಯ), ಶಿರೂರು ಶಾಲೆ ಸಹ ಶಿಕ್ಷಕ ಚಂದ್ರ ನಾರಾಯಣ ಬಿಲ್ಲವ (ಬೈಂದೂರು ವಲಯ), ಕಾಬೆಟ್ಟು ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ನರೇಂದ್ರ ಕಾಮತ್ (ಕಾರ್ಕಳ ವಲಯ), ಪಾದೂರು ಯುಬಿಎಂಸಿ ಶಾಲೆ ಮುಖ್ಯ ಶಿಕ್ಷಕಿ ಶೈಲಿ ಪ್ರೇಮಾಕುಮಾರಿ (ಉಡುಪಿ ವಲಯ), ಆರ್ಡಿ ಅಲ್ಬಾಡಿ ಶಾಲೆ ಸಹಶಿಕ್ಷಕ ಗಣೇಶ ಹೇರಳೆ (ಕುಂದಾಪುರ ವಲಯ), ಶೇಡಿಮನೆ ಶಾಲೆ ಮುಖ್ಯ ಶಿಕ್ಷಕ (ಕುಂದಾಪುರ ವಲಯ).
    ಪ್ರೌಢಶಾಲಾ ವಿಭಾಗ: ಮುದ್ರಾಡಿ ಎಂಎನ್‌ಡಿಎಸ್‌ಎಂ ಪ್ರೌಢಶಾಲೆಯ ಸಹಶಿಕ್ಷಕ ಪಿ.ವಿ.ಆನಂದ ಸಾಲಿಗ್ರಾಮ (ಕಾರ್ಕಳ ವಲಯ), ಹೆಸ್ಕತ್ತೂರು ಶಾಲೆ ಮುಖ್ಯ ಶಿಕ್ಷಕ ಸಂತೋಷಕುಮಾರ ಶೆಟ್ಟಿ (ಕುಂದಾಪುರ ವಲಯ), ಕಟಪಾಡಿ ಎಸ್‌ವಿಎಸ್ ಶಾಲೆ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ತಂತ್ರಿ (ಉಡುಪಿ ವಲಯ), ನಾವುಂದ ಪ.ಪೂ.ಕಾಲೇಜಿನ ಪ್ರೌಢಶಾಲೆ ವಿಭಾಗ ಸಹಶಿಕ್ಷಕ ಕೃಷ್ಣಮೂರ್ತಿ ಪಿ. (ಬೈಂದೂರು ವಲಯ), ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆ ಸಹಶಿಕ್ಷಕ ನರೇಂದ್ರಕುಮಾರ್ (ಬ್ರಹ್ಮಾವರ ವಲಯ), ಮಟಪಾಡಿ ಶ್ರೀನಿಕೇತನ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಬಿ.ಬಿ.ಪ್ರವೀಣ್ (ಬ್ರಹ್ಮಾವರ ವಲಯ).

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts