More

    ಉಡಾನ್ ಯೋಜನೆಗೆ ಭಾನಾಪುರದಲ್ಲಿ ಭೂಸ್ವಾಧೀನವಾಗಲಿ; ಕುಕನೂರು ನಾಗರಿಕರಿಂದ ತಹಸೀಲ್ದಾರ್‌ಗೆ ಮನವಿ

    ಕುಕನೂರು: ಉಡಾನ್ ಯೋಜನೆಗೆ ಕೊಪ್ಪಳ ತಾಲೂಕಿನ ಹಲಗೇರಿ ಅಥವಾ ಕುಕನೂರು ತಾಲೂಕಿನ ಭಾನಾಪುರ ಗ್ರಾಮದಲ್ಲಿ ಭೂಸ್ವಾಧೀನ ಮಾಡಿಕೊಳ್ಳಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರಿಗೆ ಕುಕನೂರಿನ ನಾಗರಿಕರು ಸೋಮವಾರ ಮನವಿ ಸಲ್ಲಿಸಿದರು.

    ಜಿಲ್ಲೆಯಲ್ಲಿ ಉಡಾನ್ ಯೋಜನೆ ಅನುಷ್ಠಾನಗೊಳ್ಳುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ರಾಜ್ಯ ಸರ್ಕಾರದಿಂದ ಯೋಜನೆಗೆ ಬೇಕಾಗುವ ಜಮೀನು ಗುರುತಿಸುವ ಕಾರ್ಯ ನಡೆದಿದ್ದು, ಕುಷ್ಟಗಿ-ಕೊಪ್ಪಳ ಮಾರ್ಗದಲ್ಲಿ ಜಮೀನು ಪರಿಶೀಲಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಹಲಗೇರಿ ಅಥವಾ ಭಾನಾಪುರದಲ್ಲಿ ಯೋಜನೆ ಕಾರ್ಯಗತವಾದರೆ ಕೈಗಾರಿಕೆ, ಪ್ರವಾಸೋದ್ಯಮದ ಜತೆಗೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಅನುಕೂಲವಾಗಲಿದೆ. ಪಕ್ಕದ ಜಿಲ್ಲೆಗಳಾದ ಗದಗ, ಬಾಗಲಕೋಟೆ ಜನರಿಗೆ ಇದರಿಂದ ತುಂಬಾ ಅನುಕೂಲವಾಗಲಿದೆ ಎಂದು ತಿಳಿಸಲಾಯಿತು.

    ಗ್ರಾಮದ ಪ್ರಮುಖರಾದ ರುದ್ರಪ್ಪ ಭಂಡಾರಿ, ಬಸವರಾಜ ಜಂಗ್ಲಿ, ರಮೇಶ ಗಜಕೋಶ, ಅಡಿವೆಪ್ಪ ಬೋರಣ್ಣವರ್, ಬಸವರಾಜ ಕೊಡ್ಲಿ, ಬಸವರಾಜ ಕೋನಾರಿ, ಮುರಾರಿ ಭಜಂತ್ರಿ ಮತ್ತು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts