More

    ಉದಯಪುರ ಹತ್ಯೆ ಪ್ರಕರಣ: ರಾಜಸ್ಥಾನದ ಪ್ರವಾಸೋದ್ಯಮದ ಮೇಲೆ ಬಿತ್ತಾ ಕರಿನೆರಳು?

    ಜೈಪುರ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಉದಯಪುರದ ಟೈಲರ್ ಕನ್ಹಯ್ಯ ಲಾಲ್​ ಹತ್ಯೆ ಪ್ರಕರಣದ ಕರಿನೆರಳು ಈಗ ಪ್ರವಾಸೋದ್ಯಮದ ಮೇಲೆ ಬಿದ್ದಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

    ಪ್ರವಾಸೋದ್ಯಮದಲ್ಲೇ ಬಹುಪಾಲು ಆದಾಯ ಗಳಿಸುತ್ತಿದ್ದ ರಾಜಸ್ಥಾನ ಸರ್ಕಾರಕ್ಕೆ ಈಗ ಪೆಟ್ಟು ಬಿದ್ದಿದೆ. ಈ ಘಟನೆ ಬಳಿಕ ಇಲ್ಲಿ ಪ್ರವಾಸ ಕೈಗೊಳ್ಳಲು ಜನರು ಹೆದರುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.ಇದಕ್ಕೆ ಪುಷ್ಟಿ ಎಂಬಂತೆ ಹೋಟೆಲ್​ಗಳಲ್ಲಿ ಬುಕ್​ ಮಾಡಲಾಗಿದ್ದ ಶೇ.50 ರಷ್ಟು ಕೊಠಡಿಗಳನ್ನು ರದ್ದು ಮಾಡಲಾಗಿದೆ ಎನ್ನಲಾಗಿದೆ.

    ಸೆಪ್ಟಂಬರ್ ತಿಂಗಳಿನಿಂದ ರಾಜಸ್ಥಾನಕ್ಕೆ ಅಧಿಕ ಸಂಖ್ಯೆ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದಕ್ಕಾಗಿ ಮುಂಗಡವಾಗಿಯೇ ಹೋಟೆಲ್​, ವಿಮಾನ ಟಿಕೆಟ್​ಗಳು ಬುಕ್​ ಆಗಿರುತ್ತವೆ. ಈ ಬಾರಿ ಈಗಾಗಲೆ ಮಾಡಲಾಗಿರುವ ಬುಕ್ಕಿಂಗ್​ಗಳನ್ನು ರದ್ದುಗೊಳಿಸಲಾಗುತ್ತಿದೆ.

    ಸದ್ಯದ ಪರಿಸ್ಥಿತಿಯಲ್ಲಿ ಪ್ರವಾಸೋದ್ಯಮದ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದ್ದು, ಇದು ಹೀಗೆ ಮುಂದುವರಿದರೆ ಉದ್ಯಮಕ್ಕೆ ಹೊಡೆತ ಬೀಳಲಿದೆ. ಕರೊನಾ ಕಾರಣದಿಂದ ಎರಡು ವರ್ಷಗಳ ಬಳಿಕ ಮತ್ತೆ ಪ್ರವಾಸೋದ್ಯಮ ಚೇತರಿಸಿಕೊಳ್ಳುವ ಹೊತ್ತಲ್ಲೇ ಮತ್ತೊಂದು ಪೆಟ್ಟು ಬಿದ್ದಿರುವುದು ಸ್ಥಳೀಯ ಉದ್ಯಮಿಗಳಲ್ಲಿ ಆತಂಕ ಮನೆ ಮಾಡಿದೆ.

    ಈವರೆಗೂ ರಾಜಸ್ಥಾನದ ಅತಿ ಶಾಂತಿಯುತ ನಗರಗಳಲ್ಲಿ ಒಂದಾಗಿದ್ದ ಉದಯಪುರ ನಗರ ಈಗ ಬೂದಿ ಮುಚ್ಚಿದ ಕೆಂಡದಂತಾಗಿದೆ. ಸದ್ಯ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಸೆಪ್ಟಂಬರ್​ ಹೊತ್ತಿಗೆ ಸರಿಹೋಗಬಹುದು ಎಂದೂ ಹೇಳಲಾಗುತ್ತಿದೆ. (ಏಜೆನ್ಸೀಸ್​)

    ಸಣ್ಣ ವಯಸ್ಸಿಗೆ ಕ್ಯಾನ್ಸರ್​ಗೆ ಬಲಿಯಾದ ಖ್ಯಾತ ನಟ, ಫಲಕಾರಿಯಾಗಲಿಲ್ಲ ಚಿಕಿತ್ಸೆ: ಚೆನ್ನೈ ಆಸ್ಪತ್ರೆಯಲ್ಲಿ ಕೊನೆಯುಸಿರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts