More

    ಬಂಗಾಳ ಕೊಲ್ಲಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದವರ ಬಲೆಯಲ್ಲಿತ್ತೊಂದು ಅಚ್ಚರಿ!

    ಬಾಲಸೋರ್​: ಮೀನುಗಾರಿಕೆಗೆ ಬಂಗಾಳ ಕೊಲ್ಲಿ ಬಾಗದ ಸಮುದ್ರಕ್ಕೆ ತೆರಳಿದ ಒಡಿಶಾದ ಬಾಲಸೋರ್ ಜಿಲ್ಲೆಯ ಮೀನುಗಾರರಿಗೆ ಭಾರಿ ಅಚ್ಚರಿಯೊಂದು ಕಾದಿತ್ತು. ಮೀನು ಹಿಡಿಯುವುದಕ್ಕಾಗಿ ಅವರು ಬೀಸಿದ ಬಲೆಯಲ್ಲಿ ಭಾರಿ ಅಚ್ಚರಿಯೊಂದು ಕಾದಿತ್ತು. ಅವರು ಸೋಮವಾರ ಆಳ ಸಮುದ್ರ ಮೀನುಗಾರಿಕೆ ನಡೆಸುವುದಕ್ಕಾಗಿ ತೆರಳಿದ್ದಾಗ ಈ ಅಚ್ಚರಿ ಎದುರಾಗಿದೆ.

    ಬಲೆಗೆ ಏನೋ ಬಿದ್ದಂತಾದ ಅನುಭವವಾದ ಕಾರಣ ಕೂಡಲೇ ಬಲೆಯನ್ನು ಮೇಲೆಳೆಯಲು ಆರಂಭಿಸಿದರು. ಆಗ ಆರಂಭದಲ್ಲಿ ಕಾಣಿಸಿದ್ದು ಕೆಂಪು ಬಣ್ಣ ಕಾಣಿಸಿತು. ನಂತರ ಹಳದಿ ಮೂತಿ ಕಾಣಿಸಿತು. ತೂಕ 50 ಕಿಲೋ ಇರಬಹುದು ಎಂದು ಮೇಲೆತ್ತಿದ್ದವರಿಗೆ ನಿಜಕ್ಕೂ ಶಾಕ್ ! ಅದು ಬಾಂಬ್ ಇರಬಹುದೆಂದು ಆತಂಕಕ್ಕೆ ಈಡಾದ ಅವರು ಕೂಡಲೇ ಸಂಬಂಧಪಟ್ಟವರ ಗಮನಕ್ಕೆ ತಂದರು.

    ಇದನ್ನೂ ಓದಿ:  ತಪ್ಪಿದ ಟ್ರಂಪ್ ವಿಮಾನ ಅಪಘಾತ

    ಬಂಗಾಳ ಕೊಲ್ಲಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದವರ ಬಲೆಯಲ್ಲಿತ್ತೊಂದು ಅಚ್ಚರಿ!ಅಧಿಕೃತರು ಬಂದು ಪರಿಶೀಲಿಸಿದಾಗ, ಅದು ಮಾನವ ರಹಿತ ವಾಯುನೌಕೆ(ಯುಎವಿ) ಎಂಬುದನ್ನು ಖಚಿತ ಪಡಿಸಿದರು. ಮೀನುಗಾರರಿಂದ ಮಾಹಿತಿ ಪಡೆದ ಬಳಿಕ, ಅವರು ಮೀನುಗಾರಿಕೆ ನಡೆಸಿದ ಸ್ಥಾಳ ಇಂಟೆಗ್ರೇಟೆಡ್​ ಟೆಸ್ಟ್ ರೇಂಜ್​ಗೆ ಸಮೀಪವೇ ಇತ್ತು ಎಂಬುದನ್ನು ಖಾತರಿಪಡಿಸಿಕೊಂಡರು. ಭಾರತೀಯ ವಾಯುಪಡೆ ತರಬೇತಿ ವೇಳೆ ಸರ್ಫೇಸ್ ಟು ಏರ್ ಮತ್ತು ಏರ್ ಟು ಏರ್ ಕ್ಷಿಪಣಿ ಮತ್ತು ವೆಪನ್​ ಸಿಸ್ಟಮ್​ ಪರೀಕ್ಷೆ ನಡೆಸುವಾಗ ಇದನ್ನು ಬಳಸಿರುತ್ತದೆ. ಆಗ ಇದು ಸಮುದ್ರದಲ್ಲಿ ಬಿದ್ದಿರಬೇಕು ಎಂದು ಸೇನೆಯ ಮೂಲಗಳು ತಿಳಿಸಿವೆ. (ಏಜೆನ್ಸೀಸ್)

    ಆಯುರ್ವೇದದ ವಿಶ್ವಾಸವರ್ಧನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts