More

    ಸೀನಿಯರ್ಸ್‌ ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸುವರೇ ಜೂನಿಯರ್ಸ್‌?: ವಿಶ್ವ ಕಿರೀಟಕ್ಕೆ ಇಂದು ಭಾರತ-ಆಸ್ಟ್ರೇಲಿಯಾ ಕಾದಾಟ

    ಬೆನೋನಿ: ಹಾಲಿ ಹಾಗೂ ಐದು ಬಾರಿಯ ಚಾಂಪಿಯನ್ ಭಾರತ ಹಾಗೂ ಮೂರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡಗಳು 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಭಾನುವಾರ ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಟೂರ್ನಿಯಲ್ಲಿ ಅಜೇಯವಾಗಿರುವ ಭಾರತದ ಕಿರಿಯರು ದಾಖಲೆಯ ಆರನೇ ಬಾರಿಗೆ ಚಾಂಪಿಯನ್ ಎನಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ವರ್ಷ ತವರಿನ ಏಕದಿನ ವಿಶ್ವಕಪ್ ೈನಲ್‌ನಲ್ಲಿ ಭಾರತದ ಹಿರಿಯರ ತಂಡ ಆಸೀಸ್ ಎದುರು ಕಂಡ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶವೂ ಕಿರಿಯರ ಮುಂದಿದೆ.

    ಉದಯ್ ಸಹಾರನ್ ಬಳಗ ಸೆಮೀಸ್‌ನಲ್ಲಿ ಆತಿಥೇಯ ದ.ಆಫ್ರಿಕಾವನ್ನು ಮಣಿಸಿದ್ದರೆ, ಆಸ್ಟ್ರೇಲಿಯಾ ತಂಡ ಪಾಕಿಸ್ತಾನ ಎದುರು 1 ವಿಕೆಟ್‌ನಿಂದ ರೋಚಕ ಗೆಲುವು ದಾಖಲಿಸಿ ಪ್ರಶಸ್ತಿ ಸುತ್ತಿಗೇರಿದೆ. ಉದಯ್ ಸಹಾರನ್, ಸಚಿನ್ ದಾಸ್, ಮುಶೀರ್ ಖಾನ್ ಮತ್ತು ಸೌಮಿ ಕುಮಾರ್ ಪಾಂಡೆ ಟೂರ್ನಿಯಲ್ಲಿ ತಂಡದ ಪ್ರಮುಖ ಆಧಾರ ಸ್ತಂಭ ಎನಿಸಿದ್ದಾರೆ.

    ಉದಯ್ ಸಹಾರನ್ 389 ರನ್‌ಗಳೊಂದಿಗೆ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟರ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಮುಶೀರ್ ನಂತರದ ಸ್ಥಾನದಲ್ಲಿದ್ದಾರೆ. ಮುಶೀರ್ ಎಡಗೈ ಸ್ಪಿನ್ನರ್ ಸಹ ಆಗಿದ್ದಾರೆ. ವೇಗಿಗಳಾದ ರಾಜ್ ಲಿಂಬಾನಿ, ನಮನ್ ತಿವಾರಿ ಪರಿಣಾಮಕಾರಿ ಎನಿಸಿದ್ದಾರೆ. ಎಡಗೈ ಸ್ಪಿನ್ನರ್ ಸೌಮಿ ಪಾಂಡೆ, ಇದುವರೆಗೆ 17 ವಿಕೆಟ್ ಕಬಳಿಸಿದ್ದಾರೆ.
    ಅತ್ತ ಆಸ್ಟ್ರೇಲಿಯಾ ಸಹ ಭರ್ಜರಿ ಾರ್ಮ್‌ನಲ್ಲಿದ್ದು. ನಾಯಕ ಹಗ ವೈಬ್‌ಗೆನ್, ಆರಂಭಿಕ ಹ್ಯಾರಿ ಡಿಕ್ಸನ್ ವೇಗಿಗಳಾದ ಟಾಮ್ ಸ್ಟ್ರಾಕರ್ ಮತ್ತು ಕ್ಯಾಲಮ್ ವಿಡ್ಲರ್ ಭಾರತದ ಕಿರಿಯರಿಗೆ ಸವಾಲಾಗುವ ಸಾಧ್ಯತೆಗಳಿವೆ. ಆಸ್ಟ್ರೇಲಿಯಾ ತಂಡ 2010ರ ಬಳಿಕ ಮೊದಲ ಬಾರಿ ಪ್ರಶಸ್ತಿ ಗೆಲ್ಲುವ ತವಕದಲ್ಲಿದೆ.

    ಭಾರತವೇ ಫೇವರಿಟ್: ಭಾರತ-ಆಸೀಸ್ ತಂಡಗಳು ಟೂರ್ನಿಯ ೈನಲ್‌ನಲ್ಲಿ 3ನೇ ಬಾರಿ ಮುಖಾಮುಖಿ ಆಗಲಿವೆ. ಹಿಂದಿನ 2 ಸಲವೂ ಪ್ರಶಸ್ತಿ ಸುತ್ತಿನಲ್ಲಿ ಭಾರತವೇ ಗೆಲುವು ಸಾಧಿಸಿದ್ದು, ಈ ಬಾರಿಯೂ ಪ್ರಶಸ್ತಿ ೆವರೀಟ್ ಎನಿಸಿದೆ. 2012 ಮತ್ತು 2018ರ ಫೈನಲ್‌ನಲ್ಲಿ ಭಾರತ ಕಿರಿಯರ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿ ಚಾಂಪಿಯನ್ ಆಗಿತ್ತು. 19 ವಯೋಮಿತಿ ವಿಶ್ವಕಪ್ ಟೂರ್ನಿ ಉದಯೋನ್ಮುಖ ಆಟಗಾರರಿಗೆ ಉತ್ತಮ ವೇದಿಕೆಯಾಗಿದ್ದು, ಕೆಲವರು ಟೀಮ್ ಇಂಡಿಯಾ ಸ್ಟಾರ್ ಆಟಗಾರರಾಗಿ ಮಿಂಚಿದ್ದಾರೆ. 2016ರಿಂದ ಭಾರತ ಕಿರಿಯರ ತಂಡ ಸತತ ಐದನೇ ಬಾರಿಗೆ ೈನಲ್ ಆಡಲಿದ್ದು, 2018 ಮತ್ತು 2022 ಆವೃತ್ತಿಗಳಲ್ಲಿ ಗೆದ್ದಿದ್ದು, 2016 ಮತ್ತು 2020ರಲ್ಲಿ ರನ್ನರ್ ಅಪ್ ಆಗಿತ್ತು.

    ಪಂದ್ಯ ಆರಂಭ: ಮಧ್ಯಾಹ್ನ 1.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts