More

    ನಕಲಿ ಗುರುತಿನೊಂದಿಗೆ ಪಾಕಿಸ್ತಾನೀಯರೊಂದಿಗೆ ಸಂಪರ್ಕ; ಗೂಢಚಾರಿಕೆಯ ಶಂಕೆಯಲ್ಲಿ ಇಬ್ಬರು ಮಹಿಳೆಯರ ಬಂಧನ

    ಭೋಪಾಲ್ : ಪಾಕಿಸ್ತಾನಿ ಗೂಢಾಚಾರಿ ಸಂಸ್ಥೆ ಐಎಸ್​ಐ ಆಪರೇಟೀವ್​ಗಳೆಂದು ಶಂಕಿಸಲಾದ ಪಾಕಿಸ್ತಾನೀಯರೊಂದಿಗೆ ಸಂಪರ್ಕ ಬೆಳೆಸಿಕೊಂಡಿರುವ ಇಬ್ಬರು ಭಾರತೀಯ ಸೋದರಿಯರನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ. ರಾಜ್ಯದ ಇಂಡೋರ್​ ನಗರದ ಸಮೀಪ ಇರುವ ಮ್ಹೌ ಕಂಟೋನ್​ಮೆಂಟ್​ನ ನಿವಾಸಿಗಳಾದ ಈ ಮಹಿಳೆಯರ ಮೇಲೆ ಭಾರತದಿಂದ ಪ್ರಮುಖ ಮಾಹಿತಿಗಳನ್ನು ಕಳುಹಿಸಿ ಗೂಢಚಾರಿಕೆಯಲ್ಲಿ ತೊಡಗಿದ್ದರೆಂಬ ಗುಮಾನಿ ಇದೆ ಎನ್ನಲಾಗಿದೆ.

    ಇಂಡೋರ್​ ಪೊಲೀಸರು ಮತ್ತು ಮಿಲಿಟರಿ ಇಂಟೆಲಿಜೆನ್ಸ್​ ಅಧಿಕಾರಿಗಳು ಬಂಧಿತ ಮಹಿಳೆಯರೊಂದಿಗೆ ಪ್ರಶ್ನೋತ್ತರ ನಡೆಸುತ್ತಿದ್ದು, ಅವರ ಪಾಕಿಸ್ತಾನಿ ಸಂಪರ್ಕಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. 32 ಮತ್ತು 28 ವರ್ಷ ವಯೋಮಾನದ ಈ ಸಹೋದರಿಯರು ಮ್ಹೌ ಎಂದೇ ಕರೆಯಲಾಗುವ ಡಾ. ಅಂಬೇಡ್ಕರ್​ ನಗರದ ಗಾವ್ಲಿ ಪಾಲಾಸಿಯಾ ಎಂಬಲ್ಲಿ ಶಾಲಾ ಶಿಕ್ಷಕಿಯರಾಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಹಾಡುಹಗಲೇ ಯುವಕನ ಬರ್ಬರ ಹತ್ಯೆ; ಬೆಚ್ಚಿ ಬೀಳಿಸುತ್ತೆ ಈ ಘಟನೆ

    ಒಂದು ವರ್ಷದಿಂದ ಪಾಕಿಸ್ತಾನದ ಪುರುಷರೊಂದಿಗೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಕಲಿ ಗುರುತಿನೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದ್ದು, ಅವರ ಮೊಬೈಲ್ ಫೋನ್​ಗಳನ್ನು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ. ಅವರ ಸಂಪರ್ಕದಲ್ಲಿರುವ ವ್ಯಕ್ತಿಗಳು ಐಎಸ್​ಐ ಆಪರೇಟೀವ್​ಗಳಾಗಿದ್ದು, ಪಾಕಿಸ್ತಾನದ ನಿವೃತ್ತ ಅಥವಾ ಸೇವಾನಿರತ ಸೇನೆ ಮತ್ತು ನೌಕಾ ದಳದ ಅಧಿಕಾರಿಗಳೆಂದು ಭಾವಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)

    ಭರವಸೆ ಕಳೆದುಕೊಳ್ಳಬೇಡಿ, ಧೈರ್ಯವಾಗಿರಿ : ‘ಆರ್ಮಿ’ಗೆ ಬಿಟಿಎಸ್​​ ಸಂದೇಶ !

    ಯುವಕನ ಮೊಬೈಲ್ ಒಡೆದು ಕಪಾಳಕ್ಕೆ ಹೊಡೆದ ಜಿಲ್ಲಾಧಿಕಾರಿ ಸಸ್ಪೆಂಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts