More

    ಗ್ರಾಮಲೆಕ್ಕಿಗ ಸೇರಿ ಇಬ್ಬರ ಬಂಧನ

    ಕುಣಿಗಲ್: ಪಟ್ಟಣದ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ಸೋಮವಾರ ರಾತ್ರಿ ಕರ್ತವ್ಯನಿರತ ಪೊಲೀಸರ ಲಾಠಿ ಕಸಿದುಕೊಂಡು ಹಲ್ಲೆ ನಡೆಸಿದ ಆರೋಪದ ಮೇಲೆ ಗ್ರಾಮಲೆಕ್ಕಿಗ ಸೇರಿ ಇಬ್ಬರನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ.

    ಪಟ್ಟಣ ಠಾಣೆ ಪೇದೆಗಳಾದ ಮಿಥುನ್, ಸುಮನ್ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಹೌಸಿಂಗ್ ಬೋರ್ಡ್ ಕಾಲನಿ ವಾಸಿಗಳಾದ ಗ್ರಾಮಲೆಕ್ಕಿಗ ವೆಂಕಟೇಶ್ ಹಾಗೂ ರಾಮಚಂದ್ರ ಎಂಬಾತನನ್ನು ಬಂಧಿಸಲಾಗಿದೆ. ಮಂಗಳವಾರ ರಾತ್ರಿ 11.45ರಲ್ಲಿ ಪೇದೆಗಳು ಹೌಸಿಂಗ್ ಬೋರ್ಡ್‌ನ ಸ್ಟೇಲ್ಲಾ ಮೇರಿಸ್ ಸ್ಕೂಲ್ ರಸ್ತೆಯಲ್ಲಿನ ಮೋದಿ ಕೇರ್ ಮುಂಭಾಗ ಸೆಲ್ಪಿ ತೆಗೆದುಕೊಳ್ಳುತ್ತಿದ್ದಾಗ ಎದುರು ಮನೆ ಮೇಲಿದ್ದ ವೆಂಕಟೇಶ್ ಹಾಗೂ ರಾಮಚಂದ್ರ, ‘ಯಾರೋ ನೀವು, ಮೋದಿ ಕೇರ್ ಮುಂದೆ ಸೆಲ್ಫಿ ತೆಗೆದುಕೊಳ್ಳುತ್ತೀರಾ’ ಎಂದು ಅವಾಚ್ಯವಾಗಿ ಕೂಗಾಡಿದ್ದಾರೆ.

    ನಾವು ಪೊಲೀಸರು ರಾತ್ರಿ ಗಸ್ತಿಗಾಗಿ ಬಂದಿದ್ದೇವೆ. ನಮ್ಮ ಹಾಜರಾತಿಗಾಗಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದೇವೆ ಎಂದಿದ್ದಾರೆ. ಕುಣಿಗಲ್‌ನಲ್ಲಿರುವ ಎಲ್ಲ ಮೋದಿ ಕೇರ್ ಮುಂದೆಯೂ ಸೆಲ್ಫಿ ತೆಗೆದುಕೊಳ್ಳುತ್ತೀರಾ ಎಂದು ಕೂಗಾಡಿ ಹಲ್ಲೆ ನಡೆಸಿ, ಮೊಬೈಲ್ ಕಸಿದುಕೊಂಡು ಹಾಳು ಮಾಡಿದ್ದಾರೆ ಎಂದು ಠಾಣೆಗೆ ನೀಡಿರುವ ದೂರಿನಲ್ಲಿ ಪೇದೆ ಮಿಥುನ್ ಉಲ್ಲೇಖಿಸಿದ್ದಾರೆ. ತಕ್ಷಣ ಸುಮನ್ 112ಕ್ಕೆ ಕರೆ ಮಾಡಿದ್ದು, ಸಿಬ್ಬಂದಿ ಬಂದು ಪರಿಸ್ಥಿತಿ ಹತೋಟಿಗೆ ತಂದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಡಿಸಿಗೆ ಪತ್ರ: ಪೊಲೀಸರ ಮೇಲೆ ಹಲ್ಲೆ ಸಂಬಂಧ ಗ್ರಾಮಲೆಕ್ಕಿಗ ವೆಂಕಟೇಶ್ ವಿರುದ್ಧ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ತಹಸೀಲ್ದಾರ್ ಮಹಬಲೇಶ್ವರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts