More

    ಸ್ವಾಮಿ ವಿವೇಕಾನಂದರ ಪ್ರೇರಣೆ: ವಿದೇಶಿಗರಿಂದ ಅಮರನಾಥ ಯಾತ್ರೆ

    ಶ್ರೀನಗರ: ಜಗತ್ತಿಗೆ ಭಾರತೀಯ ಆಧ್ಯಾತ್ಮಿಕತೆಯ ಶ್ರೇಷ್ಠತೆಯನ್ನು ಸಾರಿದ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರ ಪ್ರೇರಿತರಾದ ವಿದೇಶಿಗರಿಬ್ಬರು ಅಮರನಾಥ ಯಾತ್ರೆಯನ್ನು ಕೈಗೊಂಡಿದ್ದಾರೆ.

    ಅಮರನಾಥ ಯಾತ್ರೆಯಲ್ಲಿ ಲಕ್ಷಾಂತರ ಭಾರತೀಯರು ಭಾಗಿಯಾಗಿದ್ದು, ಇವರ ನಡುವೆ ಅಮೆರಿಕದ ಕ್ಯಾಲಿಫೋರ್ನಿಯಾದ ಇಬ್ಬರು ನಾಗರಿಕರು ಕೇಸರಿ ಬಟ್ಟೆ ಧರಿಸಿ ಭೋಲೆನಾಥನ ದರ್ಶನ ಪಡೆಯಲು ಯಾತ್ರೆ ಕೈಗೊಂಡಿರುವುದು ವಿಶೇಷವಾಗಿದೆ.

    ಇದನ್ನೂ ಓದಿ: ಹಣೆಗೆ ಬಿಂದಿ ಹಚ್ಚಿದ್ದಕ್ಕೆ ಶಾಲೆಯಲ್ಲಿ ಶಿಕ್ಷಕನಿಂದ ಥಳಿತ: ಮನೆಗೆ ಬಂದು ಪ್ರಾಣ ಬಿಟ್ಟ ವಿದ್ಯಾರ್ಥಿನಿ

    ಈ ಕುರಿತು ಮಾತನಾಡಿದ ವಿದೇಶಿಗರು, ಸ್ವಾಮಿ ವಿವೇಕಾನಂದರು ಮಾನವ ಇತಿಹಾಸದಲ್ಲಿ ಸಮಾಜದ ಮೇಲೆ ಬೀರಿದ ಪ್ರಭಾವ ಅತ್ಯಪಾರ ಹಾಗೂ ಅಸಾಧಾರಣವೂ ವ್ಯಕ್ತಿಯಾಗಿದ್ದು, ಅವರು ಅಮರನಾಥ ಯಾತ್ರೆಯನ್ನು ಕೈಗೊಂಡಿದ್ದರ ಬಗ್ಗೆ ನಾನು 40 ವರ್ಷಗಳಿಂದ ತಿಳಿದುಕೊಂಡಿದ್ದೇನೆ. ಇಲ್ಲಿಗೆ ಬರುವುದು ನಮ್ಮ ಕನಸಾಗಿತ್ತು. ಇದು ಅಸಾಧ್ಯವೆಂದು ತೋರಿದೂ ಸಹಿತ ಭೋಲೆನಾಥನ ಕೃಪೆಯಿಂದ ನಾವು ಇಲ್ಲಿದ್ದೇವೆ. ಈ ಬಗ್ಗೆ ಹೇಳಲು ನಮಗೆ ಪದಗಳೇ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.

    ಈ ಸ್ಥಳ ಮತ್ತು ಈ ಪರ್ವತಗಳು ಮತ್ತು ಪವಿತ್ರ ಗುಹೆಯು ಒದಗಿಸುವ ಒಂದು ನಿರ್ದಿಷ್ಟ ರೀತಿಯ ಶಾಂತಿ ಇದೆ. ಈ ಶಾಂತಿ ಎಲ್ಲರಿಗೂ ಮೇಲುಗೈ ಸಾಧಿಸಲಿ ಎಂದು ನಾವು ಬಯಸುತ್ತೇವೆ ಎಂದು ವಿದೇಶಿ ಪ್ರಜೆಗಳು ತಿಳಿಸಿದ್ದಾರೆ. ಅಲ್ಲದೆ, ಅಮರನಾಥ ಯಾತ್ರೆಯು ಜುಲೈ 1ರಂದು ಪ್ರಾರಂಭವಾಗಿ ಪ್ರತಿಕೂಲ ಹವಾಮಾನದ ಕಾರಣ ಜುಲೈ 7ರಂದು ಅದನ್ನು ನಿಲ್ಲಿಸಲಾಗಿತ್ತು. ಹವಾಮಾನ ಪರಿಸ್ಥಿತಿಯಲ್ಲಿ ಸುಧಾರಣೆಯ ನಂತರ ತೀರ್ಥಯಾತ್ರೆಯನ್ನು ಈಗ ಪುನರಾರಂಭಿಸಲಾಗಿದೆ. ಅಮರನಾಥ ದೇವಾಲಯವು ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿ 3,888 ಮೀಟರ್ ಎತರದಲ್ಲಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts