More

    ಈಡನ್‌ನಲ್ಲಿ ಇಂದು ಕೆಕೆಆರ್- ಲಖನೌ: ಜಯದ ಹಳಿಗೆ ಮರಳಲು ಪೈಪೋಟಿ, ವಿಶೇಷ ಜೆರ್ಸಿಯಲ್ಲಿ ರಾಹುಲ್ ಬಳಗ ಕಣಕ್ಕೆ

    ಕೋಲ್ಕತ: ಎರಡು ಬಾರಿಯ ಚಾಂಪಿಯನ್ ಕೊಲ್ಕತ ನೈಟ್‌ರೈಡರ್ಸ್‌ ತಂಡ ಐಪಿಎಲ್-17ರಲ್ಲಿ ಭಾನುವಾರ, ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ 5ನೇ ಲೀಗ್ ಪಂದ್ಯದಲ್ಲಿ ಲಖನೌ ಸೂಪರ್‌ಜೈಂಟ್ಸ್ ತಂಡವನ್ನು ಎದುರಿಸಲಿದೆ. ಉಭಯ ತಂಡಗಳು ಹಿಂದಿನ ಪಂದ್ಯದಲ್ಲಿ ಸೋಲು ಅನುಭವಿಸಿದ್ದು, ಗೆಲುವಿನ ಹಾದಿಗೆ ಮರಳಲು ಹೋರಾಟ ನಡೆಸಲಿವೆ.

    2021ರ ಬಳಿಕ ಪ್ಲೇಆ್ಗೇರುವ ಹಂಬಲದಲ್ಲಿರುವ ಕೆಕೆಆರ್ ತಂಡ ಇದುವರೆಗೆ ಆಡಿರುವ 4 ಪಂದ್ಯಗಳಲ್ಲಿ 3 ಗೆಲುವು, 1 ಸೋಲುನೊಂದಿಗೆ 6 ಅಂಕ ಕಲೆಹಾಕಿದೆ. ಹಿಂದಿನ ಪಂದ್ಯದಲ್ಲಿ ಸಿಎಸ್‌ಕೆ ಎದುರು ಟೂರ್ನಿಯ ಮೊದಲ ಸೋಲುಂಡಿದೆ. ಲಖನೌ ತಂಡದ ಹ್ಯಾಟ್ರಿಕ್ ಗೆಲುವಿನ ಓಟಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಬ್ರೇಕ್ ಹಾಕಿದ್ದು, ಆಡಿರುವ 5 ಪಂದ್ಯಗಳಲ್ಲಿ 3 ಗೆಲುವು, 2 ಸೋಲಿನೊಂದಿಗೆ 6 ಅಂಕ ಕಲೆಹಾಕಿದೆ. ಆದರೆ ಉತ್ತಮ ರನ್‌ರೇಟ್‌ನಿಂದ ಕೆಕೆಆರ್, ಲಖನೌ ಎದುರು ಮೇಲುಗೈ ಸಾಧಿಸಿದೆ. ಕಳೆದೆರಡು ವರ್ಷ ಲಖನೌ ತಂಡದ ಮೆಂಟರ್ ಆಗಿ ಪ್ಲೇಆ್ಗೇರಿಸಿದ್ದ ಗೌತಮ್ ಗಂಭೀರ್, ಈ ಬಾರಿ ಕೆಕೆಆರ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಮಾಜಿ ತಂಡದ ಎದುರಿನ ಕಾಳಗ ಕುತೂಹಲ ಮೂಡಿಸಿದೆ. ಜತೆಗೆ ಕೆಕೆಆರ್ ವಿರುದ್ಧದ ಹಿಂದಿನ 3 ಪಂದ್ಯಗಳಲ್ಲಿ ಲಖನೌ ತಂಡ ಜಯಭೇರಿ ಬಾರಿಸಿದ್ದು, ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ.

    ಲಖನೌಗೆ ಹಸಿರು-ಕೆಂಗಂದು ಜೆರ್ಸಿ: ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಲಖನೌ ತಂಡ, ಕೆಕೆಆರ್ ವಿರುದ್ಧ ಸಾಂಪ್ರದಾಯಿಕ ನೀಲಿ ಜೆರ್ಸಿ ಬದಲು ಭಾರತೀಯ ುಟ್‌ಬಾಲ್ ದೈತ್ಯ ಎಂದು ಕರೆಸಿಕೊಳ್ಳುವ ಕೋಲ್ಕತ ಮೂಲದ ಮೋಹನ್ ಬಗಾನ್ ತಂಡದಿಂದ ಸ್ಫೂರ್ತಿ ಪಡೆದ ಹಸಿರು ಹಾಗೂ ಕೆಂಗಂದು ಮಿಶ್ರಿತ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಲಖನೌ ್ರಾಂಚೈಸಿ ಮಾಲೀಕರಾಗಿರುವ ಆರ್‌ಪಿಎಸ್‌ಜಿ ಗ್ರೂಪ್‌ನ ಸಂಜೀವ್ ಗೋಯೆಂಕಾ, ಮೋಹನ್ ಬಗಾನ್ ಕ್ಲಬ್ ಒಡೆತನವನ್ನೂ ಹೊಂದಿದ್ದಾರೆ. 2023ರ ಆವೃತ್ತಿಯಲ್ಲಿಯೂ ಲಖನೌ, ಕೆಕೆಆರ್ ಎದುರು ಕೋಲ್ಕತದಲ್ಲಿ ಇದೇ ಬಣ್ಣದ ಜೆರ್ಸಿಯಲ್ಲಿ ಆಡಿತ್ತು.

    ಮುಖಾಮುಖಿ: 3
    ಲಖನೌ: 3
    ಕೆಕೆಆರ್: 0
    ಆರಂಭ: ಮಧ್ಯಾಹ್ನ 3.30

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts