More

    ಸ್ಯಾನಿಟೈಸರ್​, ಮಾಸ್ಕ್​ ಹಂಚಿಕೆ ಸೋಗಿನಲ್ಲಿ 8 ವರ್ಷದ ಬಾಲಕನ ಅಪಹರಣ

    ಗೊಂಡಾ: ಸ್ಯಾನಿಟೈಸರ್​ ಮತ್ತು ಮಾಸ್ಕ್​ಗಳನ್ನು ವಿತರಿಸುವ ಆರೋಗ್ಯ ಕಾರ್ಯಕರ್ತರ ಸೋಗಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು 8 ವರ್ಷದ ಬಾಲಕನನ್ನು ಅಪಹರಿಸಿಕೊಂಡು ಪರಾರಿಯಾಗಿದ್ದಾರೆ. ಅಪಹರಣಕಾರರರು ಅಪಹೃತನ ಬಿಡುಗಡೆಗಾಗಿ ಒತ್ತೆಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

    ಉತ್ತರ ಪ್ರದೇಶದ ಗೊಂಡಾದಲ್ಲಿ ಶುಕ್ರವಾರದಂದು ಆರೋಗ್ಯ ಕಾರ್ಯಕರ್ತರ ಸೋಗಿನಲ್ಲಿ ಸ್ಯಾನಿಟೈಸರ್​ ಮತ್ತು ಮಾಸ್ಕ್​ಗಳನ್ನು ವಿತರಿಸಿಕೊಂಡು ಆ ಪ್ರದೇಶಕ್ಕೆ ಬಂದಿದ್ದರು. ಅದುವರೆಗೆ ಎಲ್ಲರಿಗೂ ಕೊಟ್ಟಂತೆ ಬಾಲಕನ ಮನೆಯವರಿಗೂ ಕೊಟ್ಟಿದ್ದರು. ಬಾಲಕ ಚೂಟಿಯಾಗಿದ್ದನ್ನು ಗಮನಿಸಿದ ಅಪಹರಣಕಾರರು, ನಿಮ್ಮ ಕುಟುಂಬಕ್ಕೆ ಹೆಚ್ಚುವರಿಯಾಗಿ ಸ್ಯಾನಿಟೈಸರ್​ ಮತ್ತು ಮಾಸ್ಕ್​ಗಳನ್ನು ಕೊಡುತ್ತೇವೆ. ದೂರದಲ್ಲಿ ತಮ್ಮ ವಾಹನವಿದ್ದು, ಅಲ್ಲಿಗೆ ಮಗುವನ್ನು ಕಳುಹಿಸಿಕೊಡುಂತೆ ಬಾಲಕನ ಪಾಲಕರಲ್ಲಿ ಮನವಿ ಮಾಡಿಕೊಂಡಿದ್ದರು.

    ಇದನ್ನೂ ಓದಿ: ಪಿಪಿಇ ಕಿಟ್​ ಧರಿಸಿ ಊಟ ಬಡಿಸಿದ ಅಡುಗೆಯವರು, ಆಂಧ್ರದಲ್ಲಿ ವಿಶಿಷ್ಟ ಪ್ರಯೋಗ

    ಇವರ ಮಾತನ್ನು ನಂಬಿದ ಪಾಲಕರು 8 ವರ್ಷದ ಬಾಲಕನನ್ನು ಆರೋಗ್ಯ ಕಾರ್ಯಕರ್ತರ ಸೋಗಿನವರ ಜತೆ ಕಳುಹಿಸಿದ್ದರು. ಆದರೆ, ಎಷ್ಟೊತ್ತಾದರೂ ಬಾಲಕ ಮರಳದ್ದರಿಂದ ಅನುಮಾನಗೊಂಡ ಪಾಲಕರು ಹೋಗಿ ನೋಡಿದಾಗ ಯಾವುದೇ ವಾಹನವಾಗಲಿ ಅಥವಾ ಆರೋಗ್ಯ ಕಾರ್ಯಕರ್ತರಾಗಲಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದರು. ಅಷ್ಟರಲ್ಲೇ ದೂರವಾಣಿ ಕರೆ ಮಾಡಿದ ಅಪಹರಣಕಾರರು ಬಾಲಕನ ಸುರಕ್ಷಿತ ಬಿಡುಗಡೆಗಾಗಿ ಒತ್ತೆಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

    ಅಪಹರಣಕಾರರು ಎಷ್ಟು ಮೊತ್ತದ ಒತ್ತೆಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬುದನ್ನು ಪಾಲಕರು ಪೊಲೀಸರಿಗೂ ಬಹಿರಂಗಪಡಿಸಿಲ್ಲ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರಪ್ರದೇಶ ಡಿಜಿಪಿ ಎಚ್​.ಸಿ. ಆವಸ್ತಿ, ಪ್ರಕರಣದ ತನಿಖೆ ಆರಂಭವಾಗಿದೆ. ಅಪಹೃತನನ್ನು ಪತ್ತೆ ಮಾಡಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ವಿಶೇಷ ಕಾರ್ಯಪಡೆ ರಚಿಸಿದ್ದು, ಅದು ಕೂಡ ಕಾರ್ಯೋನ್ಮುಖವಾಗಿದೆ ಎಂದು ಹೇಳಿದ್ದಾರೆ.

    ಗಲ್ವಾನ್​ ಘರ್ಷಣೆ ಸ್ಥಳದಿಂದ ಹಿಂದಕ್ಕೆ ಮರಳುತ್ತಿರುವ ಭಾರತೀಯ ಯೋಧರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts