More

    ವೆಂಟಿಲೇಟರ್ ಸ್ಥಗಿತಗೊಂಡು ಆಸ್ಪತ್ರೆಯಲ್ಲಿದ್ದ ಇಬ್ಬರು ರೋಗಿಗಳು ಒಂದೇ ಸಮಯದಲ್ಲಿ ಸಾವು!?

    ಬಳ್ಳಾರಿ: ವಿಮ್ಸ್ ಆಸ್ಪತ್ರೆಯಲ್ಲಿನ ತೀವ್ರ ನಿಗಾ ಘಟಕದಲ್ಲಿದ್ದ ಇಬ್ಬರು ರೋಗಿಗಳು ಒಂದೇ ಸಮಯದಲ್ಲಿ ಸಾವಿಗೀಡಾಗಿದ್ದು, ಇದಕ್ಕೆ ಆಸ್ಪತ್ರೆಯಲ್ಲಿ ವಿದ್ಯುತ್ತ ಸಂಪರ್ಕ ಕಡಿತಗೊಂಡು ವೆಂಟಿಲೇಟರ್​ ಕಾರ್ಯನಿರ್ವಹಣೆ ಸ್ಥಗಿತಗೊಂಡಿದ್ದೇ ಕಾರಣ ಎಂಬ ಆರೋಪ ಕೇಳಿಬಂದಿದೆ.

    ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಇಬ್ಬರು ರೋಗಿಗಳು ಒಂದೇ ಸಮಯದಲ್ಲಿ ಸಾವಿಗೀಡಾದ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮತ್ತೊಂದೆಡೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಕೊಡಲು ವಿಮ್ಸ್​ ಆಡಳಿತ ಮಂಡಳಿ ನಿರಾಕರಿಸಿದ್ದಾರೆ.

    ಐಸಿಯುನಲ್ಲಿರುವ ಹತ್ತು ರೋಗಿಗಳಿಗೆ ವೆಂಟಿಲೇಟರ್ ಅಳವಡಿಸಲಾಗಿದೆ. ಐಸಿಯುಗೆ ವಿದ್ಯುತ್ ಸಂಪರ್ಕ ಕಡಿತವಾಗಿದ್ದರೆ ಎಲ್ಲಾ ರೋಗಿಗಳಿಗೂ ಸಮಸ್ಯೆ ಆಗಿರಬೇಕು ಎಂದು ವಿಮ್ಸ್ ಮೂಲಗಳು ಹೇಳಿಕೊಂಡಿವೆ. ಸಾವಿಗೀಡಾದವರಲ್ಲಿ ಒಬ್ಬರು ಹಾವು ಕಡಿತದಿಂದ ಗಂಭೀರ ಸ್ಥಿತಿಗೆ ತಲುಪಿದ್ದವರು. ಇನ್ನೊಬ್ಬರು ಮೂತ್ರಪಿಂಡ ವೈಫಲ್ಯದಿಂದ ಗಂಭೀರ ಅನಾರೋಗ್ಯಕ್ಕೆ ಒಳಗಾಗಿದ್ದವರು ಎಂದು ಹೇಳಲಾಗಿದೆ.

    ತುಂಡಾದ ಕಾಲಿನೊಂದಿಗೆ ಆಸ್ಪತ್ರೆಗೆ ಬಂದ ಗಾಯಾಳು; ಯಶಸ್ವಿಯಾಗಿ ಜೋಡಿಸಿದ ವೈದ್ಯರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts