More

    ಕೆಂಪು ಕೋಟೆ ಹಿಂಸಾಚಾರ : ಪರಾರಿ ಆಗುತ್ತಿದ್ದ ಡಚ್​ ಪ್ರಜೆ ಪೊಲೀಸರ ವಶಕ್ಕೆ

    ನವದೆಹಲಿ: ಜನವರಿ 26 ರಂದು ರೈತ ಹೋರಾಟದ ಹೆಸರಲ್ಲಿ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಮನೀಂದರ್​ಜೀತ್​ ಸಿಂಗ್ ಮತ್ತು ಖೇಮ್​ಪ್ರೀತ್ ಸಿಂಗ್ ಎಂಬುವರು ಬಂಧನಕ್ಕೊಳಗಾಗಿರುವ ಆರೋಪಿಗಳು. ಪಂಜಾಬಿ ನಟ ದೀಪ್ ಸಿಧು ಸೇರಿದಂತೆ ಈ ಪ್ರಕರಣದಲ್ಲಿ ಈವರೆಗೆ ಬಂಧಿಸಲ್ಪಟ್ಟಿರುವವರ ಸಂಖ್ಯೆ 14 ಕ್ಕೆ ಏರಿದೆ.

    ಆರೋಪಿ ಮನೀಂದರ್​ಜೀತ್​ ಸಿಂಗ್, ಡಚ್​​ ನಾಗರೀಕನಾಗಿದ್ದು, ಇಂಗ್ಲೆಂಡಿನ ಬಿರ್ಮಿಂಗ್​ಹ್ಯಾಮ್​ನ ನಿವಾಸಿಯಾಗಿದ್ದಾನೆ. ಇವನು ಗಣರಾಜ್ಯೋತ್ಸವ ದಿನದಂದು ಕೆಂಪು ಕೋಟೆ ಆವರಣದಲ್ಲಿ ಈಟಿ ಹಿಡಿದುಕೊಂಡು ಓಡಾಡುತ್ತಿರುವ ವೀಡಿಯೋ ಫೂಟೇಜ್ ಪೊಲೀಸರಿಗೆ ಲಭ್ಯವಾಗಿತ್ತು. ತನಿಖೆಯ ಸಮಯದಲ್ಲಿ ಈತ ಕಾನೂನುಬಾಹಿರವಾಗಿ ಶಸ್ತ್ರಗಳನ್ನು ಹೊಂದಿರುವುದೂ ಸೇರಿದಂತೆ ಇತರ ಅಪರಾಧಗಳಲ್ಲಿ ಶಾಮೀಲಾಗಿರುವುದು ಕಂಡುಬಂದಿತ್ತು.

    ಇದನ್ನೂ ಓದಿ: ಬಾಯ್​ಫ್ರೆಂಡ್​ ಜತೆ 1 ಗಂಟೆ ಮಾತನಾಡಿ ಸಂಪರ್ಕ ಕಡಿದುಕೊಂಡ ಯುವತಿ ಮನೆಯಲ್ಲೇ ದುರಂತ ಸಾವು!

    ಈ ಸಂಬಂಧವಾಗಿ ಇವನನ್ನು ಬಂಧಿಸಲು ಪೊಲೀಸರು ತೀವ್ರ ಶೋಧ ಆರಂಭಿಸಿದ್ದು, ಪಂಜಾಬ್‌ನ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ಇದರಿಂದ ಒತ್ತಡಕ್ಕೊಳಗಾದ ಸಿಂಗ್, ನಕಲಿ ದಾಖಲಾತಿಗಳನ್ನು ಬಳಸಿ ದೆಹಲಿ ವಿಮಾನ ನಿಲ್ದಾಣದಿಂದ ನೇಪಾಳಕ್ಕೆ ಹಾರಿ, ನಂತರ ಅಲ್ಲಿಂದ ಇಂಗ್ಲೆಂಡಿಗೆ ಪ್ರಯಾಣ ಮಾಡುವ ಯತ್ನದಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈತನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿ, ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

    ಮತ್ತೊಬ್ಬ ಆರೋಪಿ ಖೇಮ್​ಪ್ರೀತ್ ಸಿಂಗ್, ಕೆಂಪು ಕೋಟೆಯ ಒಳಗೆ ಕರ್ತವ್ಯನಿರತರಾಗಿದ್ದ ಪೊಲೀಸರ ಮೇಲೆ ದೊಡ್ಡ ಈಟಿಯನ್ನು ಬಳಸಿ ಹಲ್ಲೆ ನಡೆಸಿದ್ದ. ಪ್ರಕರಣ ದಾಖಲಾದ ಮೇಲೆ ಪೊಲೀಸರ ಕಣ್ಣುತಪ್ಪಿಸಿ ಓಡಾಡುತ್ತಿದ್ದ. ಈತ ಜನವರಿ 26 ರಂದು, ದೆಹಲಿಯ ಸಂಜಯ್ ಗಾಂಧಿ ಟ್ರಾನ್ಸ್​ಪೋರ್ಟ್​ ನಗರದಿಂದ ರೈತರ ಟ್ರ್ಯಾಕ್ಟರ್ ರಾಲಿಯಲ್ಲಿ ಸೇರಿಕೊಂಡಿದ್ದು, ಬುರಾರಿ ಮತ್ತು ಚಟ್ಟಾ ರೈಲು ಬಳಿ ಪೊಲೀಸ್​ ಬ್ಯಾರಿಕೇಡ್​​ಗಳನ್ನು ಒಡೆದು, ಅಂತಿಮವಾಗಿ ಕೆಂಪು ಕೋಟೆ ತಲುಪಿದ್ದಾಗಿ ವಿಚಾರಣೆಯ ಸಮಯದಲ್ಲಿ ತಿಳಿಸಿದ್ದಾನೆ. ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಹೆಚ್ಚಿದ ಕರೊನಾ : ಮದುವೆ ಸಮಾರಂಭಗಳಿಗೆ ಪೊಲೀಸರಾಗಲಿದ್ದಾರೆ ವಿಶೇಷ ಅತಿಥಿಗಳು !

    4 ವರ್ಷದ ಹಿಂದೆ ಬ್ಯೂಟಿ ಪಾರ್ಲರ್ ಸೇಲ್ಸ್ ಗರ್ಲ್ ಆಗಿ ಬೆಂಗಳೂರಿಗೆ ಬಂದವಳ ಭಯಾನಕ ಕತೆ ಇದು!

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts