More

    ಪಾಕ್​ನಲ್ಲಿನ ಭಾರತೀಯ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳು ಕಾಣೆ

    ನವದೆಹಲಿ: ಪಾಕಿಸ್ತಾನದಲ್ಲಿನ ಭಾರತೀಯ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳು ದಿಢೀರನೆ ಕಾಣೆಯಾಗಿದ್ದಾರೆ. ಸೋಮವಾರ ಬೆಳಗ್ಗೆಯಿಂದ ಇವರಿಬ್ಬರೂ ನಾಪತ್ತೆಯಾಗಿರುವುದಾಗಿ ಭಾರತೀಯ ರಾಯಭಾರ ಕಚೇರಿ ಮೂಲಗಳು ತಿಳಿಸಿವೆ.

    ಕಳೆದ ತಿಂಗಳು ಭಾರತದಲ್ಲಿನ ಪಾಕ್​ ರಾಯಭಾರ ಕಚೇರಿಯಲ್ಲಿ ವೀಸಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಅಧಿಕಾರಿಗಳನ್ನು ಬೇಹುಗಾರಿಕೆ ನಡೆಸಿದ್ದ ಆರೋಪದಲ್ಲಿ ಭಾರತ ಗಡೀಪಾರು ಮಾಡಿತ್ತು. ಇದಾದ ನಂತರದಲ್ಲಿ ಪಾಕ್​ನಲ್ಲಿ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿಯನ್ನು ಹೋದಲೆಲ್ಲಾ ಹಿಂಬಾಲಿಸುವುದು ಸೇರಿ ವಿವಿಧ ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿತ್ತು.

    ಇದನ್ನೂ ಓದಿ: ಪಾಕ್​ಗೆ ಇನ್ನೊಂದು ಆಘಾತ ನೀಡಲು ಸಜ್ಜಾಗಿದೆ ಭಾರತ: ಕೇಂದ್ರ ಸಚಿವ ಗಡ್ಕರಿ ನೀಡಿದ್ರು ಸುಳಿವು

    ಈ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಅನಗತ್ಯವಾಗಿ ಕಿರುಕುಳ ನೀಡದಂತೆ ಪಾಕಿಸ್ತಾನಕ್ಕೆ ಭಾರತ ಸೋಮವಾರವಷ್ಟೇ ಮನವಿ ಮಾಡಿಕೊಂಡಿತ್ತು. ಇದರ ಬೆನ್ನಲ್ಲೇ ಇವರಿಬ್ಬರೂ ಕಾಣೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಕಾರ್ಯನಿಮಿತ್ತ ರಾಯಭಾರ ಇವರಿಬ್ಬರೂ ಕಚೇರಿಯಿಂದ ಹೊರಹೋಗಿದ್ದರು. ಆದರೆ, ಇಷ್ಟು ಹೊತ್ತಾದರೂ ಅವರು ತಲುಪಬೇಕಾದ ಸ್ಥಳವನ್ನು ತಲುಪಿಲ್ಲ. ಹೀಗಾಗಿ ಪಾಕಿಸ್ತಾನದ ಅಧಿಕಾರಿಗಳೇ ಇವರಿಬ್ಬರನ್ನೂ ಅಪಹರಿಸಿರುವ ಸಾಧ್ಯತೆ ಇದೆ ಎಂದು ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

    ಕರೊನಾ ವೈರಸ್​: ವೈದ್ಯಕೀಯ ಸಂಸ್ಥೆ ನೀಡಿದೆ ಗಾಬರಿ ತರುವ ವಿಷಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts