More

    ಮತ್ತೊಂದು ಮೃಗೀಯ ವರ್ತನೆ: ಗುಂಡೇಟಿಗೆ ಆನೆ ಬಲಿ

    ಚೆನ್ನೈ: ತಮಿಳುನಾಡಿನ ಕೊಯಮತ್ತೂರಿನಲ್ಲಿ ಹೆಣ್ಣಾನೆಯೊಂದು ಗುಂಡೇಡಿಗೆ ಬಲಿಯಾಗಿದೆ.
    ಇಬ್ಬರು ಗುಂಡು ಹಾರಿಸಿ ಆನೆ ಕೊಲೆ ಗೈದಿದ್ದಾರೆ ಎಂದು ಆರೋಪಿಸಲಾಗಿದೆ. ಆ ಪ್ರದೇಶದ ಬಳಿ ಮತ್ತೊಂದು ಆನೆ ಶವ ಕೂಡ ಪತ್ತೆಯಾಗಿದೆ.
    ಕೊಯಮತ್ತೂರು ಅರಣ್ಯ ವಿಭಾಗದ ಮೆಟ್ಟುಪಾಳಯಂ ಮತ್ತು ಸಿರುಮುಗೈ ಅರಣ್ಯ ವ್ಯಾಪ್ತಿಯಲ್ಲಿ ಗುರುವಾರ ಈ ಘಟನೆ ನಡೆದಿದೆ.
    ಹೆಣ್ಣು ಆನೆಗಳಲ್ಲಿ ಒಂದು ಗುಂಡೇಟಿನಿಂದ ಸಾವನ್ನಪ್ಪಿದ್ದರೆ, ಇನ್ನೊಂದು ಆನೆಯ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ.
    ಈ ಘಟನೆ ಗುರುವಾರ ಬೆಳಕಿಗೆ ಬಂದಿದ್ದು, 18 ರಿಂದ 20 ವರ್ಷದೊಳಗಿನ ಹೆಣ್ಣು ಆನೆ ಮೃತಪಟ್ಟಿರುವುದು ಕಂಡುಬಂದಿದೆ. ಮೆಟ್ಟುಪಾಲಯಂ ಅರಣ್ಯ ಶ್ರೇಣಿಯ ಕಂಡಿಯೂರ್ ಅರಣ್ಯದ ಬಳಿ ಇರುವ ತೆಕ್ಕಂಪಟ್ಟಿ ಬಳಿಯ ಕೃಷಿ ಜಮೀನೊಂದರಲ್ಲಿ ಆನೆಯ ಶವ ಪತ್ತೆಯಾಗಿದೆ.
    ಶವಪರೀಕ್ಷೆಯ ಸಮಯದಲ್ಲಿ ಸುಕ್ಕುಗಟ್ಟಿದ ಲೋಹದ ತುಂಡು ಕಂಡುಬಂದಿದೆ.

    ಇದನ್ನೂ ಓದಿ: ಶಿಕ್ಷಕ ನೌಕರಿಯಲ್ಲಿ ವಂಚನೆ ಪ್ರಕರಣ: ಅನಾಮಿಕಾ ಶುಕ್ಲಾ ಆಯ್ತು, ಈಗ ಪ್ರದೀಪ್​​​​​​​​ಕುಮಾರ್ ಸರದಿ

    ಕೊಯಮತ್ತೂರು ಅರಣ್ಯ ವಿಭಾಗದ ಜಿಲ್ಲಾ ಅರಣ್ಯ ಅಧಿಕಾರಿ ಡಿ.ವೆಂಕಟೇಶ್ ಮಾತನಾಡಿ, ಮೃತ ಆನೆಗಳ ಪೈಕಿ ಒಂದಕ್ಕೆ ಎಡ ಕಿವಿಯ ಬಳಿ ಗುಂಡು ಗುರುತು ಇತ್ತು. ಆನೆಯ ಮರಣೋತ್ತರ ವರದಿ ಪ್ರಕಾರ, ಸತ್ತ ಪ್ರಾಣಿಯ ಮೆದುಳಿನಲ್ಲಿ ಸುಕ್ಕುಗಟ್ಟಿದ ತೀಕ್ಷ್ಣ-ಅಂಚಿನ ಲೋಹದ ತುಂಡು ಕಂಡುಬಂದಿದೆ ಎಂದು ಹೇಳಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
    ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದರೂ ಅವರ ಹೆಸರು ಇನ್ನೂ ಬಹಿರಂಗವಾಗಿಲ್ಲ. ವಿಚಾರಣೆಯ ವೇಳೆ ಇಬ್ಬರು ಆನೆಯನ್ನು ಕೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
    ಮತ್ತೊಂದು ಆನೆಯ ಸಾವಿಗೆ ಅನಾರೋಗ್ಯ ಕಾರಣ ಎಂದು ಶಂಕಿಸಲಾಗಿದೆ. ಪಿಟಿಐ ವರದಿಯ ಪ್ರಕಾರ, 20 ವರ್ಷದ ಆನೆ ಅನಾರೋಗ್ಯದಿಂದ ಬಳಲುತ್ತಿದ್ದು, ಮರಣೋತ್ತರ ವರದಿಯನ್ನು ಕಾಯಲಾಗುತ್ತಿದೆ.
    ಕೇರಳದಲ್ಲಿ ಪ್ರಾಣಿಗಳ ಕ್ರೌರ್ಯದಿಂದಾಗಿ ಆನೆ ಮೃತಪಟ್ಟ ಸುಮಾರು ಒಂದು ತಿಂಗಳ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಪಾಲಕ್ಕಾಡ್ ಜಿಲ್ಲೆಯಲ್ಲಿ ಸ್ಫೋಟಕ ತುಂಬಿದ ಅನಾನಸ್ ತಿಂದು ಗರ್ಭಿಣಿ ಆನೆ ಮೃತಪಟ್ಟಿತ್ತು.

    ಇಲ್ಲಸಲ್ಲದ ಆರೋಪ ಮಾಡಿದ ಪಾಕಿಸ್ತಾನಕ್ಕೆ ಭಾರತದ ಖಡಕ್​ ಪ್ರತ್ಯುತ್ತರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts