More

    ಪಬ್‌ಜಿ ಗೇಮ್​ ಬ್ಯಾನ್ ಆಗಿದ್ದಕ್ಕೆ ಟ್ರೋಲ್‌ಗೆ ಒಳಗಾದ ಧೋನಿ!

    ನವದೆಹಲಿ: ಕೇಂದ್ರ ಸರ್ಕಾರ ಭಾರತದಲ್ಲಿ ಪಬ್‌ಜಿ ಗೇಮ್‌ಗೆ ನಿಷೇಧ ಹೇರಿರುವ ಬೆನ್ನಲ್ಲೇ ಟೀಮ್ ಇಂಡಿಯಾ ಮಾಜಿ ನಾಯಕ ಮತ್ತು ಚೆನ್ನೈ ಸೂಪರ್‌ಕಿಂಗ್ಸ್ ನಾಯಕ ಎಂಎಸ್ ಧೋನಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್‌ಗೆ ಒಳಗಾಗಿದ್ದಾರೆ. ಕ್ರಿಕೆಟ್ ನಂತರದಲ್ಲಿ ಧೋನಿ ಅತಿ ಹೆಚ್ಚು ಇಷ್ಟಪಡುತ್ತಿದ್ದ ಆಟ ಪಬ್‌ಜಿ ಆಗಿರುವುದು ಇದಕ್ಕೆ ಕಾರಣವಾಗಿದೆ!

    ಪಬ್‌ಜಿ ಆಟ ಭಾರತದಲ್ಲಿ ದೊಡ್ಡ ಮಾರುಕಟ್ಟೆಯನ್ನೇ ಹೊಂದಿತ್ತು ಮತ್ತು ಮಕ್ಕಳಿಂದ ಹಿರಿಯರ ತನಕ ಹಲವರು ಈ ಆಟವನ್ನು ಆಡುತ್ತಿದ್ದರು. ಈ ಪೈಕಿ ಎಂಎಸ್ ಧೋನಿ ಕೂಡ ಒಬ್ಬರು. ಹೀಗಾಗಿ ಅವರ ನೆಚ್ಚಿನ ಪಬ್‌ಜಿ ಆಟಕ್ಕೆ ನಿಷೇಧ ಹೇರಿರುವುದರಿಂದ ಅಭಿಮಾನಿಗಳು ಅವರು ಮುಂದೇನು ಮಾಡುವರು ಎಂದು ಕಾಲೆಳೆದಿದ್ದಾರೆ. ಅಲ್ಲದೆ ಅವರು ಸದ್ಯ ಐಪಿಎಲ್ ಟೂರ್ನಿಗಾಗಿ ಯುಎಇಯಲ್ಲಿರುವುದರಿಂದ ಪಬ್‌ಜಿ ನಿಷೇಧದ ಬಿಸಿ ಅವರಿಗೆ ತಟ್ಟುವುದಿಲ್ಲ ಎಂದೂ ಹೇಳಲಾಗಿದೆ.

    ಲಾಕ್‌ಡೌನ್ ಸಮಯದಲ್ಲಿ ಧೋನಿ ಬೆಡ್ ಮೇಲೆ ಮಲಗಿ ಪಬ್‌ಜಿ ಆಟವನ್ನು ಆಡುತ್ತಿರುವ ಚಿತ್ರವನ್ನೂ ಅವರ ಪತ್ನಿ ಸಾಕ್ಷಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಜತೆಗೆ ಧೋನಿ ಈಗ ನಿದ್ದೆಯಲ್ಲೂ ಪಬ್‌ಜಿ ಆಟದ ಬಗ್ಗೆಯೇ ಮಾತನಾಡುತ್ತಾರೆ ಎಂದು ತಿಳಿಸಿದ್ದರು.

    ಪಬ್‌ಜಿ ಗೇಮ್​ ಬ್ಯಾನ್ ಆಗಿದ್ದಕ್ಕೆ ಟ್ರೋಲ್‌ಗೆ ಒಳಗಾದ ಧೋನಿ!

    ಇದನ್ನೂ ಓದಿ: ಪಬ್​ಜಿ ಗೇಮ್​ ಬ್ಯಾನ್​: ಟೆನ್ಸೆಂಟ್ ಕಂಪನಿಗಾದ ನಷ್ಟವೆಷ್ಟು ಗೊತ್ತಾ?

    ಧೋನಿ ಅವರಲ್ಲದೆ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಸಹ-ಆಟಗಾರರಾದ ಕೇದಾರ್ ಜಾಧವ್, ದೀಪಕ್ ಚಹಲ್, ಮುಂಬೈ ಇಂಡಿಯನ್ಸ್ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಮತ್ತು ಆರ್‌ಸಿಬಿ ಸ್ಪಿನ್ನರ್ ಯಜುವೇಂದ್ರ ಚಾಹಲ್, ಕೆಕೆಆರ್ ಸ್ಪಿನ್ನರ್ ಕುಲದೀಪ್ ಯಾದವ್, ಸನ್‌ರೈಸರ್ಸ್‌ ಆಟಗಾರ ಮನೀಷ್ ಪಾಂಡೆ ಕೂಡ ಪಬ್‌ಜಿ ಪ್ರಿಯರಾಗಿದ್ದರು ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts