More

    ಭಾರತದ ಸರ್ಕಾರಿ ಮಾಧ್ಯಮಗಳ ಅಕೌಂಟ್​ಗಳನ್ನು ‘ಅಫೀಶಿಯಲ್’ ಎಂದು ಗುರುತಿಸಿದ ಟ್ವಿಟರ್​; ಎಲಾನ್ ಎಫೆಕ್ಟ್?

    ವಾಷಿಂಗ್ಟನ್: ಎಲೋನ್ ಮಸ್ಕ್ ಹೊಸದಾಗಿ ಸ್ವಾಧೀನಪಡಿಸಿಕೊಂಡಿರುವ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್, ಭಾರತದಾದ್ಯಂತ ಬ್ಲೂ ಟಿಕ್ ಚಂದಾದಾರಿಕೆಯನ್ನು ಸಂಗ್ರಹಿಸುವ ಮುನ್ನ ಭಾರತ ಸರ್ಕಾರದ ಅಕೌಂಟ್​ಗಳು ಮತ್ತು ಭಾರತೀಯ ಮಾಧ್ಯಮಗಳನ್ನು ‘ಅಫೀಶಿಯಲ್​’ ಎಂದು ನೇಮಕ ಮಾಡಲು ಪ್ರಾರಂಭಿಸಿದೆ. ಟ್ವಿಟರ್​ನ ನೀತಿಯಲ್ಲಿ ಭಾರಿ ಬದಲಾವಣೆಗಳಾಗುತ್ತಿದ್ದು ಇದನ್ನು ಎಲಾನ್​ ಮಸ್ಕ್​ ಎಫೆಕ್ಟ್ ಎಂದೇ ಕರೆಯಲಾಗುತ್ತಿದೆ.

    ಭಾರತದ ವಿವಿಧ ಸರ್ಕಾರಿ ಸಂಸ್ಥೆಗಳ ಟ್ವಿಟರ್ ಹ್ಯಾಂಡಲ್‌ಗಳಲ್ಲಿ, ‘ಅಫೀಶಿಯಲ್​’ ಎಂದು ಬರೆಯಲಾಗಿದೆ. ಪ್ರಧಾನಿ ಕಾರ್ಯಾಲಯ, ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಟ್ವಿಟ್ಟರ್ ಖಾತೆ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಟ್ವಿಟರ್ ಖಾತೆಯೂ ‘ಅಫೀಶಿಯಲ್’ ಎಂದು ಗುರುತಿಸಲ್ಪಟ್ಟಿದೆ.

    ಮಂಗಳವಾರ (ನ.8) ಟ್ವಿಟರ್‌ನ ಕಾರ್ಯನಿರ್ವಾಹಕ ಎಸ್ತರ್ ಕ್ರಾಫೋರ್ಡ್ ಅವರು ಅಫೀಶಿಯಲ್​ ಖಾತೆಗಳು ಮತ್ತು ನೀಲಿ ಟಿಕ್​ಗಳಿಗೆ ಹಣ ಪಾವತಿಸುವವರ ನಡುವಿನ ಗೊಂದಲವನ್ನು ಕೊನೆಗೊಳಿಸಲು ಎರಡನೇ ಪರಿಶೀಲನಾ ಲೇಬಲ್ ಅನ್ನು ಹೊರತರುವುದಾಗಿ ಘೋಷಿಸಿದರು.

    ಟ್ವಿಟರ್​ನಿಂದ ಪರಿಶೀಲಿಸಲ್ಪಟ್ಟ ಖಾತೆಗಳು ಈಗ ತಮ್ಮ ಯೂಸರ್​ನೇಮ್​ ಕೆಳಗೆ ಅಫೀಶಿಯಲ್​ ಎಂಬ ಲೇಬಲ್‌ ಹೊಂದಿರುತ್ತದೆ. ಈ ಖಾತೆಗಳು ಬೂದು ಬಣ್ಣದ ಚೆಕ್‌ಮಾರ್ಕ್‌ ಹೊಂದಿರುತ್ತವೆ ಎಂದು ಎಸ್ತರ್ ಕ್ರಾಫೋರ್ಡ್ ಮಾಹಿತಿ ನೀಡಿದ್ದಾರೆ.

    ಅಧಿಕೃತ ಖಾತೆಗಳು ಮತ್ತು ಟ್ವಿಟರ್​ನ ಬ್ಲೂ ಟಿಕ್​ ಚಂದಾದಾರರ ನಡುವೆ ವ್ಯತ್ಯಾಸವನ್ನು ಗುರುತಿಸಲು ಬಳಕೆದಾರರಿಗೆ ಈ ಹೊಸ ಲೇಬಲ್ ಸಹಾಯ ಮಾಡಲಿದೆ. ಈ ಹಿಂದೆ ವೆರಿಫೈ ಆಗಿದ್ದ ಎಲ್ಲಾ ಖಾತೆಗಳಿಗೆ ಇನ್ನು ಮುಂದೆ ಅಫೀಶಿಯಲ್​ ಗುರುತು ಇರದೇ ಕೆಲವು ಖಾತೆಗಳು ಮತ್ರ ಈ ಸೌಲಭ್ಯಗಳನ್ನು ಪಡೆಯಲಿವೆ. ಅದಲ್ಲದೇ ಈ ಲೇಬಲ್​ಗಳನ್ನು ಯಾರಿಂದಲೂ ಖರೀದಿಸಲು ಸಾಧ್ಯವಿಲ್ಲ’ ಎಂದು ಕ್ರಾಫೋರ್ಡ್ ಹೇಳಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts