More

    ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವಿಟರ್​ ಖಾತೆಯ ಬ್ಲೂ ಟಿಕ್​ ತೆಗೆದು ಮರುಸ್ಥಾಪನೆ: ಟ್ವಿಟರ್ ಕೊಟ್ಟ ಕಾರಣ ಹೀಗಿದೆ…​

    ನವದೆಹಲಿ: ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಟ್ವಿಟರ್​ ಖಾತೆಯಲ್ಲಿನ ಬ್ಲೂ ಟಿಕ್​ಮಾರ್ಕ್​ (ಅಧಿಕೃತ ಖಾತೆ ಎಂಬ ಸೂಚಕ) ಅನ್ನು ತೆಗೆದುಹಾಕಿದ ಟ್ವಿಟರ್​​ ಸಂಸ್ಥೆ ಕೆಲವೇ ಕ್ಷಣಗಳಲ್ಲಿ ಅದನ್ನು ಮರುಸ್ಥಾಪಿಸಿದೆ.

    ತೆಗೆದುಹಾಕಿದ್ದಕ್ಕೆ ಕಾರಣ ನೀಡಿರುವ ಟ್ವಿಟರ್​, ವೆಂಕಯ್ಯ ನಾಯ್ಡು ಅವರ ಟ್ವಿಟರ್​ ಖಾತೆ ಬಹಳ ದಿನಗಳಿಂದ ನಿಷ್ಕ್ರಿಯಗೊಂಡಿದ್ದರಿಂದ ಅದನ್ನು ತೆಗೆಯಲಾಯಿತೇ ಹೊರತು ಬೇರೆ ಉದ್ದೇಶವಿಲ್ಲ ಎಂದು ಹೇಳುವ ಮೂಲಕ ಮತ್ತೆ ಬ್ಲೂ ಟಿಕ್​​ ಮಾರ್ಕ್​ ಅನ್ನು ಮರುಸ್ಥಾಪಿಸಿದೆ. ಈ ಮೂಲಕ ವಿವಾದ ದೊಡ್ಡದಾಗುವ ಮುನ್ನವೇ ಟ್ವಿಟರ್​ ಜಾಣ ನಡೆಯನ್ನು ಅನುಸರಿಸಿದೆ.

    ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆಯಿಂದ ಕಳೆದ ಜುಲೈ 23ರಂದು ಕೊನೆಯದಾಗಿ ಟ್ವೀಟ್​ ಮಾಡಲಾಗಿದೆ. ಅಂದಿನಿಂದ ಯಾವುದೇ ಚಟುವಟಿಕೆ ಇಲ್ಲದಿದ್ದರಿಂದ ಟ್ವಿಟರ್​ ಬ್ಲೂ ಟಿಕ್​​ ಮಾರ್ಕ್​ ತೆಗೆದುಹಾಕಿತ್ತು ಎಂದು ಉಪರಾಷ್ಟ್ರಪತಿ ಸಚಿವಾಲಯದ ಅಧಿಕೃತ ಟ್ವಿಟರ್ ಖಾತೆಯಿಂದ ಮಾಹಿತಿ ನೀಡಿದೆ.

    ಆದಾಗ್ಯೂ, ಸರ್ಕಾರಿ ಮೂಲಗಳು ಇದನ್ನು ಖಂಡಿಸಿದ್ದು, ದೇಶದ 2ನೇ ಅತಿಮುಖ್ಯ ಸಾಂವಿಧಾನಿಕ ಹುದ್ದೆಯಲ್ಲಿರುವವರ ವಿರುದ್ಧದ ಟ್ವಿಟರ್​ ಕ್ರಮ ಅತಿರೇಕದ್ದು ಎಂದು ಜರಿದಿದಿದ್ದಾರೆ. ಮಾಜಿ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ ಅವರ ಖಾತೆಗಳು 2019 ರಲ್ಲಿ ಅವರ ಮರಣದ ನಂತರವೂ ಪರಿಶೀಲಿಸಲ್ಪಟ್ಟಿವೆ ಎಂದು ಹೇಳುವ ಮೂಲಕ ಟ್ವಿಟರ್​ ವಿರುದ್ಧ ಹಲವರು ಕಿಡಿಕಾರಿದ್ದಾರೆ.

    ದೇಶದಲ್ಲಿ ಬಳಕೆದಾರರ ಗೌಪ್ಯತೆ ವಿಚಾರವಾಗಿ ಸರ್ಕಾರ ಮತ್ತು ಸಾಮಾಜಿಕ ಜಾಲತಾಣ ಸಂಸ್ಥೆಗಳ ನಡುವೆ ನಡೆಯುತ್ತಿರುವ ಕಿತ್ತಾಟದ ನಡುವಿನ ಈ ಬೆಳವಣಿಗೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. (ಏಜೆನ್ಸೀಸ್​)

    ಇಳಿಯುತ್ತಿದೆ ಕರೊನಾ ಸೋಂಕು : 1.2 ಲಕ್ಷ ಹೊಸ ಪ್ರಕರಣಗಳು

    ಅಂಗಡಿಯಿಂದ ಬಂದ ತಾಯಿ ಮಗಳ ಕೋಣೆ ತೆರೆಯುತ್ತಿದ್ದಂತೆ ಕಾದಿತ್ತು ಶಾಕ್​: ಬೆಚ್ಚಿಬೀಳಿಸುವ ಘಟನೆ ಇದು!

    ಯಾರಿಗೂ ಹೇಳದೆ ಮಕ್ಕಳೊಂದಿಗೆ ಮನೆಯಿಂದ ಹೊರಟ ದಂಪತಿಯ ಬದುಕು ದುರಂತ ಅಂತ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts