More

    ಸವಾಲನ್ನು ಅವಕಾಶವಾಗಿ ಪರಿವರ್ತಿಸಿಕೊಳ್ಳಿ

    ವಿಜಯಪುರ: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸಾಫಲ್ಯ ಪಡೆಯಬೇಕೆಂದರೆ ಕೌಶಲ್ಯಗಳು ಅಗತ್ಯ. ಅವುಗಳಲ್ಲಿ ಕ್ರಿಯಾತ್ಮಕ ಚಿಂತನೆ, ವಿಭಿನ್ನವಾದ ಆಲೋಚನೆಗಳನ್ನು ಬಳಸಿಕೊಂಡು ತಮ್ಮಲ್ಲಿರುವ ಶಕ್ತಿ, ಸಾಮರ್ಥ್ಯ, ಕೊರತೆ, ಅವಕಾಶಗಳನ್ನು ಅವಲೋಕಿಸಿದರೆ ಗುರಿ ಮುಟ್ಟುವುದು ಸುಲಭವಾಗುತ್ತದೆ ಎಂದು ಎ.ಎಸ್. ಪಾಟೀಲ ಕಾಲೇಜಿನ ವ್ಯವಹಾರ ನಿರ್ವಹಣೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಲಕ್ಷ್ಮಣ ಪವಾರ ಹೇಳಿದರು.

    ವಿಜಯಪುರ ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ವಾಣಿಜ್ಯಶಾಸ್ತ್ರ ವಿಭಾಗಗಳ ಸಹಯೋಗದಡಿಯಲ್ಲಿ ಶುಕ್ರವಾರ ನಡೆದ ಒಂದು ದಿನದ ‘ಉದ್ಯಮಶೀಲತಾ ಕೌಶಲ್ಯಗಳು’ ವಿಷಯ ಕುರಿತಾದ ಕಾರ್ಯಾಗಾರದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

    ಸಂದರ್ಶನ ಕಲೆ, ಸಂವಹನ ಕೌಶಲ್ಯ, ವಾಕ್ಚಾತುರ್ಯ, ಶ್ರಮ ವಿಭಜನೆ ಮತ್ತು ವೈಶಿಷ್ಟ್ರೀಕರಣಗಳಂತಹ ಹಾಗೂ ಬಾಹ್ಯ ಕಾರ್ಪೋರೇಟ್ ಜಗತ್ತು ನಿರೀಕ್ಷಿಸುವ ಕ್ರಿಯಾಶೀಲತೆ, ಸೃಜನಶೀಲತೆ, ಕುಶಲಗಾರಿಕೆಯನ್ನು ಅಳವಡಿಸಿಕೊಂಡು ಕಠಿಣ ಪರಿಶ್ರಮ, ಸತತ ಅಧ್ಯಯನ, ಸಕಾರಾತ್ಮಕ ಚಿಂತನೆ ಮತ್ತು ಸಾಧಿಸಬಲ್ಲೆ ಎಂಬ ಧೃಢವಾದ ನಂಬಿಕೆಯಿಂದ ಮುನ್ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.

    ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಂ.ಎಸ್. ಖೊದ್ನಾಪುರ ಮಾತನಾಡಿ, ಶಿಕ್ಷಣ ಎಂದರೆ ಕೇವಲ ಓದು, ಬರೆಯುವುದನ್ನು ಕಲಿಯುವುದಲ್ಲ. ಅದು ವ್ಯಕ್ತಿಯಲ್ಲಿ ವಿಷಯ ಜ್ಞಾನ ಒಡಮೂಡಿಸುವುದರೊಂದಿಗೆ ವರ್ತನೆ, ನಡವಳಿಕೆ, ಬದುಕುವ ಕಲೆ, ಕೌಶಲ್ಯ, ಮೌಲ್ಯಗಳು, ನಡೆ-ನುಡಿ, ಆಚಾರ-ವಿಚಾರ, ಸಂಸ್ಕೃತಿ-ಸಂಸ್ಕಾರ, ಜೀವನ ನಿರ್ವಹಣೆಯ ಮೌಲ್ಯಗಳನ್ನು ಮನದಲ್ಲಿ ಬಿತ್ತಿ ಪರಿಪೂರ್ಣ ಮಾನವನನ್ನಾಗಿ ಮಾಡುವುದೇ ನಿಜವಾದ ಶಿಕ್ಷಣದ ಗುರಿಯಾಗಿದೆ. ಹೀಗಾಗಿ ಕೇವಲ ಪದವಿ, ಅಂಕ ಪಡೆಯುವುದರೊಂದಿಗೆ ಜೀವನ ಕೌಶಲ್ಯಗಳನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಅಧ್ಯಕ್ಷತೆ ವಹಿಸಿದ್ದ ಐ.ಕ್ಯೂ.ಎ.ಸಿ. ಸಂಚಾಲಕ ಡಾ. ಸಂತೋಷ ಕಬಾಡೆ, ನೂತನ ರಾಷ್ಟ್ರೀಯ ಶಿಕ್ಷಣ ಪದ್ಧತಿಯಲ್ಲಿ ಅಮೂಲಾಗ್ರ ಸುಧಾರಣೆಗಳಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಬೋಧನೆ- ಕಲಿಕೆಯಲ್ಲಿ ಸಾಮರಸ್ಯ ಸಾಧಿಸುವತ್ತಾ ಕಲಿಕೆಯೊಂದಿಗೆ ಗಳಿಕೆ ಎನ್ನುವಂತಹ ಬದುಕು ರೂಪಿಸಿಕೊಳ್ಳುವ ಯೋಜನೆಗಳನ್ನು ಪರಿಚಯಿಸಿದೆ. ಆ ಮೂಲಕ ವಿದ್ಯಾರ್ಥಿಯು ಕೇವಲ ಸರ್ಕಾರಿ ನೌಕರಿಗಾಗಿ ದಾರಿಹೋಕನಂತೆ ಕಾಯದೇ ತನ್ನಲ್ಲಿರುವ ಪ್ರತಿಭೆ, ಪ್ರಾವಿಣ್ಯತೆ, ನೈಪುಣ್ಯತೆ ಮತ್ತು ಸಜನಾತ್ಮಕತೆಯಿಂದ ಯಾವುದಾದರೂ ಉದ್ಯೋಗ ಕೈಗೊಂಡು ರಾಷ್ಟ್ರದ ಅಭಿವದ್ಧಿಗೆ ಸಹಕಾರಿಯಾಗಿದೆ ಎಂದರು.

    ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಕೌಶಲ್ಯ ಬಗ್ಗೆ ಮಾರ್ಮಿಕವಾಗಿ ಅರಿವು ಮೂಡಿಸಲಾಯಿತು. ಡಾ. ಐ.ಎಸ್.ಶಿವಶರಣರ, ಡಾ. ವ್ಹಿ.ಎ. ಉಘಡೆ ಇತರರಿದ್ದರು. ಉಪನ್ಯಾಸಕಿಯರಾದ ಅಶ್ವಿನಿ ಹೊನಕಟ್ಟಿ ನಿರೂಪಿಸಿದರು. ಆಶಾ ಹಜೇರಿ ಸ್ವಾಗತಿಸಿದರು. ಭಾ ಜೀರಾಳ ಅತಿಥಿಗಳ ಪರಿಚಯಿಸಿದರು. ಶ್ರೇಯಾ ಸೋನಾರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts