More

    ಕಾವ್ಯ ಜನ ಮಾನಸ ಮುಟ್ಟಲಿ

    ವಿಜಯಪುರ: ಕವಿಯಾಗುವ ಮುನ್ನ ಕೇಳುವ ಕಿವಿಯಾಗಬೇಕು. ಇನ್ನೊಬ್ಬರ ನೋವಿಗೆ ಧ್ವನಿಯಾಗಬೇಕು. ಬೇರೊಬ್ಬರ ಭಾವನೆಯನ್ನು ಅರ್ಥಮಾಡಿಕೊಂಡಾದ ಸುಂದರ ಕವಿತೆ ಕಟ್ಟುವುದಕ್ಕೆ ಸಾಧ್ಯವಾಗುತ್ತದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುಸ್ಕೃತ ಕವಿ, ಪ.ಗು. ಸಿದ್ಧಾಪುರ ಹೇಳಿದರು.

    ಗುರುವಾರ ವಿಜಯಪುರ ನಗರದ ಬೆಂಗಳೂರು ಹೋಟೆಲ್ ಸಭಾಂಗಣದಲ್ಲಿ ವರಕವಿ ಬೇಂದ್ರೆಯವರ ಜನ್ಮದಿನ ನಿಮಿತ್ತ ಆಯೋಜಿಸಲಾಗಿದ್ದ ಪಿಡಿಜೆ ಕಾಲೇಜಿನ ಕನ್ನಡ ಉಪನ್ಯಾಸಕ ಸಂತೋಷ ವಿ. ಕುಲಕರ್ಣಿ ವಿರಚಿತ ‘ಸಂಸಾರ ಬಂಡಿ’ ‘ಜುಗಲ್‌ಬಂದಿ‘, ಹಾಗೂ ‘ಮಾತು ಮತಿಸಿದ ಮಹಾಕವಿ’ ಕೃತಿಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿ, ಕಾವ್ಯ ಎನ್ನುವುದು ಅಷ್ಟು ಸುಲಭವಾಗಿ ಎಲ್ಲರಿಗೂ ಒಲಿಯುವುದಿಲ್ಲ. ಪ್ರಕಟಿತ ಕೃತಿಗಳು ಜನ ಮಾನಸವನ್ನು ಮುಟ್ಟಿದಾಗ ಕೃತಿ ರಚಿಸಿದ್ದಕ್ಕೂ ಸಾರ್ಥಕತೆಯಾಗುತ್ತದೆ ಎಂದರು.

    ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ ಕುರಿ ಕಾರ್ಯಕ್ರಮ ಉದ್ಘಾಟಿಸಿ, ಕನ್ನಡ ಪುಸ್ತಕಗಳ ಓದು ಜ್ಞಾನಾಭಿವೃದ್ಧಿಗೆ ಪೂರಕ. ಲೇಖಕ ಸಂತೋಷ ಕುಲಕರ್ಣಿಯವರು ರಚಿಸಿರುವ ಕೃತಿಗಳು ಸಮಾಜವನ್ನು ಬದುಕನ್ನು ಅರ್ಥೈಸಿಕೊಳ್ಳಲು ಸಹಕಾರಿ ಎಂದರು.

    ದರಬಾರ ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ಗಿರೀಶ ಮಣ್ಣೂರ, ಪಿಡಿಜೆ ಕಾಲೇಜಿನ ಪ್ರಾಚಾರ್ಯೆ ಡಿ.ಕೆ. ಕುಲಕರ್ಣಿ ಹಾಗೂ ತಳೆವಾಡ ಗ್ರಾಮ ಪಂಚಾಯಿತಿ ಸದಸ್ಯ ಸಿದ್ದು ದೇಸಾಯಿ ಬಮರಡ್ಡಿ, ಸಂತೋಷ ಕುಲಕರ್ಣಿ ಮಾತನಾಡಿದರು.

    ಸಾಹಿತಿ, ಉಪನ್ಯಾಸಕ ಆರ್.ಎಸ್. ಪಟ್ಟಣಶೆಟ್ಟಿ, ಮುಸ್ತಾಕ ಮಲಘಾಣ, ಮಂಜುನಾಥ ಮ. ಜುನಗೊಂಡ, ಕ್ರಮವಾಗಿ ಸಂಸಾರ ಬಂಡಿ, ಜುಗಲ್‌ಬಂದಿ ಹಾಗೂ ಮಾತು ಮತಿಸಿದ ಮಹಾಕವಿ ಕೃತಿಗಳನ್ನು ಪರಿಚಯಿಸಿದರು. ತನು ಫೌಂಡೇಷನ್ ಅಧ್ಯಕ್ಷ ವಿಜುಗೌಡ ಕಾಳಶೆಟ್ಟಿ, ಮನು ಪತ್ತಾರ, ಭಾಗೇಶ ಮುರಡಿ, ಅವಿನಾಶ ಅಥರ್ಗಾ, ವಿಷ್ಣು, ಶೇಖರ ಇತರರು ಉಪಸ್ಥಿತರಿದ್ದರು. ಹಿರಿಯ ಗಾಯಕ ಪಾಂಡುರಂಗ ಕುಲಕರ್ಣಿ ಗಾಯನ ಪ್ರಸ್ತುತಪಡಿಸಿದರು. ಹೆಚ್.ಜೆ. ದೇಸಾಯಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts