More

    ಸಂಗೀತ ಮತ್ತು ಲಯದೊಂದಿಗೆ ಸಂಗೀತಗಾರನ ಪ್ಯಾರಾಗ್ಲೈಡಿಂಗ್​ ಸಾಹಸ

    ನವದೆಹಲಿ: ಪ್ಯಾರಾಗ್ಲೈಡಿಂಗ್​ ಎಂದರೆ ಅದೊಂದು ರೋಮಾಂಚಕಾರಿ ಅನುಭವ. ನಿರ್ದಿಷ್ಟವಾದ ಎತ್ತರದಿಂದ ಗಾಳಿಯಲ್ಲಿ ತೇಲುತ್ತಾ, ನೆಲದತ್ತ ಸಾಗುವಾಗ ಹಕ್ಕಿಗಳಂತೆ ಹಾರಾಡಿದ ಅನುಭೂತಿಯನ್ನು ಇದು ಒದಗಿಸಿಕೊಡುತ್ತದೆ. ಆಕಾಶದಲ್ಲಿ ತೇಲುತ್ತಿರುವಾಗ ಇರುವೆಗಳಂತೆ ಕಾಣುವ ಜನ, ಕಟ್ಟಡ, ವಾಹನಗಳ ಸಾಲು ಕೆಳಗೆ ಬರುತ್ತಿರುವಂತೆ ದೊಡ್ಡದಾಗುತ್ತಾ, ವಾಸ್ತವ ಜಗತ್ತಿಗೆ ನಮ್ಮನ್ನು ಕರೆತರುತ್ತವೆ.

    ಇಂಥ ಸಾಹಸ ಮಾಡುತ್ತಾ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವುದು, ಕೆರೆ, ನದಿ, ತೊರೆಗಳ ವಿಶಾಲತೆಯನ್ನು ಒಮ್ಮೆಲೆ ಕಣ್ತುಂಬಿಕೊಳ್ಳವುದು ಕೂಡ ಪ್ಯಾರಾಗ್ಲೈಡಿಂಗ್​ನಲ್ಲಿ ಸಿಗುವ ವಿಶಿಷ್ಠ ಅನುಭವ. ಇದನ್ನು ಹೊರತುಪಡಿಸಿ ಗಾಳಿಯ ಹಿಮ್ಮೇಳದಲ್ಲಿ ಡೋಲು ಬಾರಿಸುತ್ತಾ, ಹಾಡುತ್ತಾ ಆಕಾಶದಲ್ಲಿ ತೇಲುವುದು ಬೇರೆಯದ್ದೇ ಆದ ಅನುಭವವನ್ನು ಒದಗಿಸಿಕೊಡುತ್ತದೆ. ಟರ್ಕಿಯ ಈ ಸಂಗೀತಗಾರ ಮಾಡಿದ್ದು ಅದನ್ನೇ.

    ಟರ್ಕಿಯ ಟೆಕಿರ್​ಡಾಗ್​ ಪ್ರಾಂತ್ಯದಲ್ಲಿ ಅಹ್ಮದ್​​ ಶೇಖ್​​ ಎಂಬ ಸಂಗೀತಗಾರ ಡೋಲಿನೊಂದಿಗೆ ಪ್ಯಾರಾಗ್ಲೈಡಿಂಗ್​ ಮಾಡುತ್ತಾ, ಅದನ್ನು ಬಾರಿಸಿಕೊಂಡು ಹಾಡು ಹೇಳಿದ್ದು ನೆಟ್ಟಿಗರಿಗೆ ಸಖತ್​ ಖುಷಿ ಕೊಟ್ಟಿದೆ. ಹಾಗಾಗಿಯೇ ಟ್ವಿಟ್ಟರ್​ನಲ್ಲಿ ಅಹ್ಮದ್​ ಅವರ ವಿಡಿಯೋ ಬರುತ್ತಿದ್ದಂತೆ ಅದನ್ನು ಸಹಸ್ರಾರು ಸಂಖ್ಯೆಯಲ್ಲಿ ಶೇರ್​ ಮಾಡಿ, ಲೈಕ್​ ಕೊಟ್ಟು ಸಂಭ್ರಮಿಸಿದ್ದಾರೆ.

    ಇದನ್ನೂ ಓದಿ: ಮೌಂಟನ್​ ಮ್ಯಾನ್​ ದಶರಥ ಮಾಂಜಿಗೂ ಸೋನು ಸೂದ್​ ಅಭಯ!

    ಅಂದಾಜು 600 ಮೀಟರ್​ ಎತ್ತರದಲ್ಲಿ ಸರೋವರದ ಮೇಲೆ ಪ್ಯಾರಾಗ್ಲೈಡಿಂಗ್​ ಮಾಡುತ್ತಿರುವ ಅವರು ಡೋಲು ಬಾರಿಸಿಕೊಂಡು ಟರ್ಕಿ ಭಾಷೆಯ ಹಾಡು ಹಾಡಿಕೊಂಡು ಸಂಭ್ರಮಿಸಿದ್ದಾರೆ. ಅಷ್ಟು ಎತ್ತರದಲ್ಲಿ ಹಾರುತ್ತಿದ್ದರೂ ಸ್ವಲ್ಪವೂ ಹೆದರದ ಅಹ್ಮದ್​ ತಮ್ಮ ಪಾಡಿಗೆ ತಾವು ಡೋಲು ಬಾರಿಸಿಕೊಂಡು ಹಾಡು ಹೇಳಿದ್ದ ನೆಟ್ಟಿಗರ ಮೆಚ್ಚುಗೆಗೆ ಪ್ರಮುಖ ಕಾರಣವಾಗಿದೆ.

    ಇಂಥ ಸಾಹಸ ಮಾಡಲು ಎಂಟೆದೆ ಬೇಕು. ನಾನೇನಾದರೂ ಅಷ್ಟು ಎತ್ತರಕ್ಕೆ ಡೋಲು ಕೊಂಡೊಯ್ದಿದ್ದರೆ, ಭಯಕ್ಕೆ ಡೋಲು ಬಡಿಯುವ ಕೋಲನ್ನೇ ಬೀಳಿಸಿಬಿಡುತ್ತಿದ್ದೆ ಎಂದು ಹೇಳುವ ಮೂಲಕ ನೆಟ್ಟಿಗರೊಬ್ಬರು ಅಹ್ಮದ್​ ಅವರ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ. ಇದೇ ರೀತಿ ಇನ್ನೂ ಹಲವರು ಕಮೆಂಟ್​ ಮೇಲೆ ಕಮೆಂಟ್​ ಮಾಡಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

    VIDEO| ನಾನು ಒಳ್ಳೆಯ ಹುಡುಗಿಯಲ್ಲ, ನನಗೆ ದಯಾಮರಣ ಪಾಲಿಸಿ: ನಟಿ ಜಯಶ್ರೀ ರಾಮಯ್ಯ ಅಳಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts