More

    ತುಂಗಭದ್ರಾ ಡ್ಯಾಂ ಹೊರಹರಿವು ಇಳಿಕೆ: ನದಿ ಪಾತ್ರದಲ್ಲಿ ಪ್ರವಾಹ ಮಟ್ಟ ಕಡಿಮೆ, ನಿಟ್ಟುಸಿರು ಬಿಟ್ಟ ಜನರು

    ಹೊಸಪೇಟೆ: ತಾಲ್ಲೂಕಿನ ತುಂಗಭದ್ರಾ ಜಲಾಶಯದ ಹೊರಹರಿವು ಕಡಿಮೆಯಾಗಿದ್ದರಿಂದ ನದಿ ಪಾತ್ರದಲ್ಲಿ ಅಲ್ಪ ಪ್ರಮಾಣದಲ್ಲಿ ಪ್ರವಾಹ ಮಟ್ಟ ಕಡಿಮೆಯಾಗಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ.

    ತುಂಗಭದ್ರಾ ಜಲಾಶಯ 1633 ಅಡಿ ಎತ್ತರವಿದೆ. ಇಂದಿನ ನೀರಿನ ಮಟ್ಟ 1630.12 ಅಡಿಗೆ ತಲುಪಿದೆ. 105.788 ಟಿಎಂಸಿ ಸಾಮರ್ಥ್ಯ ಪೈಕಿ 94.415 ಟಿಎಂಸಿ ನೀರು ಸಂಗ್ರಹಿಸಲಾಗಿದೆ. 1,32,365 ಕ್ಯೂಸೆಕ್ ಒಳ ಹರಿವುದು ಇದ್ದು, 1,44,195 ಕ್ಯೂಸೆಕ್ ನೀರು ಹೊರ ಹರಿಸಲಾಗಿದೆ.

    ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಶನಿವಾರ ಜಲಾಶಯದ ಒಳ ಮತ್ತು ಹೊರ ಹರಿವು ಕಡಿಮೆಯಾಗಿದೆ. ಕಂಪ್ಲಿ ಸೇತುವೆಯಲ್ಲಿ ಪ್ರವಾಹ ಮಟ್ಟ ತಗ್ಗಿದೆಯಾದರೂ, ಸಂಚಾರಕ್ಕೆ ಮುಕ್ತವಾಗಿಲ್ಲ. ಈಗಾಗಲೇ ಜಲಾವೃತಗೊಂಡಿರುವ ಹಂಪಿಯ ಶ್ರೀ ಕೋದಂಡರಾಮ ದೇವಸ್ಥಾನ, ಪುರಂದರ ಮಂಟಪ, ಚಕ್ರತೀರ್ಥರ ಸಾಲು ಮಂಟಪಗಳು ಪ್ರವಾಹದಿಂದ ಮುಕ್ತವಾಗಿಲ್ಲ.

    ಹಮ್ಮಿಗಿ ಬ್ಯಾರೇಜ್‌ನ 20 ಗೇಟ್‌ಗಳಿಂದ ನೀರು ಬಿಡುಗಡೆ
    ಗದಗ: ತುಂಗಭದ್ರಾ ನದಿ ಹರಿವು ಹೆಚ್ಚಳವಾಗಿದ್ದು ಹಮ್ಮಿಗಿ ಬ್ಯಾರೇಜ್‌ನ 20 ಗೇಟ್‌ಗಳಿಂದ 1,73,961 ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದೆ. ಮುಂಡರಗಿ ತಾಲೂಕಿನ ವಿಠಲಾಪೂರ ಗ್ತಾಮ ಮನೆಗಳ ಹತ್ತಿರ ನೀರು ಬಂದಿದ್ದು ಗ್ರಾಮಸ್ಥರು ಪ್ರವಾಹ ಭೀತಿಯಲ್ಲಿದ್ದಾರೆ. ನದಿಗೆ ನೀರು ಹರಿಬಿಡುತ್ತಿರುವುದರಿಂದ ನದಿ ಪಾತ್ರದ ಹಲವು ಜಮೀನುಗಳು ಜಲಾವೃತಗೊಂಡಿವೆ. ಕೊರ್ಲಹಳ್ಳಿ, ಗಂಗಾಪೂರ ಭಾಗದಲ್ಲಿ ಭತ್ತ, ಕಬ್ಬು ಮತ್ತಿತರ ಬೆಳೆಗಳು ಜಲಾವೃತಗೊಂಡಿವೆ. ಮುಂಡರಗಿ- ಹೂವಿನಹಡಗಲಿ ಸಂಪರ್ಕ ಕಲ್ಪಿಸುವ ಕೊರ್ಲಹಳ್ಳಿ ಸೇತುವೆ ಅಂಚಿಗೆ ನೀರು ಬಂದಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ.

    ಮಧ್ಯರಾತ್ರಿ ನಿದ್ದೆಗಣ್ಣಿನಲ್ಲಿ ಸರ್ಕಾರ ಹೊರಡಿಸಿಬಿಡ್ತಾ ಆದೇಶ? ದೇವ್ರೇ ನೀನೇ ಕನ್ನಡ ಕಾಪಾಡಪ್ಪ ಅಂತಿದ್ದಾರೆ ನೆಟ್ಟಿಗರು!

    ವರ್ಷದ ಸಾಧನೆ ಕುರಿತು ಜು.28ಕ್ಕೆ ಬೆಂಗ್ಳೂರಲ್ಲಿ ಸರ್ಕಾರಿ, ದೊಡ್ಡಬಳ್ಳಾಪುರದಲ್ಲಿ ಪಕ್ಷದ ಕಾರ್ಯಕ್ರಮ: ಸಿಎಂ ಬೊಮ್ಮಾಯಿ‌ ಹೇಳಿಕೆ

    BBK 9: ಜನರ ಗಮನ ಸೆಳೆಯಲು ಬಿಗ್​ಬಾಸ್​ ತಂಡ ಮಾಡಿರುವ ಹೊಸ ಪ್ಲಾನ್​ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts